ಮಡಿಕೇರಿ, ಡಿ. ೨೭: ನಗರದ ಹೊಸ ಬಡಾವಣೆಯಲ್ಲಿರುವ ‘ರಶ್ಮಿದೀಪ ಇನ್ಸಿ÷್ಟಟ್ಯೂಟ್ ಆಫ್ ಎನ್.ಟಿ.ಟಿ.ಯಲ್ಲಿ ಪದವಿ ಪ್ರಮಾಣ ಪತ್ರ ವಿತರಣೆ ಸಮಾರಂಭ ನಡೆಯಿತು.

ಕೇಂದ್ರದ ಮುಖ್ಯಸ್ಥೆ ರಶ್ಮಿದೀಪ ಎನ್.ಟಿ.ಟಿ. ಪದವಿಯ ಮಹತ್ವ ಹಾಗೂ ಮುಂದಿನ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಪದವಿಯಲ್ಲಿ ಆಲ್ ಇಂಡಿಯಾ ರ‍್ಯಾಂಕಿAಗ್‌ನಲ್ಲಿ ೬ನೇ ರ‍್ಯಾಂಕ್ ಪಡೆದ ಬಿ.ಪಿ. ಚೈತನ್ಯ ಹಾಗೂ ೮ನೇ ರ‍್ಯಾಂಕ್ ಪಡೆದ ಸರವತ್ ಸನಾ ಅವರನ್ನು ಗೌರವಿಸಲಾಯಿತು.