ಮಡಿಕೇರಿ, ಡಿ. ೨೫: ಕೊಡಗು ತುಳುವೆರೆ ಸಮಿತಿ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದ್ದ ಕೊಡಗು ತುಳುವೆರೆ ಪ್ರೀಮಿಯರ್ ಲೀಗ್ ಕ್ರಿಕೆಟ್ನಲ್ಲಿ ಹಿಂದೂ ಕ್ರಿಕೆಟ್ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಟೀಂ ಲೂರ್ಸ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಫೈನಲ್ ಪಂದ್ಯದಲ್ಲಿ ಟಾಸ್ಗೆದ್ದ ಹಿಂದೂ ಕ್ರಿಕೆಟ್ ಕ್ಲಬ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಲೂರ್ಸ್ ತಂಡ ೬ ಓವರ್ಗೆ ೭ ವಿಕೆಟ್ ಕಳೆದುಕೊಂಡು ೪೭ ರನ್ ಬಾರಿಸಿತು. ಹಿಂದೂ ಕ್ರಿಕೆಟ್ ಕ್ಲಬ್ ತಂಡ ೨ ವಿಕೆಟ್ ಕಳೆದುಕೊಂಡು ೩.೧ ಓವರ್ನಲ್ಲಿ ೪೯ ರನ್ ಗಳಿಸಿ ವಿಜಯಮಾಲೆಯನ್ನು ಧರಿಸಿತು. ಅಂತಿಮ ಪಂದ್ಯದಲ್ಲಿ ಹಿಂದೂ ಕ್ರಿಕೆಟ್ ಕ್ಲಬ್ನ ಆಟಗಾರ ವಿಜಯ್ ಹ್ಯಾಟ್ರಿಕ್ ವಿಕೆಟ್ ಗಳಿಸುವುದರ ಜೊತೆಗೆ ಹ್ಯಾಟ್ರಿಕ್ ಸಿಕ್ಸ್ ಬಾರಿಸಿ ಗಮನ ಸೆಳೆದರು.
ಮೊದಲ ಬಹುಮಾನ ಪಡೆದ ತಂಡಕ್ಕೆ ರೂ.೧,೨೨,೩೩೩ ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ಪಡೆದ ತಂಡಕ್ಕೆ ರೂ.೬೬,೭೭೭ ರೂ. ನಗದು ಹಾಗೂ ಟ್ರೋಫಿ ನೀಡಲಾಯಿತು. ಟೀಂ ಭಗವತಿ ತಂಡ ತೃತೀಯ ಸ್ಥಾನ ಪಡೆಯಿತು.
ಮೊದಲ ಕ್ವಾಲಿಫೈಯರ್ ಪಂದ್ಯ ಟೀಂ ಭಗವತಿ ಹಾಗೂ ಟೀಂ ಲೂರ್ಸ್ ತಂಡದ ನಡುವೆ ನಡೆಯಿತು. ಟಾಸ್ ಗೆದ್ದ ಭಗವತಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಟೀಂ ಲೂರ್ಸ್ ೬ ಓವರ್ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೭೫ ರನ್ ಬಾರಿಸಿತು. ಟೀಂ ಭಗವತಿ ೬ ಓವರ್ಗೆ ೬ ವಿಕೆಟ್ಗೆ ೬೧ ರನ್ ಗಳಿಸಿ ಸೋಲನುಭವಿಸಿತು. ಆ ಮೂಲಕ ಟೀಂ ಲೂರ್ಸ್ ಫೈನಲ್ ಪ್ರವೇಶಿಸಿತು. ಎರಡನೇ ಕ್ವಾಲಿಫೈಯರ್ ಪಂದ್ಯ ಹಿಂದೂ ಕ್ರಿಕೆಟ್ ಕ್ಲಬ್ ಹಾಗೂ ಅಮ್ಮತ್ತಿ ಟೈರ್ಸ್ ನಡುವೆ ನಡೆಯಿತು. ಟಾಸ್ ಗೆದ್ದ ಹಿಂದೂ ಕ್ರಿಕೆಟ್ ಕ್ಲಬ್ ಫೀಲ್ಡಿಂಗ್ ಆರಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಅಮ್ಮತ್ತಿ ಟೈರ್ಸ್ ೬ ಓವರ್ಗೆ ೪ ವಿಕೆಟ್ ಕಳೆದುಕೊಂಡು ೫೦ ರನ್ ಗಳಿಸಿತು. ಹಿಂದೂ ಕ್ರಿಕೆಟ್ ಕ್ಲಬ್ ೨.೫ ಓವರ್ನಲ್ಲಿ ೨ ವಿಕೆಟ್ಗೆ ೫೨ ರನ್ ಗಳಿಸಿತು. ಮೂರನೇ ಕ್ವಾಲಿಫೈಯರ್ ಪಂದ್ಯ ಹಿಂದೂ ಕ್ರಿಕೆಟ್ ಕ್ಲಬ್ ಹಾಗೂ ಟೀಂ ಭಗವತಿ ನಡುವೆ ನಡೆಯಿತು. ಟಾಸ್ ಗೆದ್ದ ಹಿಂದೂ ಕ್ರಿಕೆಟ್ ಕ್ಲಬ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿ ಕೊಂಡಿತು. ಮೊದಲು ಬ್ಯಾಟ್ ಮಾಡಿದ ಟೀಂ ಭಗವತಿ ೬ ಓವರ್ಗೆ ೮ ವಿಕೆಟ್ ಕಳೆದುಕೊಂಡು ೫೫ ರನ್ ಗಳಿಸಿತು. ಹಿಂದೂ ಕ್ರಿಕೆಟ್ ಕ್ಲಬ್ ತಂಡ ೫.೧ ಓವರ್ನಲ್ಲಿ ೨ ವಿಕೆಟ್ ಕಳೆದುಕೊಂಡು
(ಮೊದಲ ಪುಟದಿಂದ) ೫೭ ರನ್ ಗಳಿಸಿ ಫೈನಲ್ಗೆ ಪ್ರವೇಶ ಪಡೆಯಿತು. ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಹಿಂದೂ ಕ್ರಿಕೆಟ್ ಕ್ಲಬ್ ತಂಡದ ವಿಜಯ್, ಸರಣಿ ಪುರುಷೋತ್ತಮ ಹಾಗೂ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಟೀಂ ಭಗವತಿ ತಂಡದ ರೇಣುಕ ಶೆಟ್ಟಿ, ಅತ್ಯುತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಹಿಂದೂ ಕ್ರಿಕೆಟ್ ಕ್ಲಬ್ನ ಎ.ಟಿ. ರವಿ, ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಹಿಂದೂ ಕ್ರಿಕೆಟ್ ಕ್ಲಬ್ನ ಚುಮ್ಮುಬ್ರೋ, ಸ್ಟೆöÊಲಿಶ್ ಪ್ಲೇಯರ್ ಪ್ರಶಸ್ತಿಯನ್ನು ಟೀಂ ಲೂರ್ಸ್ ತಂಡದ ವಿನೋದ್ ಪಡೆದುಕೊಂಡರು.
ವಾಲಿಬಾಲ್ ಪಂದ್ಯಾಟದಲ್ಲಿ ಆರು ತಂಡಗಳು ಪಾಲ್ಗೊಂಡಿದ್ದು, ಬಿಳಿಗೇರಿ ಬ್ರಿಗೇಡಿರ್ಸ್ ತಂಡ ವಿನ್ನರ್ ಆಗಿ, ಯುನೈಟೆಡ್ ತುಳುವಾಸ್ ತಂಡ ರನ್ನರ್ ಆಗಿ ಹೊರಹೊಮ್ಮಿತು. ಉತ್ತಮ ಆಟಗಾರ ಪ್ರಶಸ್ತಿಯನ್ನು ಬಿಳಿಗೇರಿ ತಂಡದ ಚಿನ್ನು ರಾಹುಲ್ ಪಡೆದುಕೊಂಡರು. ಮಹಿಳೆಯರ ಥ್ರೋಬಾಲ್ನಲ್ಲಿ ನಾಲ್ಕು ತಂಡಗಳು ಭಾಗವಹಿಸಿದ್ದು, ಟೀಂ ಹಿಮಾನಿ ಹೆಬ್ಬೆಟ್ಟಗೇರಿ ಪ್ರಥಮ, ಸಿದ್ದಾಪುರದ ಬ್ಲಾö್ಯಕ್ ವೆಬ್ ದ್ವಿತೀಯ ಸ್ಥಾನ ಗಳಿಸಿತು. ಹಿಮಾನಿ ತಂಡದ ಎಸ್.ಎಂ. ತಶ್ಮ ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು. -ಉಜ್ವಲ್ ರಂಜಿತ್