ಮಡಿಕೇರಿ, ಡಿ. ೨೫: ಕ್ರೆöÊಸ್ತ ಸಮುದಾಯದವರ ಪ್ರಮುಖ ಹಬ್ಬಾಚರಣೆಯಲ್ಲಿ ಒಂದಾದ ಕ್ರಿಸ್ಮಸ್ ಸಂಭ್ರಮ ಜಿಲ್ಲೆಯಾದ್ಯಂತ ಕಂಡು ಬಂದಿತು. ಕಳೆದೆರಡು ವರ್ಷಗಳ ಸರಳ ಕಾರ್ಯಕ್ರಮದ ನಿರ್ಬಂಧದಿAದಾಗಿ ತುಸು ಕಳೆಗುಂದಿದAತಿದ್ದ ಕ್ರಿಸ್ಸಂಭ್ರಮ ಈ ಬಾರಿ ಮತ್ತೆ ಮೇಳೈಸಿತು. ಜಿಲ್ಲೆಯಾದ್ಯಂತ ಶಾಂತಿ - ಸಾಮರಸ್ಯದೊಂದಿಗೆ ಕ್ರೆöÊಸ್ತ ಸಮುದಾಯ ಬಾಂಧವರು ಏಸುವಿನ ಆರಾಧನೆಯೊಂದಿಗೆ ಹಬ್ಬಾಚರಿ ಸಿದರು.
ತಾ. ೨೪ರ ರಾತ್ರಿಯಿಂದಲೇ ವಿವಿಧ ಚರ್ಚ್ಗಳಲ್ಲಿ ಬಾಲ ಏಸುವಿನ ಆರಾಧನೆ, ಆಡಂಬರ, ಬಲಿಪೂಜೆ, ಸಾಮೂಹಿಕ ಪ್ರಾರ್ಥನೆಗಳು ಜರುಗಿದವು. ವಿವಿಧ ಚರ್ಚ್ಗಳಲ್ಲಿ ಪಾಲ್ಗೊಂಡಿದ್ದ ಜನರು ಹಾಡು, ಭಜನೆ, ಪಟಾಕಿಗಳ ಮೂಲಕ ಧಾರ್ಮಿಕ ಕಾರ್ಯದೊಂದಿಗೆ ಸಂಭ್ರಮಿಸಿದರು. ಬಹುತೇಕ ಎಲ್ಲಾ ಚರ್ಚ್ಗಳು ವಿದ್ಯುತ್ ಅಲಂಕೃತ ಗೊಂಡು ಗಮನ ಸೆಳೆಯುತ್ತಿದ್ದವು. ಜಿಲ್ಲೆಯಲ್ಲಿ ಸುಮಾರು ೧೯ ರೋಮನ್ ಕ್ಯಾಥೊಲಿಕ್ ಚರ್ಚ್ಗಳು, ೭ ಕ್ಕೂ ಅಧಿಕ ಸೌತ್ ಇಂಡಿಯನ್ (ಸಿಎಸ್ಐ) ಚರ್ಚ್ಗಳಿದ್ದು, ಎಲ್ಲಾ ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು, ಪರಸ್ಪರ ಶುಭ ಹಾರೈಕೆಗಳ ವಿನಿಮಯ ಕಂಡು ಬಂದಿತು. ತಡರಾತ್ರಿಯ ಸಾಮೂಹಿಕ ಪ್ರಾರ್ಥನೆ ಬಳಿಕ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿ ಸಂಭ್ರಮ ಆಚರಿಸಲಾಯಿತು.
ಮಡಿಕೇರಿಯ ಸಂತ ಮೈಕಲ್, ಕುಶಾಲನಗರದ ಸಂತ ಸಬಾಸ್ಟಿನ್, ಸುಂಟಿಕೊಪ್ಪದ ಸಂತ ಅಂತೋಣಿ, ವೀರಾಜಪೇಟೆಯ ಸಂತ ಅನ್ನಮ್ಮ, ಸೋಮವಾರಪೇಟೆಯ ಓ.ಎಲ್.ವಿ., ಪೊನ್ನಂಪೇಟೆಯ ಸೆಂಟ್ ಅಂಟೋನಿ, ಚೆಟ್ಟಳ್ಳಿಯ ಸಂತ ಸಬಾಸ್ಟಿನ್, ಸಿದ್ದಾಪುರದ ಸಂತ ಜೋಸೆಫ್, ಗೋಪಾಲಪುರ, ಶನಿವಾರಸಂತೆ, ಗೌಡಳ್ಳಿ ಸೇರಿದಂತೆ ಅಲ್ಲಲ್ಲಿನ ಚರ್ಚ್ಗಳ ಧರ್ಮಗುರುಗಳ ನೇತೃತ್ವದಲ್ಲಿ ವಿಧಿ ವಿಧಾನಗಳು ಜರುಗಿದವು.
ಮಡಿಕೇರಿ ಸಂತಮೈಕಲ್
ಜಿಲ್ಲಾ ಕೇಂದ್ರ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿಯಿರುವ ಸಂತಮೈಕಲರ ಚರ್ಚ್ ವಿದ್ಯುತ್ ಅಲಂಕಾರದಿAದ ಕಂಗೊಳಿಸುತ್ತಿತ್ತು. ಫಾದರ್ ಜಾರ್ಜ್ ದೀಪಕ್ ಹಾಗೂ ಫಾದರ್ ನವೀನ್, ಫಾದರ್ ರೇಗನ್ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ವಿವಿಧ ಸಾಂಸ್ಕೃತಿಕ ಪ್ರದರ್ಶನ, ಹಾಡು ಗಮನ ಸೆಳೆಯಿತು. ಕೇಕ್ ಕತ್ತರಿಸುವ ಮೂಲಕ ನೆರೆದಿದ್ದವರಿಗೆ ಕೇಕ್ ವಿತರಿಸಲಾಯಿತು. ತಾ. ೨೫ ರಂದು ಬೆಳಿಗ್ಗೆ ಪೂಜೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಗೋಪಾಲಪುರ ಸಂತ ಅಂತೋಣಿ ಚರ್ಚ್
ಶನಿವಾರಸಂತೆ : ಸಮೀಪದ ಗೋಪಾಲಪುರ ಗ್ರಾಮದ ಸಂತ ಅಂತೋಣಿ ಚರ್ಚ್ನಲ್ಲಿ ಕ್ರಿಸ್ಮಸ್ ಹಬ್ಬವನ್ನು ಕ್ರೆöÊಸ್ತ ಸಮುದಾಯದವರು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿAದ ಆಚರಿಸಿದರು.
ಚರ್ಚ್ನ ಧರ್ಮಗುರು ಫಾದರ್ ಜೇಕಬ್ ಕೊಲನೂರ್ ನೇತೃತ್ವದಲ್ಲಿ ಚರ್ಚ್ ಸಭಾಂಗಣದಲ್ಲಿ ವಿಶೇಷ ಪ್ರಾರ್ಥನೆ, ವಿಶೇಷ ಪೂಜೆ ನೆರವೇರಿತು. ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕೊಡ್ಲಿಪೇಟೆಯ ಧರ್ಮಗುರು ರಾಹುಲ್ ಧರ್ಮ ಪ್ರಬೋಧನೆ ನೀಡಿದರು. ಗಾಯನ ಸಂಘದವರು ಏಸುಕ್ರಿಸ್ತನ ಜನನದ ಭಜನೆಗಳನ್ನು ಹಾಡಿದರು. ಗೋಪಾಲಪುರ, ಒಡೆಯನಪುರ, ಶನಿವಾರಸಂತೆ, ಹೊಸೂರು, ಕೊಡ್ಲಿಪೇಟೆ, ಬೀಟಿಕಟ್ಟೆ ಮೊದಲಾದ ಊರುಗಳಿಂದ ಬಂದ ಭಕ್ತರು ಚರ್ಚ್ನಲ್ಲಿ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಶನಿವಾರಸAತೆ : ಪಟ್ಟಣದ ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಭಾವೈಕ್ಯತೆಯ ಸಂಕೇತವಾಗಿ ಕ್ರಿಸ್ಮಸ್ ಹಬ್ಬವನ್ನು ವಿಭಿನ್ನವಾಗಿ, ಅರ್ಥಪೂರ್ಣವಾಗಿ ಸಂಭ್ರಮದಿAದ ಆಚರಿಸಲಾಯಿತು. ಹಿಂದೂ - ಮುಸ್ಲಿಂ - ಕ್ರೆöÊಸ್ತ ಧರ್ಮಗುರುಗಳು ಒಂದಾಗಿ ಕಾರ್ಯಕ್ರಮ ಉದ್ಘಾಟಿಸಿದರು.
ಗೋಪಾಲಪುರ ಸಂತ ಅಂತೋಣಿ ಚರ್ಚ್ ಧರ್ಮಗುರು ಫಾದರ್ ಜೇಕಬ್ ಕೊಲ್ಲನೂರ್ ಮಾತನಾಡಿ, ಎಲ್ಲರಲ್ಲೂ ನಾವು ಒಂದೇ ಎಂಬ ಭಾವನೆ ಇರಬೇಕು. ದ್ವೇಷ ರಹಿತ ಪ್ರೀತಿಯಿಂದ ಸಹಬಾಳ್ವ ಬಾಳಬೇಕು ಎಂದರು. ಮನೆಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ನಾವು ನಮ್ಮ ಭಾವನೆಗಳು, ಆಚರಣೆಗಳನ್ನು ಗೌರವಿಸುತ್ತಾ ಬೆರೆಯುವ ಭಾವನೆ ಹಾಗೂ ಆಚರಣೆಗಳನ್ನು ಗೌರವಿಸುವುದೇ ಭಾವೈಕ್ಯತೆಯಾಗಿದೆ ಎಂದರು.
ಹೊಸೂರು ಮಸೀದಿಯ ಧರ್ಮಗುರು ಸಫಾ ಅದಿ ಮೌಲ್ವಿ ಮಾತನಾಡಿ, ಮೂರು ಧರ್ಮಗಳ ಮೂವರು ಧರ್ಮಗುರುಗಳು ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟಿಸುತ್ತಿರುವುದೇ ರಾಷ್ಟಿçÃಯ ಭಾವೈಕ್ಯತೆಯ ಸಂಕೇತ ಎಂದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಶಿಕ್ಷಕರೆಲ್ಲರು ಸಾಂತಕ್ಲಾಸನAತೆ ಟೋಪಿ ಧರಿಸಿ ಸಂಭ್ರಮಿಸಿದರು. ಕಾಲೇಜಿನ ಪ್ರಾಂಶುಪಾಲ ಫಾದರ್ ಸಬಾಸ್ಟಿನ್ ಮೈಕಲ್, ಫಾದರ್ ಸಜಿ ಥೋಮಸ್, ಫಾದರ್ ಥೋಮಸ್, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಅಂಕಿತಾ, ಪೂರ್ಣಿಮಾ ಹಾಗೂ ಯಶೋಧಾ ಕಾರ್ಯಕ್ರಮ ನಿರ್ವಹಿಸಿದರು.ನಾಪೋಕ್ಲು: ಇಲ್ಲಿನ ಸಂತ ಮೇರಿ ಚರ್ಚ್ನಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಶನಿವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಸಿಡಿಮದ್ದು ಸಿಡಿಸಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಧರ್ಮಗುರು ಜ್ಞಾನಪ್ರಕಾಶ್ ಮಾತನಾಡಿ, ಮಾನವನು ದೇವರ ಬಳಿಗೆ ಹೋಗಲು ವಿಫಲನಾದಾಗ ದೇವರೇ ಮಾನವನ ಬಳಿಗೆ ಬರುವ ಘಟನೆಯನ್ನು ಕ್ರಿಸ್ತ ಜಯಂತಿ ಎಂದು ಆಚರಿಸಲಾಗುತ್ತಿದೆ. ಏಸುಕ್ರಿಸ್ತ ಸರ್ವರ ಬಾಳಿಗೆ ಬೆಳಕಾಗಿದ್ದಾನೆ ಎಂದರು.
ಈ ಸಂದರ್ಭ ಕ್ರೆöÊಸ್ತ ಬಾಂಧವರಿಗೆ ಗೋದಲಿ ಸ್ಪರ್ಧೆ ನಡೆಯಿತು. ವಿಜೇತರಾದವರಿಗೆ ಧರ್ಮಗುರು ಜ್ಞಾನಪ್ರಕಾಶ್ ಬಹುಮಾನ ವಿತರಿಸಿದರು. ಗೋದಲಿ ಸ್ಪರ್ಧೆಯಲ್ಲಿ ಕೆ.ಜೆ.ರಾಯ್, ಜೀವನ್ ಪ್ರಕಾಶ್, ಲೂವಿಸ್ ಗೊನ್ಸಲ್ವೇಸ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಸಿದರು.
ಕೊಡ್ಲಿಪೇಟೆ : ಸಮೀಪದ ಕೊಡ್ಲಿಪೇಟೆಯ ಐಪಿಸಿ ಪ್ರೊಟೆಸ್ಟಂಟ್ ಚರ್ಚ್ನಲ್ಲಿ ಏಸುಕ್ರಿಸ್ತನ ಜನ್ಮ ದಿನವಾದ ಕ್ರಿಸ್ಮಸ್ ಹಬ್ಬವನ್ನು ಸಮುದಾಯದವರು ವಿಶೇಷ ಪ್ರಾರ್ಥನೆ, ಸ್ತುತಿ ಸ್ತೋತ್ರಗಳ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಚರ್ಚ್ನ ಸಭಾಪಾಲಕ ಪಾಸ್ಟರ್ ಪಿ.ಸಿ. ಫ್ರೆಡ್ಡಿ ಸಂದೇಶ ನೀಡುತ್ತಾ, ಜನತೆ ಇಂದು ಶಾಂತಿ - ನೆಮ್ಮದಿಯ ಹುಡುಕಾಟದಲ್ಲಿ ಇದ್ದಾರೆ. ಶಾಂತಿ ಸಭೆ ನಡೆಸುತ್ತಾ ಗುರುಗಳ ಸಹಕಾರ ಕೋರುತ್ತಿದ್ದಾರೆ. ಯುವ ಸಮುದಾಯ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಇದು ವಿಷಾಧನೀಯ. ಶಾಶ್ವತ ಶಾಂತಿ - ನೆಮ್ಮದಿಯನ್ನು ಹೊಂದಲು ದೇವರನ್ನು ಧ್ಯಾನಿಸುವ ಮೂಲಕ ಪಡೆಯಬಹುದು ಎಂದರು. ಭಕ್ತರು ವಿಶೇಷ ಪ್ರಾರ್ಥನೆ ಮಾಡಿ ವಿಶ್ವವನ್ನು ಕೊರೊನಾ ಮಹಾಮಾರಿಯಿಂದ ಕಾಪಾಡುವಂತೆ ಬೇಡಿದರು. ಪ್ರಸಾದ ವಿನಿಯೋಗವಾಗಿ ಪರಸ್ಪರ ಶುಭ ಕೋರಿದರು.ವೀರಾಜಪೇಟೆ
ವೀರಾಜಪೇಟೆ: ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದಲ್ಲಿ ಕ್ರೆöÊಸ್ತ ಬಾಂಧವರು ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದರು. ತಾ. ೨೪ ರ ರಾತ್ರಿ ಸಂತ ಅನ್ನಮ್ಮ ದೇವಾಲಯದಲ್ಲಿ ಆಡಂಬರ ಗಾಯನ, ವಿಶೇಷ ಪೂಜೆ ಹಾಗೂ ಪ್ರವಚನಗಳು ಬಲಿ ಪೂಜೆ ನಡೆದು ಮಧ್ಯರಾತ್ರಿ ಏಸುವಿನ ಜನನ ಸಂದರ್ಭ ಗೋದಲಿಯನ್ನು ಸಿದ್ಧಪಡಿಸಲಾಗಿತ್ತು. ವಿದ್ಯುತ್ ದೀಪಗಳು ಅಲಂಕೃತಗೊAಡಿತ್ತು. ದೇವಾಲಯದ ಆವರಣದಲ್ಲಿ ಬೃಹತ್ ಕ್ರಿಸ್ಮಸ್ ನಕ್ಷತ್ರವನ್ನು ಅಳವಡಿಸಲಾಗಿತ್ತು. ಭಾನುವಾರ ಬೆಳಿಗ್ಗೆಯು ಕ್ರಿಸ್ಮಸ್ ಆಡಂಬರ ಗಾಯನ ನಡೆಯಿತು. ಹಬ್ಬದ ಪ್ರಯುಕ್ತ ಚರ್ಚ್ನ್ನು ಹೂವುಗಳಿಂದ ಅಲಂಕರಿಸಲಾಗಿತ್ತು.
ಧರ್ಮಗುರುಗಳು ಭಕ್ತಾದಿಗಳಿಗೆ ಶುಭವನ್ನು ಹಾರೈಸಿ ಹಬ್ಬದ ಸಂದೇಶ ಹಾಗೂ ಪ್ರವಚನವನ್ನು ನೀಡಿದರು. ಜಗತ್ತಿನಲ್ಲಿ ಸುಖ, ಶಾಂತಿ ನೆಲೆಸಲಿ ಹಾಗೂ ಸರ್ವರಿಗೂ ಭಗವಂತನು ಆರೋಗ್ಯವನ್ನು ಕರುಣಿಸಲಿ, ದೇವರ ಮಕ್ಕಳಾದ ನಾವು ಸದಾ ಅವರ ಸೇವೆಗೆ ಸಿದ್ಧರಿರಬೇಕು ಪರಸ್ಪರ ಹೊಂದಾಣಿಕೆ, ಸಹಬಾಳ್ವೆಯನ್ನು ಹೊಂದಬೇಕು. ಜಗತ್ತಿನಲ್ಲಿ ಪ್ರೀತಿಯ ಕೊರತೆ ಇಂದು ಕಾಣುತಿದ್ದು ಭಗವಂತನ ಸ್ಮರಣೆಯಿಂದ ಸರ್ವರಲ್ಲೂ ಪ್ರೀತಿಯನ್ನು ಹಂಚಬಹುದು, ದ್ವೇಷ, ಅಸೂಯೆಗಳನ್ನು ತ್ಯಜಿಸಿದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ಬೆಳೆಯಲು ಸಾಧ್ಯ ಎನ್ನುವ ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಕ್ರೆöÊಸ್ತ ಸಮುದಾಯದವರು ಏಸು ಕ್ರಿಸ್ತರ ಜನ್ಮ ದಿನವಾದ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಕ್ರಿಶ್ಚಿಯನ್ ಸಮುದಾಯದವರು ಪರಸ್ಪರ ಹಬ್ಬದ ಶುಭಾಶಯ ಕೋರಿ, ಮನೆಯಲ್ಲಿ ನೆಂಟರಿಷ್ಟರೊAದಿಗೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ನಿನ್ನೆ ರಾತ್ರಿ ಮನೆಗಳಲ್ಲಿ ಹಾಗೂ ಚರ್ಚ್ಗಳಲ್ಲಿ ಗೋದಲಿಯನ್ನು ನಿರ್ಮಿಸಿ, ಬಾಲಏಸು ಪ್ರತಿಮೆ ಪ್ರತಿಷ್ಠಾಪಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಚರ್ಚ್ನಲ್ಲಿ ಕೇಕ್ ಕತ್ತರಿಸಿ ಪರಸ್ಪರ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು. ಇಲ್ಲಿನ ಜಯವೀರ ಮಾತೆ ದೇವಾಲಯದಲ್ಲಿ ಫಾದರ್ ಎಂ. ರಾಯಪ್ಪ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಚರ್ಚ್ನಲ್ಲಿ ಸ್ಥಾಪಿಸಿದ ಗೋದಲಿಗೆ ವಿಶೇಷ ಪೂಜೆ ನೆರವೇರಿತು.
ಚರ್ಚ್ನ ಸಲಹಾ ಸಮಿತಿ ಕಾರ್ಯದರ್ಶಿ ಶೀಲಾ ಡಿಸೋಜ, ಪದಾಧಿಕಾರಿಗಳಾದ ವಿ.ಎ. ಲಾರೆನ್ಸ್, ಪ್ರಿನ್ಸ್, ವಿನ್ಸಿ, ಮಾರ್ಷಲ್, ಮರ್ವಿನ್ ಸೇರಿದಂತೆ ಸಮುದಾಯ ಬಾಂಧವರು ಭಾಗಿಯಾಗಿದ್ದರು.
ಇದರೊಂದಿಗೆ ಅಬ್ಬೂರುಕಟ್ಟೆಯಲ್ಲಿರುವ ಸಂತ ಲಾರೆನ್ಸ್ ಚರ್ಚ್ನಲ್ಲಿ ಫಾದರ್ ಡಿಕುನ್ನಾ ಅವರ ನೇತೃತ್ವದಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಪ್ರಮುಖರಾದ ಎಸ್.ಎಂ. ಡಿಸಿಲ್ವಾ, ಜೋಸೆಫ್, ಖಾಲಿಸ್ತಾ ಡಿಸಿಲ್ವಾ ಸೇರಿದಂತೆ ನೂರಾರು ಮಂದಿ ಭಾಗಿಯಾಗಿದ್ದರು. ಪಟ್ಟಣದ ಸಿಎಸ್ಐ ಚರ್ಚ್ನಲ್ಲೂ ಸಾಮೂಹಿಕ ಪ್ರಾರ್ಥನೆ, ವಿಶೇಷ ಪೂಜೆಗಳು ಸಂಭ್ರಮದಿAದ ನೆರವೇರಿತು.ಸುಂಟಿಕೊಪ್ಪ: ಕ್ರಿಸ್ಮಸ್ ಹಬ್ಬ ಇಲ್ಲಿನ ಸಂತ ಅಂತೋಣಿ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು. ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪ ಹಾಗೂ ಕ್ರಿಸ್ತ ಜನಿಸಿದಾಗ ಮೂಡಿಬಂದ ತಾರೆಗಳನ್ನು ಅಳವಡಿಸಿ ಅಲಂಕಾರಗೊಳಿಸಲಾಗಿತ್ತು. ಪ್ರಭು ಕ್ರಿಸ್ತರ ಜನನದ ಸ್ಥಳವಾದ ಗೋದಾಲಿಯನ್ನು ನಿರ್ಮಿಸಲಾಗಿತ್ತು ಪ್ರಭು ಕ್ರಿಸ್ತರನ್ನು ಪ್ರತಿಷ್ಠಾಪಿಸುವ ಮೂಲಕ ಹಬ್ಬಕ್ಕೆ ಮುನ್ನುಡಿ ಇರಿಸಲಾಯಿತು.
ತಾ.೨೪ ರಂದು ಮಧ್ಯರಾತ್ರಿ ೧೨ ಗಂಟೆಗೆ ಹಾಗೂ ೨೫ ರಂದು ಬೆಳಿಗ್ಗೆ ೮.೩೦ ಗಂಟೆಗೆ ಸಂತ ಅಂತೋಣಿ ದೇವಾಲಯದ ಏಸುವಿನ ಜನನದ ಸ್ಥಳವಾದ ಗೋದಲಿ (ದನದಕೊಟ್ಟಿಗೆ)ಯನ್ನು ನಿರ್ಮಿಸಿ ಬಾಲಏಸುವನ್ನು ಪ್ರತಿಷ್ಠಾಪಿಸುವ ಮೂಲಕ ವಿಶೇಷ ಆಡಂಬರ ಗಾಯನ ಬಲಿ ಪೂಜೆಯನ್ನು ಧರ್ಮಗುರುಗಳಾದ ರೆ.ಫಾ. ಅರುಳ್ಸೆಲ್ವಕುಮಾರ್ ಅವರು ನೇರವೇರಿಸಿದರು.
ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತಿçÃಯರು ಹಾಗೂ ಮಕ್ಕಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ ಕ್ರೆöÊಸ್ತ ಬಾಂಧವರು ಈ ಗಾಯನ ದಿವ್ಯ ಬಲಿಪೂಜೆ ಪಾರ್ಥನೆಯಲ್ಲಿ ತೊಡಗಿಸಿಕೊಂಡು ಆಶೀರ್ವಚನ ಪಡೆದು ನಂತರ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ದೇವಾಲಯದ ಧರ್ಮಗುರು ರೆ.ಫಾ. ಅರುಳ್ಸೆಲ್ವಕುಮಾರ್, ಕ್ಲಾರ ಕನ್ಯಾಸ್ತಿç ಮಠದ ಮದರ್ ಸೂಪಿರಿಯರ್ ವೀರಾ ಡಿಸೋಜ ಅವರುಗಳು ಶಿಕ್ಷಣ ಹಾಗೂ ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಪೊನ್ನಂಪೇಟೆ: ಪೊನ್ನಂಪೇಟೆ ಸಂತ ಅಂಥೋಣಿ ಚರ್ಚ್ನಲ್ಲಿ ನಡೆದ ಕ್ರಿಸ್ಮಸ್ ಆಚರಣೆಯಲ್ಲಿ ಕ್ರೆöÊಸ್ತ ಭಾಂಧವರು ಸಂಭ್ರಮದಿAದ ಪಾಲ್ಗೊಂಡಿದ್ದರು. ರೆ. ಫಾದರ್ ಡೇವಿಡ್ ಸಗಾಯ್ ರಾಜ್ ಪ್ರಾರ್ಥನೆ ಮಾಡಿದರು.
ಕುಶಾಲನಗರ: ಕ್ರಿಸ್ಮಸ್ ಅಂಗವಾಗಿ ಕುಶಾಲನಗರದ ಸಂತ ಸೆಬಾಸ್ಟಿಯನ್ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು. ಕ್ರಿಸ್ಮಸ್ ಮುನ್ನ ದಿನ ರಾತ್ರಿ ಭಜನಾ ಗೀತೆಗಳ ಕಾರ್ಯಕ್ರಮ ನಂತರ ಬಾಲಏಸುವಿನ ಮೂರ್ತಿಯನ್ನು ಗೋದಲಿಯಲ್ಲಿ ಇಟ್ಟು ಪೂಜೆ ಸಲ್ಲಿಸಲಾಯಿತು. ಚರ್ಚ್ ಧರ್ಮ ಗುರುಗಳಾದ ಫಾ. ಮಾರ್ಟಿನ್ ಧಾರ್ಮಿಕ ಪ್ರವಚನ ನೀಡಿದರು. ಸ್ಥಳೀಯ ಮೇಡಕ್ ಚರ್ಚ್ನಲ್ಲಿ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು.ಸಂದೇಶವನ್ನು ನೀಡಿದರು.
ದೇವಾಲಯದ ಧರ್ಮಗುರುಗಳಾದ ಡಾ, ದಯಾನಂದ ಪ್ರಭು, ಸಹಾಯಕಗುರು ಐಸಾಕ್ ರತ್ನಕರ, ಯೇಸುಪ್ರಸಾದ್ ಹಾಗೂ ವೀರಾಜಪೇಟೆ ವ್ಯಾಪ್ತಿಯ ಕ್ರೆöÊಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.