ಮಡಿಕೇರಿ, ಡಿ. ೨೪: ಗಮನ ಸೆಳೆಯುತ್ತಿರುವ ಯುವ ಕ್ರಿಕೆಟಿಗ ಕೊಡಗಿನವರಾದ ಮಾಚಿಮಾಡ ವಿದ್ವತ್ ಕಾವೇರಪ್ಪ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐ.ಪಿ.ಎಲ್.) ಚುಟುಕು ಕ್ರಿಕೆಟ್ಗೂ ಎಂಟ್ರಿಕೊಟ್ಟಿದ್ದಾರೆ. ಐ.ಪಿ.ಎಲ್. ೧೬ನೇ ಆವೃತ್ತಿಯ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಿನ್ನೆ ಕೊಚ್ಚಿಯಲ್ಲಿ ನಡೆದಿದ್ದು, ವಿದ್ವತ್ ಕಾವೇರಪ್ಪ ರೂ. ೨೦ ಲಕ್ಷ ಮೂಲ ಬೆಲೆಗೆ ಪಂಜಾಬ್ ಕಿಂಗ್ಸ್ ತಂಡದಿAದ ಖರೀದಿಸಲ್ಪಟ್ಟಿದ್ದಾರೆ. ಇವರು ಐ.ಪಿ.ಎಲ್.ಗೆ ಹೊಸ ಪದಾರ್ಪಣೆಯಾದರೆ, ಕಳೆದ ಹಲವು ವರ್ಷಗಳಿಂದ ಐ.ಪಿ.ಎಲ್.ನಲ್ಲಿರುವ ಕೊಡಗಿನ ಮತ್ತೋರ್ವ ಆಟಗಾರ ಕೆ.ಸಿ. ಕಾರ್ಯಪ್ಪ ರಾಜಸ್ಥಾನ ರಾಯಲ್ಸ್ ತಂಡದಲ್ಲೇ ಉಳಿದಿದ್ದು, ಈ ಮೂಲಕ ೨೦೨೩ರ ಐ.ಪಿ.ಎಲ್.ನಲ್ಲಿ ಕೊಡಗಿನ ಇಬ್ಬರು ಆಟಗಾರರು ಪಂದ್ಯಾವಳಿಯಲ್ಲಿದ್ದಾರೆ.
ಕಳೆದ ರಣಜಿ ಪಂದ್ಯಾವಳಿ ಸಂದರ್ಭ ಅಚ್ಚರಿಯ ಆಯ್ಕೆ ಎಂಬAತೆ ಕರ್ನಾಟಕ ರಣಜಿ ತಂಡಕ್ಕೆ ಡೆಬ್ಯೂ ಆಟಗಾರರಾಗಿ ಸೇರ್ಪಡೆಗೊಂಡಿದ್ದ ವಿದ್ವತ್ ಕಾವೇರಪ್ಪ, ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿರುವ ರಣಜಿ ಸೇರಿದಂತೆ ವಿವಿಧ ಪಂದ್ಯಾವಳಿಯಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನದೊಂದಿಗೆ ಗಮನ ಸೆಳೆಯುತ್ತಿದ್ದಾರೆ. ಈ ಮೂಲಕ ಈ ಬಾರಿಯ ಐ.ಪಿ.ಎಲ್. ಮಿನಿ ಹರಾಜಿಗೂ ಪರಿಗಣಿಸಲ್ಪಟ್ಟ ಅವರಿಗೆ ರೂ. ೨೦ ಲಕ್ಷ ಮೂಲ ಬೆಲೆ ನಿಗದಿಯಾಗಿತ್ತು.
(ಮೊದಲ ಪುಟದಿಂದ) ಇದೇ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಇವರನ್ನು ಆಯ್ಕೆ ಮಾಡಿಕೊಂಡಿದೆ.
ವಿದ್ವತ್ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರ ತಂದೆ ಧನುಗಾಲದವರಾದ ಮಾಚಿಮಾಡ ದೇವಾನಂದ್ (ನಂದ) ಅವರು ಪುತ್ರ ಪ್ರಸ್ತುತ ತೋರುತ್ತಿರುವ ಪ್ರದರ್ಶನದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ಪ್ರಥಮ ಬಾರಿಗೆ ಐ.ಪಿ.ಎಲ್.ಗೆ ಆಯ್ಕೆಯಾಗಿರುವುದು ಹೆಮ್ಮೆಯಾಗಿದೆ ಎಂದಿದ್ದಾರೆ. ವಿದ್ವತ್ ಅವರ ತಾಯಿ ಬೀನಾ (ತಾಮನೆ-ಬಿರುನಾಣಿ ಕರ್ತಮಾಡ) ಅವರು ಕೆಲ ಸಮಯದ ಹಿಂದೆ ವಿಧಿವಶರಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕಳೆದ ವರ್ಷದಿಂದ ಇರುವ ಕೊಡಗಿನವರಾದ ಕೆ.ಸಿ. ಕಾರ್ಯಪ್ಪ ಅದೇ ತಂಡದಲ್ಲಿ ಮುಂದುವರೆದಿದ್ದಾರೆ.