ಚೆಟ್ಟಳ್ಳಿ, ಡಿ. ೨೪: ರಾಷ್ಟçವು ಬದಲಾಗಬೇಕಾದರೆ ದೇಶದ ಹಿತವನ್ನು ಬಯಸುವ ಬದಲು ನಮ್ಮಿಂದಲೇ ಸಮಾಜದ ಉದ್ಧಾರವಾಗಬೇಕು. ಕೊಡಗಿನ ಗ್ರಾಮಗಳಲ್ಲಿ ಕಂಡು ಬರುವ ಸೌಲಭ್ಯಯುತ ಸರಕಾರಿ ಶಾಲೆಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲವೆಂದು ಹೆಮ್ಮೆಯಿಂದ ಹೇಳಬಹುದಾಗಿದೆ. ಹಿರಿಯರು ವಿದ್ಯಾರ್ಜನೆಗೆ ಮಾಡಿದ ಶ್ರಮದ ಫಲವಾಗಿಯೇ ಗ್ರಾಮೀಣ ಶಾಲೆಗಳು ಈವರೆಗೂ ಉಳಿಯಲು ಸಾಧ್ಯವಾಗಿದೆ ಎಂದು ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆದ ಚೆಟ್ಟಳ್ಳಿ ಪ್ರೌಢಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯಭಾಷಣಕಾರರಾಗಿ ಭಾಗವಹಿಸಿದ ವೀರಾಜಪೇಟೆ ಶ್ರೀ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ತಿಳಿಸಿದರು.
ಶಿಕ್ಷಣ ಪಡೆದರೆ ಸಾಲದು, ಪಡೆದ ಶಿಕ್ಷಣ ಸಮಾಜಕ್ಕೆ ಪ್ರಯೋಜನಕಾರಿಯಾದಾಗ ಮಾತ್ರ ಬದುಕಿನಲ್ಲಿ ಯಶಸ್ವಿಗೊಳ್ಳಲು ಸಾಧ್ಯ. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಅಬ್ದುಲ್ಲ್ ಕಲಾಂ ಅವರ ಆದರ್ಶ ಗುಣಗಳಂತೆ ನಾವು ಎಷ್ಷೇ ಶಿಕ್ಷಣ ಪಡೆದರೂ ಆದರ್ಶ ವ್ಯಕ್ತಿತÀ್ವವನ್ನು ಅವರೇ ರೂಪಿಸಿಕೊಂಡಾಗ ಮಾತ್ರ ಬದುಕಿನಲ್ಲಿ ಯಶಸ್ವಿ ಸಾಧ್ಯ. ಗಾಂಧಿಯವರ ಪ್ರತಿಮೆ ರೂಪಿಸುವ ಬದಲು ಅವರ ಆದರ್ಶಗಳನ್ನು ನಾವೇ ಅಳವÀಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂದರು.
ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಂಡಾಗ ಇಲ್ಲಿನ ಸಂಸ್ಕೃತಿ, ಆಚಾರ - ವಿಚಾರ ಗುರುಕುಲ ಶಿಕ್ಷಣವೇ ಬ್ರಿಟಿಷರು ದೇಶಬಿಟ್ಟು ತೆರಳಲು ಸಹಕಾರಿಯಾದವು. ಎಲ್ಲಾ ಜಾತಿ ಜನಾಂಗ ಹೊಂದಿರುವ ನಾವೆಲ್ಲರೂ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವುಕುಮಾರ್ ನಾಣಯ್ಯ ತಿಳಿಸಿದರು. ಮುಳ್ಳಂಡ ಹಾಗೂ ಬಟ್ಟಿರ ಕುಟುಂಬಸ್ಥರು ಜಾಗ ನೀಡಿದ ಫಲವಾಗಿ ಚೆಟ್ಟಳ್ಳಿ ಪ್ರೌಢಶಾಲೆ ಪ್ರಾರಂಭವಾಗಲು ಸಾಧ್ಯವಾಯಿತೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದರು.
೧೯೬೩ರಲ್ಲಿ ಚೆಟ್ಟಳ್ಳಿ ಪ್ರೌಢಶಾಲೆ ಪ್ರಾರಂಭಗೊAಡು ಉತ್ತಮ ವಿದ್ಯಾಭ್ಯಾಸದ ಮೂಲಕ ಉತ್ತಮ ಫಲಿತಾಂಶವನ್ನು ಪಡೆಯುತ್ತಿದೆ. ಎಲ್ಲರು ಕೈಜೋಡಿಸುವ ಮೂಲಕ ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕೆಂದು ಚೆಟ್ಟಳ್ಳಿ ಪ್ರೌಢಶಾಲಾ ಆಡಳಿತಮಂಡಳಿಯ ಅಧ್ಯಕ್ಷ ಪೇರಿಯನ ಪಿ.ಜಯಾನಂದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ದತ್ತಿನಿಧಿ ಹಾಗೂ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದÀ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಾಲಾ ಮುಖ್ಯೋಪಧ್ಯಾಯ ಜಿ.ಸಿ. ಸತ್ಯನಾರಾಯಣ ಸ್ವಾಗತಿಸಿ, ಶಿಕ್ಷಕಿ ಕೆ.ತಿಲಕ ಶಾಲಾ ವರದಿಯನ್ನು ವಾಚಿಸಿದರು. ಶಿಕ್ಷಕ ಎಂ.ಈ. ಮನೋಜ್ ವಂದಿಸಿ, ಯು.ಸುನಂದ ನಿರೂಪಿಸಿದರು. ನಂತರದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾಯಕ್ರಮಗಳು ನೆರವೇರಿತು. ಕುಶಾಲನಗರ ಎಲೆಕ್ಟಿçಕಲ್ ಮತ್ತು ಪಿ.ಡಬ್ಲೂö್ಯ.ಡಿ ಗುತ್ತಿಗೆದಾರ ವಸಂತ ರೈ, ಶಾಲಾ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ, ಕಾರ್ಯದರ್ಶಿ ಬಟ್ಟಿರ ರಕ್ಷÄ ಕಾಳಪ್ಪ ಅತಿಥಿಗಳಾಗಿ ಭಾಗವಹಿಸಿದ್ದರು.
ಕ್ರೀಡೋತ್ಸವ: ನಿವೃತ್ತ ಕ್ಯಾಪ್ಟನ್ ಮುಳ್ಳಂಡ ಪಿ.ತಿಮ್ಮಯ್ಯ ಧ್ವಜರೋಹಣ ನೆರವೇರಿಸಿ ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಗೆ ದೇಶಭಕ್ತಿ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು. ಶಾಲಾ ಮಕ್ಕಳಿಂದ ಪಥಸಂಚಲನ ನೆರವೇರಿತು. ಕೊಂಗAಡ ವಿಜಯ ಮುತ್ತಣ್ಣ ಕ್ರೀಡಾಜ್ಯೋತಿ ಬೆಳಗಿದರು. ಮಕ್ಕಳಿಂದ ವ್ಯಾಯಾಮ, ಯೋಗಾಸನ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಕ್ರೀಡೆ ಹಾಗೂ ಚೆಟ್ಟಳ್ಳಿ ಸ್ಪೋರ್ಟ್ಸ ಕ್ಲಬ್ ವತಿಯಿಂದ ಸಾರ್ವಜನಿಕರಿಗೆ ನಿಧಾನ ಸೈಕಲ್ ಸ್ಫರ್ಧೆ, ಮೋಟಾರ್ ಸೈಕಲ್ ಸ್ಪರ್ಧೆ ಹಾಗೂ ಹಗ್ಗಜಗ್ಗಾಟ ಸ್ಪರ್ಧೆ ನೆರವೇರಿತು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪೇರಿಯನ ಜಯಾನಂದ, ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ, ಖಜಾಂಜಿ ಬಟ್ಟಿರ ರಕ್ಷÄ ಕಾಳಪ್ಪ, ನಿರ್ದೆಶಕ ಮುಳ್ಳಂಡ ಕಾಶಿ ದೇವಯ್ಯ, ಮುಳ್ಳಂಡ ಮಾಯಮ್ಮ, ಪುತ್ತರಿರ ಕಾಶಿ ಸುಬ್ಬಯ್ಯ, ಮುಳ್ಳಂಡ ಪುಷ್ಯ ರಂಜನ್, ಪಳಂಗAಡ ಗೀತಾ ಸುಬ್ಬಯ್ಯ, ಶಾಲಾ ಮುಖೋಪಾಧ್ಯಾಯ ಸತ್ಯನಾರಾಯಣ ಇದ್ದರು. ಚೆಟ್ಟಳ್ಳಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು.