ವೀರಾಜಪೇಟೆ, ಡಿ. ೨೬: ವೀರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದಲ್ಲಿರುವ ಶ್ರೀ ಅಯ್ಯಪ್ಪ ಭಗವತಿ ದೇವಸ್ಥಾನಕ್ಕೆ ವರ್ಷಂಪ್ರತಿ ಬರುವ ಶ್ರೀ ಬೈತೂರು ದೇವರು ತಾ. ೩೧ ರಂದು ಆಗಮಿಸಿ ದೇವಸ್ಥಾನದಲ್ಲಿ ತಂಗಲಿದ್ದಾರೆ. ತಾ. ೧.೧.೨೦೨೩ ರಂದು ಭಗವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಆಶೀರ್ವಚನ ನೀಡಲಿದೆ.
ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಅಮ್ಮಣಕುಟ್ಟಂಡ ಜಿ. ಬೋಪಣ್ಣ ತಿಳಿಸಿದ್ದಾರೆ.