ಮಡಿಕೇರಿ, ಡಿ. ೨೭: ಬಿಟ್ಟಂಗಾಲದ ದೇವಯ್ಯ ಮೆಮೋರಿಯಲ್ ಪ್ರಿಪರೇಟರಿ ಶಾಲೆಯ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತು. ೫ ರಿಂದ ೧೦ ವರ್ಷದ ವಿದ್ಯಾರ್ಥಿಗಳು ಬೊಳಕಾಟ್, ಕಂಸಾಳೆ, ಗುಂಪು ನೃತ್ಯ, ಭರತನಾಟ್ಯ ಹಾಗೂ ದೈಹಿಕ ವ್ಯಾಯಾಮಗಳಿಂದ ವೀಕ್ಷಕರನ್ನು ಮನರಂಜಿಸಿದರು.
ವಿದ್ಯಾರ್ಥಿಗಳ ಕೈಹೆಣಿಗೆ, ಕೈ ಹೊಲಿಗೆ ಹಾಗೂ ಕರಕುಶಲ ಕಲೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಬಣ್ಣದ ಕಾಗದಗಳಿಂದ ತಯಾರಿಸಲಾಗಿದ್ದ ಕಲೆಗಳನ್ನು ಅಲಂಕಾರಕ್ಕಾಗಿ ಬಳಸಲಾಗಿತ್ತು. ವಿದ್ಯಾರ್ಥಿಗಳು ನಟಿಸಿದ್ದ ಕನ್ನಡ ಮತ್ತು ಇಂಗ್ಲೀಷ್‌ನ ಕಿರು ನಾಟಕಗಳು ವೀಕ್ಷಕರಿಗೆ ಉತ್ತಮ ಸಂದೇಶಗಳನ್ನು ನೀಡಿದವು. ಇಂಗ್ಲೀಷ್‌ನ ಕಿರು ನಾಟಕವು ಭೂಮಿಯ ಹಿಂದಿನ ಮತ್ತು ಪ್ರಸ್ತುತ ಪರಿಸ್ಥಿತಿಗಳನ್ನು ತೋರಿಸಿತು.
ಶಾಲೆಯು ಕಸದ ಪ್ರಮಾಣವನ್ನು ಕಡಿಮೆಗೊಳಿಸುವ ನೀತಿಯನ್ನು ಅನುಸರಿಸುತ್ತಿದೆ. ವಿದ್ಯಾರ್ಥಿಗಳು ಕಸ ನಿರ್ವಹಣಾ ಶಾಸ್ತç (ಗಾರ್ಬಾಲಜಿ)ವನ್ನು ಕಲಿಯುತ್ತಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಲೆಯ ಹಳೆಯ ವಿದ್ಯಾರ್ಥಿ, ಭಾರತೀಯ ಸೇನೆಯ ಮಾಜಿ ಅಧಿಕಾರಿ ತೀತೀರ ಹೇಮಂತ್ ಪೊನ್ನಪ್ಪ ಭಾಗವಹಿಸಿದ್ದರು.