ವೀರಾಜಪೇಟೆ, ಡಿ. ೨೪: ಕೊಡವ ಕುಟುಂಬಗಳ

ವಂಶಾವಳಿ ವೃಕ್ಷವನ್ನು ತಿತಿತಿ.ಞoಜಚಿvಚಿಛಿಟಚಿಟಿ.ಛಿom ಮೂಲಕ ಒಂದಕ್ಕೊAದು ನೇಯ್ದು ಎಲ್ಲಾ ಕೊಡವರು ಒಂದೇ ಕುಟುಂಬಕ್ಕೆ ಸೇರಿದವರೆಂದು ದೃಢೀಕರಣಪಡಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿರುವ ಕೊಡವ ಕ್ಲಾನ್ ಸಂಸ್ಥೆ ಇದೀಗ ವಿಶ್ವ ದಾಖಲೆ ಬರೆಯಲು ಸಜ್ಜಾಗಿದೆ.

ಕೊಡವರು ಒಂದೇ ಕುಲಕ್ಕೆ ಸಂಬAಧಪಟ್ಟವರು ಎಂಬ ಹಿನ್ನೆಲೆಯಲ್ಲಿ ವಂಶವೃಕ್ಷ ಜೋಡಣೆ ಕಾರ್ಯಕ್ರಮದ ಅಂಗವಾಗಿ ಒಕ್ಕೂಟ ಎಂಬ ಕೊಡವರ ಬೃಹತ್ ಸಮಾವೇಶವನ್ನು ವೀರಾಜಪೇಟೆ ಸಮೀಪದ ಬಿಟ್ಟಂಗಾಲದ “ಕೂರ್ಗ್ ಎತ್ನಿಕ್”ನಲ್ಲಿ ಕೊಡವ ಕ್ಲಾನ್ ಸಂಸ್ಥಾಪಕ ಗುಮ್ಮಟ್ಟೀರ ಕಿಶು ಉತ್ತಪ್ಪ ಆಯೋಜಿಸಿದ್ದರು. ಕಳೆದ ೮ ವರ್ಷಗಳಿಂದ ಕೊಡವ ವಂಶವೃಕ್ಷದ ಬಗ್ಗೆ ಕಾರ್ಯನಿರ್ವಹಿಸುತ್ತಿರುವ ಇವರು ಇಡೀ ಕೊಡವ ಕುಲ ಒಂದು ವಂಶವೃಕ್ಷದಡಿಯಲ್ಲಿ ಬರುತ್ತದೆ. ಈ ವಂಶವೃಕ್ಷವೇ ಅತ್ಯಂತ ದೊಡ್ಡ ಕುಟುಂಬ (ಕುಲ) ಎಂದು ವಿಶ್ವದಾಖಲೆ ಮಾಡುವತ್ತ ಈ ಪ್ರಯತ್ನವನ್ನು ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆಯನ್ನು ಹೊಂದಿರುವ ಕೊಡವ ಕ್ಲಾನ್ ಸಂಸ್ಥೆ ಈ ಒಕ್ಕೂಟ ಸಮಾರಂಭದ ಮುಖಾಂತರ ದಾಖಲೆಗೆ ಹೊರಟಿದೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸುಮಾರು ೬ ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದು ಹಲವಾರು ವಿಭಿನ್ನ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು.

ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಕೊಡವ ಕ್ಲಾನ್ ಸಂಸ್ಥೆಯ ಸಂಸ್ಥಾಪಕ ಗುಮ್ಮಟಿರ ಕಿಶು ಉತ್ತಪ್ಪ, ಎಲ್ಲಾ ಕುಟುಂಬಗಳ ಸುಮಾರು ೫ ಸಾವಿರ ಮಂದಿಯನ್ನು ಒಂದೆಡೆ ಸೇರಿಸಿ ಈಗಾಗಲೇ ಗಿನ್ನಿಸ್ ಬುಕ್‌ನಲ್ಲಿ ದಾಖಲಾಗಿರುವ ೪೫೧೪ ಮಂದಿಯ “ಲಾರ್ಜೆಸ್ಟ್ ಫ್ಯಾಮಿಲಿ ಗ್ಯಾದರಿಂಗ್” ದಾಖಲೆಯನ್ನು ಮುರಿಯುವ ಗುರಿ ಇದಾಗಿದೆ. ಫ್ರಾನ್ಸ್ನಲ್ಲಿ

(ಮೊದಲ ಪುಟದಿಂದ) ಒಲಿಮಿಯಾ ಕುಟುಂಬದ ದಾಖಲೆಯನ್ನು ಮುರಿಯುವುದಕ್ಕಾಗಿ ಸುಮಾರು ೫ ಸಾವಿರಕ್ಕೂ ಹೆಚ್ಚಿನ ಕೊಡವರನ್ನು ಸೇರಿಸಲಾಗುತ್ತಿದೆ. ಇಲ್ಲಿ ಬಂದು ಸೇರುವ ಎಲ್ಲಾ ಕೊಡವರು ಒಂದೇ ಕುಟುಂಬದವರೆAದು ದೃಢೀಕರಿಸಿ ಅವಿನಾಭಾವ ಸಂಬAಧವನ್ನು ಗಟ್ಟಿಗೊಳಿಸುವ ವಿಶ್ವಾಸವನ್ನು ಹೊಂದಿದ್ದೇವೆ. ಎಲ್ಲಾ ಕೊಡವರು ಒಂದೇ ಸ್ಥಳದಲ್ಲಿ ಸೇರುವ ಮೂಲಕ ಹೊಸ ವಿಶ್ವ ದಾಖಲೆ ಮಾಡಲಿದ್ದೇವೆ. ಕೊಡವ ಕ್ಲಾನ್ ಸಂಸ್ಥೆ ಕಳೆದ ೮ ವರ್ಷಗಳಿಂದ ೨೧ ಸಾವಿರಕ್ಕೂ ಹೆಚ್ಚಿನ ಕೊಡವರು ಒಂದೇ ವಂಶ ವೃಕ್ಷದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದು, ಈಗಾಗಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ. ೧೮ ತಲೆಮಾರಿನ ಒಟ್ಟು ೭೫೧ ಕೊಡವ ಕುಟುಂಬಗಳ ದಾಖಲೆಗಳು ಕೊಡವ ಕ್ಲಾನ್ ವಂಶವೃಕ್ಷದಲ್ಲಿದೆ ಎಂದು ಕಿಶು ಉತ್ತಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೊಡವ ಸಾಹಿತಿಗಳು ಬರೆದಿರುವ ಪುಸ್ತಕಗಳ ಮಾರಾಟಕ್ಕಾಗಿ ಪ್ರತ್ಯೇಕ ಮಳಿಗೆ ವ್ಯವಸ್ಥೆ ಮಾಡಲಾಗಿತ್ತು. ಹಲವು ಬಗೆಯ ಸುಮಾರು ೩೦ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿತ್ತು, ಆಹಾರ, ವಾಹನ, ಕೊಡವರ ಬಳಸುವ ಆಭರಣ ಮತ್ತು ಉಡುಪುಗಳು ಸೇರಿದಂತೆ ಹಲವಾರು ಮಳಿಗೆಗಳನ್ನು ತೆರೆದು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಇದೇ ಸಂದರ್ಭ ವಿವಿಧ ಸ್ಪರ್ಧೆಗಳು, ಕೊಡವ ಸೂಪರ್ ಸಿಂಗರ್, ಕೊಡವ ವಾಲಗತ್ತಾಟ್, ಪ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ನೇತೃತ್ವದಲ್ಲಿ ಪ್ಯಾಶನ್ ಶೋ ಕಾರ್ಯಕ್ರಮ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು.

ಹಿರಿಯ ಕಲಾವಿದ ಮುಲ್ಲೇರ ಜಿಮ್ಮಿ ಅಯ್ಯಪ್ಪ ಅವರ ನೆನಪಿನಲ್ಲಿ ಅವರ ಹಾಡುಗಳನ್ನು ಕೊಡಗಿನ ಖ್ಯಾತ ಗಾಯಕರು ಹಾಡುವ ಮೂಲಕ ಕೊಡವ ನೈಟ್ಸ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಬೆಳಗ್ಗೆ ೮.೩೦ ಗಂಟೆಯಿAದ ಹೆಸರು ನೋಂದಣಿ ಮೂಲಕ ಆರಂಭವಾಗಿದ್ದು ನೋಂದಣಿಗೊAಡವರ ಸಂಖ್ಯೆ ಕೆಲ ಪ್ರಕ್ರಿಯೆಗಳ ನಂತರ ಸ್ಪಷ್ಟವಾಗಿ ತಿಳಿದು ಬರಬೇಕಾಗಿದೆ.