ಮಡಿಕೇರಿ, ಡಿ. ೨೬: ಕೆ.ನಿಡುಗಣೆ ಗ್ರಾಮ, ಕೂಟುಹೊಳೆ ಬಳಿಯ ಕುಂದುಮುಡಿ ಮಾರಿಯಮ್ಮ ದೇವಸ್ಥಾನದಲ್ಲಿ ಮಾರಿಯಮ್ಮ ದೇವರ ನೂತನ ವಿಗ್ರಹ ಪ್ರತಿಷ್ಠಾಪನಾ ಅಷ್ಠಬಂಧ ಬ್ರಹ್ಮಕಲಶೋತ್ಸವ ತಾ. ೨೯ರಂದು ಬೆಳಿಗ್ಗೆ ೧೧.೫೨ಕ್ಕೆ ಜರುಗಲಿದೆ. ಕಾಂತೂರು ನಾರಾಯಣ ತಂತ್ರಿಯವರು ಪೂಜಾ ವಿಧಿ- ವಿಧಾನ ನೆರವೇರಿಸಲಿದ್ದಾರೆ.
ತಾ. ೨೮ರಂದು ಸ್ವಸ್ತಿ ಪುಣ್ಯಾಹ, ಮಧ್ಯಾಹ್ನ ೩ ಗಂಟೆಗೆ ಆಚಾರ್ಯ ಆಗಮನ, ೪ ಗಂಟೆಗೆ ಅಂಕುರಾ ಪುಣ್ಯ ಪೂಜೆ, ೫ ಗಂಟೆಗೆ ಪ್ರತಿಷ್ಠ ಕಲಶ, ರಾತ್ರಿ ೭ ಗಂಟೆಗೆ ವಾಸ್ತು ಹೋಮ, ೮ ಗಂಟೆಗೆ ರಾಕ್ಷೆÆÃಘ್ನ ಹೋಮ, ೯ ಗಂಟೆಗೆ ವಾಸ್ತು ಬಲಿ, ೧೦ ಗಂಟೆಗೆ ಬಲಿ ಹರಣ, ೧೦.೩೦ಕ್ಕೆ ಮಹಾಪೂಜೆ ನಡೆಯಲಿದೆ.
ತಾ. ೨೯ರಂದು ಮಹಾಗಣಪತಿ ಹೋಮ, ದುರ್ಗಾ ಹೋಮ, ಪ್ರತಿಷ್ಠಾ ಹೋಮ, ಪ್ರತಿಷ್ಠಾಪನೆ ಬಳಿಕ ೧೨.೩೦ಕ್ಕೆ ಮಂಗಳಾರತಿ, ತೀರ್ಥ ಪ್ರಸಾದವಿರುತ್ತದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.