ಕೂಡಿಗೆ, ಡಿ. ೨೭: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಗೋಟೆ ಸಮೀಪ ಹರಿಯುವ ಹಾರಂಗಿ ಎಡ ದಂಡೆ ನಾಲೆಯ ಬಳಿ ಜೂಜಾಡುತ್ತಿದ್ದ ಐವರನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂದಿಸಿದ್ದಾರೆ.
ಹಾರAಗಿ ನಾಲೆಯ ಬಳಿ ೬ ಮಂದಿ ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ತಂಡ ದಾಳಿ ನಡೆಸಿ ಐವರನ್ನು ಬಂದಿಸಿದ್ದು ಒಬ್ಬ ಪರಾರಿಯಾಗಿದ್ದಾನೆ.
ಬಂದಿತರಿAದ ಜೂಜಿಗೆ ಬಳಸಿದ್ದ ೭೪೭೦ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.