ಶನಿವಾರಸಂತೆ, ಡಿ. ೨೬: ಶನಿವಾರಸಂತೆ ಪೊಲೀಸ್ ಠಾಣೆಗೆ ಹಾಸನ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪೂಜ್ಯಾ ಅವರು ಕಳುಹಿಸಿದ ಮಾಹಿತಿ ಅನ್ವಯ ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬರು (೩೦) ಶನಿವಾರ ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ದಾಖಲಿಸುವವರೆಗೂ ಜೊತೆಯಲ್ಲಿದ್ದ ಸಹಚರ ನಂತರ ವಾಪಾಸ್ಸು ಬಂದಿಲ್ಲ. ಮೃತ ದೇಹ ಶವಾಗಾರದಲ್ಲಿ ಇದ್ದು, ಮಾಹಿತಿಯಲ್ಲಿ ಶನಿವಾರಸಂತೆ ಪೊಲೀಸ್ ಠಾಣೆ, ಕೊಡಗು ಜಿಲ್ಲೆ ಎಂದು ನಮೂದಿಸಲಾಗಿದೆ. ಆದ್ದರಿಂದ ಕಾನೂನು ಕ್ರಮ ಜರುಗಿಸುವಂತೆ ವೈದ್ಯಾಧಿಕಾರಿ ಕೋರಿದ್ದು, ಅದರಂತೆ ಭಾನುವಾರ ಶನಿವಾರಸಂತೆ ಠಾಣೆಯ ಹೆಡ್‌ಕಾನ್ಸ್ಟೇಬಲ್ ಎಸ್.ಸಿ. ಲೋಕೇಶ್ ಹಾಸನ ಆಸ್ಪತ್ರೆಗೆ ತೆರಳಿ ಮುಂದಿನ ಕ್ರಮಕೈಗೊಂಡಿದ್ದಾರೆ.