ಸಿದ್ದಾಪುರ, ಡಿ. ೨೬: ಸಿದ್ದಾಪುರ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಸಲಗಗಳನ್ನು ಸೆರೆ ಹಿಡಿಯಲು ಸಾಕಾನೆಗಳು ಕಾರ್ಯಾಚಣೆಯಲ್ಲಿ ತೊಡಗಿಸಿ ಕೊಳ್ಳಲು ತಯಾರಾಗಿದೆ. ಕಾಡಾನೆಗಳನ್ನು ಸೆರೆ ಹಿಡಿಯುವಲ್ಲಿ ಅನುಭವವನ್ನು ಹೊಂದಿರುವ ಅಭಿಮಾನಿ ಹಾಗೂ ಭೀಷ್ಮ ಸೇರಿದಂತೆ ನಾಲ್ಕು ಸಾಕಾನೆಗಳು ಲಾರಿಯ ಮೂಲಕ ಸಿದ್ದಾಪುರದ ಕರಡಿಗೋಡಿಗೆ ಆಗಮಿಸಿವೆ. ಇದರೊಂದಿಗೆ ಮಾವುತರು, ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದಾರೆ. ಕರಡಿಗೋಡಿನಲ್ಲಿ ಬೀಡು ಬಿಟ್ಟಿರುವ ಕಾರ್ಯಾಚರಣೆ ತಂಡವು ಸಲಗದ ಗುರುತನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಸಲಗವನ್ನು ಕೆಡ್ಡಾಕ್ಕೆ ಬೀಳಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
-ವಾಸು