ಸುAಟಿಕೊಪ್ಪ, ಡಿ. ೨೪: ಕ್ರಿಸ್ಮಸ್ ಹಬ್ಬದ ಅಂಗವಾಗಿ ಸಂತ ಅಂತೋಣಿ ದೇವಾಲಯವನ್ನು ವಿದ್ಯುತ್ ದೀಪ ಹಾಗೂ ನಕ್ಷತ್ರಗಳಿಂದ ನಿರ್ಮಿಸಿ ಅಲಂಕಾರಗೊಳಿಸಲಾಗಿದೆ.
ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಕ್ರಿಸ್ತನ ಜನನದ ಸ್ಥಳವಾದ ದನದ ಕೊಟ್ಟಿಗೆ (ಗೋದಲಿ)ಯನ್ನು ನಿರ್ಮಿಸಿ ಕ್ರಿಸ್ತರನ್ನು ಪ್ರತಿಷ್ಠಾಪಿಸಿ ದೇವಾಲಯದಲ್ಲಿ ಧರ್ಮಗುರುಗಳು ಬಲಿಪೂಜೆಯನ್ನು ಅರ್ಪಿಸುವುದು ವಾಡಿಕೆಯಾಗಿದೆ.