ಮಡಿಕೇರಿ, ಡಿ. ೨೪ : ನೆರೆ ಜಿಲ್ಲೆಗಳಲ್ಲಿ ಚರ್ಮಗಂಟು ರೋಗವು (ಐumಠಿಥಿ sಞiಟಿ ಜiseಚಿse) ವ್ಯಾಪಕವಾಗಿ ಹರಡಿರುವುದರಿಂದ ಕೊಡಗು ಜಿಲ್ಲೆಯಲ್ಲಿಯೂ ಸಹ ವ್ಯಾಪಿಸುವ ಸಾಧ್ಯತೆವಿರುವುದರಿಂದ ಜಿಲ್ಲೆಯ ಎಲ್ಲಾ ರೈತಬಾಂಧವರು, ಸಾರ್ವಜನಿಕರು ತಮ್ಮ ಜಾನುವಾರುಗಳಿಗೆ ಹತ್ತಿರದ ಪಶುವೈದ್ಯ ಸಂಸ್ಥೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಪಶುವೈದ್ಯ ಆಸ್ಪತ್ರೆ, ಮಡಿಕೇರಿ ದೂ.ಸಂ. ೯೪೪೮೬೪೭೨೭೬, ಸಹಾಯಕ ನಿರ್ದೇಶಕರು ಪಶುವೈದ್ಯ ಆಸ್ಪತ್ರೆ, ವೀರಾಜಪೇಟೆ ೯೧೪೧೦೯೩೯೯೬, ಸಹಾಯಕ ನಿರ್ದೇಶಕರು, ಪಶುವೈದ್ಯ ಆಸ್ಪತ್ರೆ ಸೋಮವಾರಪೇಟೆ ದೂ.ಸಂ. ೯೪೪೮೬೫೫೬೬೦, ಸಹಾಯಕ ನಿರ್ದೇಶಕರು, ಪಶುವೈದ್ಯ ಆಸ್ಪತ್ರೆ ಕುಶಾಲನಗರ ೮೯೫೧೪೦೪೦೨೫ ಹಾಗೂ ಸಹಾಯಕ ನಿರ್ದೇಶಕರು, ಪಶುವೈದ್ಯ ಆಸ್ಪತ್ರೆ ಪೊನ್ನಂಪೇಟೆ ೯೪೪೯೦೮೧೩೪೩ ನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಪಿ. ಸುರೇಶ್ ಭಟ್ ತಿಳಿಸಿದ್ದಾರೆ.