ವೀರಾಜಪೇಟೆ, ಡಿ. ೨೭: ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆಗಳಿರುತ್ತವೆ. ಪೋಷಕರು ಅದನ್ನು ಗುರುತಿಸಿ ಬೆಳೆಸುವ ಕೆಲಸವಾಗಬೇಕು ಎಂದು ಬಾಳೆಲೆ ವಿಜಯಲಕ್ಷಿö್ಮÃ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಸಾಹಿತಿಗಳಾದ ಡಾ. ಜೆ. ಸೋಮಣ್ಣ ಹೇಳಿದರು.
ಇಲ್ಲಿನ ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಾರ್ಷಿಕೋತ್ಸವ ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದ ಜೆ. ಸೋಮಣ್ಣ ಅವರು, ಮಕ್ಕಳಿಗೆ ಪೋಷಕರು ದಾರಿ ದೀಪವಾದರೆ ಶಿಕ್ಷಕರು ಸಮಾಜದ ವ್ಯಕ್ತಿಗಳಾಗಿ ಸೃಷ್ಟಿಮಾಡುವ ಶಕ್ತಿಯಾಗಿರುತ್ತಾರೆ. ಮಕ್ಕಳ ಆಶೋತ್ತರಗಳಿಗೆ ಪ್ರತಿಸ್ಪಂದಿಸುವ ಪೋಷಕರು. ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಲು ಮುಂದಾಗಬಾರದು. ಎಲ್ಲಾ ಮಕ್ಕಳಲ್ಲಿ vನ್ನದೆಯಾದ ಪ್ರತಿಭೆಗಳು ಅಡಕವಾಗಿರುತ್ತವೆ. ಪ್ರತಿಭೆಯನ್ನು ಗುರುತಿಸಿ ಪ್ರತಿಭೆಗೆ ಅನುಗುಣವಾಗಿ ಮಾರ್ಗ ಕಲ್ಪಿಸುವಂತಾಗಬೇಕು. ಮಕ್ಕಳಲ್ಲಿ ಜಾತಿ ಧರ್ಮದ ವಿಷ ಬೀಜವನ್ನು ಬಿತ್ತದಿರಿ ಹೊರ ಪ್ರಪಂಚದಲ್ಲಿ ವಿಹರಿಸಲು ಬಿಡಿ. ಮಕ್ಕಳು ಶಾಲೆ ಪರಿಸರದಲ್ಲಿ ಕಲಿಯು ವುದಕ್ಕಿಂತ ಹೆಚ್ಚು ಸಮಾಜದೊಂದಿಗೆ ಬೆರೆತು ಕಲಿಕೆಯನ್ನು ಅಭಿವೃದ್ಧಿಪಡಿಸಿ ಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳ ಪ್ರಗತಿಗಾಗಿ ಹೆಚ್ಚು ಸಮಯ ಮೀಸಲಿಡಿ ಎಂದು ತಮ್ಮ ಭಾಷಣದಲ್ಲಿ ಹೇಳಿದರು.
ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಪಟ್ಟಡ ಪೂವಣ್ಣ ಮಾತನಾಡಿ, ಅನೇಕ ಮಕ್ಕಳಲ್ಲಿ ದುಗುಡು, ದುಮ್ಮಾನಗಳು ಇರುವುದು ಸಹಜ. ಸಮಾಜದಲ್ಲಿ ಬದುಕು ಕಂಡುಕೊಳ್ಳಲು ಹೆದರಿಕೆ ಹಿಂಜರಿಕೆಯನ್ನು ಬದಿಗೊತ್ತಿ ಮುನ್ನುಗ್ಗಬೇಕು ಎಂದರು. ಪ್ರಗತಿ ಶಾಲೆಯ ಆಡಳಿತಾಧಿಕಾರಿ ಮಾದಂಡ ಪಿ. ತಿಮ್ಮಯ್ಯ ಮಾತನಾಡಿದರು. ಪ್ರಗತಿ ಪ್ರೌಢಶಾಲೆಯ ಸಂಸ್ಥಾಪಕ ಮಾದಂಡ ಪೂವಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ಸಹ ಸಂಯೋಜಕ ಅಯ್ಯಪ್ಪ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ಶಾಲೆಯ ವಿದ್ಯಾರ್ಥಿಗಳಿಂದ ನಾಡು ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಗತಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಮಲ ಸ್ವಾಗತಿಸಿದರು. ನೀತು ಮತ್ತು ಭಾಗ್ಯವತಿ ಕಾರ್ಯಕ್ರಮ ನಿರೂಪಿ ಸಿದರು. ಮುಖ್ಯೋಪಾಧ್ಯಾಯಿನಿ ಪ್ರತಿಮಾ ವಂದಿಸಿದರು.