ಮಡಿಕೇರಿ, ಡಿ. ೨೪: ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗವು ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭ ದೆಹಲಿಗೆ ತೆರಳಿ ಕೇಂದ್ರ ಮತ್ತು ರಾಜ್ಯ ಖಾತೆಯ ಕೃಷಿ ಸಚಿವರು ಹಾಗೂ ರೈತ ಕಲ್ಯಾಣ ಸಚಿವರಾದ ಶೋಭಾ ಕರಂದ್ಲಾಜೆ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸಂಸತ್ತಿನ ವ್ಯವಹಾರಿಕ ಸಚಿವ ಪ್ರಹ್ಲಾದ್ ಜೋಶಿ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಐ.ಎಂ.ಬಸವೇಗೌಡ, ವಾಣಿಜ್ಯ ಮಂತ್ರಾಲಯದ ಹೆಚ್ಚುವರಿ ಕಾರ್ಯದಶಿ ರಾಜೇಶ್ ಅಗರವಾಲ್ ಅವರುಗಳನ್ನು ಭೇಟಿ ಮಾಡಿತು.
ಕಾಫಿ ಬೆಳೆಗಾರರ ಪ್ರಮುಖವಾದ ಬೇಡಿಕೆಗಳನ್ನು ಸಂಬAಧಪಟ್ಟ ಸಚಿವರು ಮತ್ತು ಇಲಾಖೆಯ ಪ್ರಮುಖರಿಗೆ ಮನವಿ ಮೂಲಕ ಸಲ್ಲಿಸಲಾಯಿತು.
ರೂ. ೩ ಲಕ್ಷದವರೆಗಿನ ಸಾಲ ಪಡೆದು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಿರುವ ಬೆಳೆಗಾರರಿಗೆ ಶೂನ್ಯ ಬಡ್ಡಿದರದಲ್ಲಿ ಬ್ಯಾಂಕುಗಳಿAದ ಸಾಲಸೌಲಭ್ಯ ನೀಡಲಾಗುತ್ತಿದ್ದು, ಸಾಲದ ಪ್ರಮಾಣವನ್ನು ಹೆಚ್ಚುಪಡಿಸಬೇಕು. ಕಾಫಿ ಇತರೆ ಸಾಲಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು.
ವಾಣಿಜ್ಯ ಬ್ಯಾಂಕ್‌ನಿAದ ಕಾಫಿ ಸಾಲಕ್ಕೆ ಬ್ಯಾಂಕ್ ಬಡ್ಡಿದರವನ್ನು ಕಡಿಮೆ ಮಾಡಬೇಕು, ಬ್ಯಾಂಕ್ ಸಾಲ ಮರುಪಾವತಿ ಅವಧಿಯನ್ನು ಹೆಚ್ಚಿಸಬೇಕು, ಕೃಷಿಯಲ್ಲೇ ತೊಡಗಿಸಿ ಕೊಂಡಿರುವ ರೈತರಿಗೆ ಸಿಬಿಲ್‌ನ್ನು ಅನ್ವಯಿಸಬಾರದು, ಕಾಫಿಗೂ ಸಹ ಕಾಳುಮೆಣಸು, ಅಡಿಕೆಗೆ ಇರುವಂತೆ ಹವಾಮಾನಾಧಾರಿತ ಬೆಳೆವಿಮೆಯನ್ನು ಅಳವಡಿಸಬೇಕು, ಕೇಂದ್ರ ಸರ್ಕಾರದಿಂದ ಮಾನವ-ಪ್ರಾಣಿ ಸಂಘರ್ಷಕ್ಕೆ ಬಜೆಟ್ ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹೆಚ್ಚು ಅನುದಾನವನ್ನು ನೀಡಬೇಕು. ಇದರಿಂದ ಮಾನವ-ಪ್ರಾಣಿ ಸಂಘರ್ಷವನ್ನು ಯಶಸ್ವಿಯಾಗಿ ತಡೆಗಟ್ಟಲು ಸಹಾಯವಾಗುತ್ತದೆ ರಾಷ್ಟ್ರೀಯ ವಿಪತ್ತು ಯೋಜನೆ (ಎನ್.ಡಿ.ಆರ್.ಎಫ್.)ಯಿಂದ ಕೊಡುತ್ತಿರುವ ಪರಿಹಾರವನ್ನು ೧೦ ಹೆಕ್ಟೇರ್‌ವರೆಗೆ ವಿಸ್ತರಿಸಬೇಕು ಮತ್ತು ಪರಿಹಾರ ಮೊತ್ತವನ್ನು ಹೆಚ್ಚು ಪಡಿಸಬೇಕು ಎಂದು ಬೇಡಿಕೆ ಸಲ್ಲಿಸಿತು.
ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ|| ಹೆಚ್.ಟಿ. ಮೋಹನ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್ ಇದ್ದರು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್.ಬಿ. ಕೃಷ್ಣಪ್ಪ ಮಾಹಿತಿ ನೀಡಿದ್ದಾರೆ.