ಸೋಮವಾರಪೇಟೆ, ಡಿ. ೨೫: ಸಮೀಪದ ಕಕ್ಕೆಹೊಳೆ ಜಂಕ್ಷನ್ನಲ್ಲಿರುವ ಶ್ರೀಮುತ್ತಪ್ಪ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಮತ್ತು ಬಜೆಗುಂಡಿ ಗ್ರಾಮದಲ್ಲಿರುವ ಶ್ರೀಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ತಾ. ೨೭ ರಂದು ಮಂಡಲ ಪೂಜೋತ್ಸವ ನಡೆಯಲಿದೆ.
ಬಜೆಗುಂಡಿ ಗ್ರಾಮದ ದೇವಾಲಯದಲ್ಲಿ ಅಂದು ಬೆಳಿಗ್ಗೆ ೬ ರಿಂದ ೮ರವರೆಗೆ ಗಣಹೋಮ, ಅಷ್ಠಾಭಿಷೇಕ ಮತ್ತು ಉಷಾಃ ಪೂಜೆ ನಡೆಯಲಿದೆ. ನಂತರ ಸಂಜೆ ೬ ರಿಂದ ೮ ರವರೆಗೆ ದೀಪಾರಾಧನೆ, ಅತ್ತಾಯಪೂಜೆ, ಮಹಾಮಂಗಳಾರತಿ ಆದ ಬಳಿಕ ಹರಿವರಾಸನಂನೊAದಿಗೆ ಪೂಜಾ ಕಾರ್ಯಗಳು ಮುಕ್ತಾಯಗೊಳ್ಳಲಿದ್ದು ನಂತರ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.
ಪಟ್ಟಣದ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ತಾ.೨೭ರಂದು ಮಂಡಲ ಪೂಜೋತ್ಸವ ಏರ್ಪಡಿಸಲಾಗಿದ್ದು, ಅಂದು ಅಯ್ಯಪ್ಪಸ್ವಾಮಿಗೆ ವರ್ಷಕ್ಕೊಂದು ಬಾರಿ ವಿಶೇಷವಾಗಿ ತುಪ್ಪದ ಅಭಿಷೇಕ ನಡೆಯಲಿದೆ.
ಬೆಳಗ್ಗೆ ೭ ಗಂಟೆಗೆ ಗಣಪತಿ ಹೋಮದೊಂದಿಗೆ ಪೂಜಾ ಕಾರ್ಯಗಳು ಆರಂಭವಾಗಲಿದ್ದು, ೯ಗಂಟೆಗೆ ವರ್ಷಕ್ಕೊಮ್ಮೆ ಧರ್ಮಶಾಸ್ತ ಶ್ರೀಅಯ್ಯಪ್ಪ ದೇವರಿಗೆ ವಿಶೇಷವಾಗಿ ತುಪ್ಪದ ಅಭಿಷೇಕ ನಡೆಯಲಿದೆ.
ಸಂಜೆ ದೀಪಾರಾಧನೆ ನಂತರ ಅಯ್ಯಪ್ಪ ವ್ರತಾಧಾರಿಗಳಿಂದ ಭಜನೆಯಾದ ನಂತರ ಪಡಿಪೂಜೆ ನಡೆಯಲಿದೆ. ಪಡಿಪೂಜೆಯ ನಂತರ ಅತ್ತಾಯ ಪೂಜೆ, ಪುಷ್ಪಾಭಿಷೇಕ, ಭಕ್ತಾದಿಗಳಿಗೆ ದೇವಾಲಯ ಸಮಿತಿ ವತಿಯಿಂದ ಅನ್ನದಾನವನ್ನು ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್ಕುಮಾರ್ ತಿಳಿಸಿದ್ದಾರೆ.