ಸಿದ್ದಾಪುರ, ಡಿ. ೨೫: ಗದ್ದೆಯಲ್ಲಿದ್ದ ಬೃಹತ್ ಗಾತ್ರದ ನಾಗರ ಹಾವನ್ನು ಉರಗ ರಕ್ಷಕ ಸುರೇಶ್ ಪೂಜಾರಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಕರಡಿಗೋಡು ಗ್ರಾಮದಲ್ಲಿ ಕೀರ್ತನ್ ಎಂಬವರು ಗುಹ್ಯ ಗ್ರಾಮದ ಉರಗ ಪ್ರೇಮಿ ಸುರೇಶ್ ಪೂಜಾರಿ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ಸುರೇಶ್ ಮತ್ತು ವಿನೋದ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ವಿನ್ಸನ್ ಎಂಬವರ ಗದ್ದೆಯಲ್ಲಿ ೬ ಅಡಿಯ ನಾಗರ ಹಾವು ಇರುವುದು ಕಂಡುಬAತು. ಬಳಿಕ ಸೆರೆಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಡಲಾಯಿತು.