ಕುಶಾಲನಗರ, ಡಿ. ೨೭: ಜನವರಿ ೧೮ ರಿಂದ ೨೩ ರವರೆಗೆ ಒಂದು ವಾರದ ಕಾಲ ನಡೆಯಲಿರುವ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥವನ್ನು ಕುಶಾಲನಗರದಲ್ಲಿ ಸ್ವಾಗತಿಸಲಾಯಿತು.
ಕುಶಾಲನಗರ ಪುರಸಭಾ ಅಧ್ಯಕ್ಷ ಜಯವರ್ಧನ, ರಥದಲ್ಲಿನ ಹಿರಿಯ ಶ್ರೀಗಳಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಮಾಲೆ ಸಮರ್ಪಿಸಿದರು.
ಸುತ್ತೂರು ಜಾತ್ರೆಯ ಪ್ರಚಾರ ಸಮಿತಿ ಸಂಚಾಲಕ ಬಿ.ಆರ್. ಪಂಚಾಕ್ಷರಿ, ಮಠದ ಪರಂಪರೆ ಹಾಗೂ ಜಾತ್ರಾ ಉದ್ದೇಶಗಳ ಬಗ್ಗೆ ವಿವರಿಸಿದರು.
ವೀರಶೈವ ಸಮಾಜದ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿದರು.
ಕುಶಾಲನಗರ ಡಿವೈಎಸ್ಪಿ ಆರ್.ವಿ. ಗಂಗಾಧರ್, ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಪುರಸಭಾ ಸದಸ್ಯ ಸುರೇಶ್, ವೀರಶೈವ ಸಮಾಜದ ಜಿಲ್ಲಾ ಕಾರ್ಯದರ್ಶಿ ಶಾಂಬಶಿವಮೂರ್ತಿ, ಕುಶಾಲನಗರ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಮಧುಸೂದನ್, ಪ್ರಮುಖರಾದ ಬಿ.ನಟರಾಜು, ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಪಿ. ಮಹದೇವಪ್ಪ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಅಕ್ಕನ ಬಳಗದ ಅಧ್ಯಕ್ಷೆ ಕಮಲಮ್ಮ, ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಲೇಖನಾ, ಡಿಎಸ್ಎಸ್ ಸಂಘಟನೆಯ ಮುಖಂಡ ಕೆ.ಬಿ. ರಾಜು, ಮೊದಲಾದವರಿದ್ದರು.