ಕಣಿವೆ, ಡಿ. ೨೫: ಕುಶಾಲನಗರ ತಾಲೂಕಿನ ಕೂಡ್ಲೂರು ಗ್ರಾಮದ ಬಸವೇಶ್ವರ ದೇವಾಲಯದ ಆವರಣದಲ್ಲಿ ಸ್ಥಳೀಯ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ ವತಿಯಿಂದ ಸಾರ್ವ ಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಯಿತು.
ಗ್ರಾಮದ ೨೨ ಮಂದಿ ಅಯ್ಯಪ್ಪ ಮಾಲಾಧಾರಿಗಳು ಸೇರಿ ದೇವಾಲಯದ ಆವರಣದಲ್ಲಿ ಅಯ್ಯಪ್ಪ ಸ್ವಾಮಿ ದೇವರನ್ನು ಪ್ರತಿಷ್ಠಾಪಿಸಿ ಸಾಮೂಹಿಕ ವಾದ ಭಜನೆಯೊಂದಿಗೆ ಪೂಜಿಸಿ ಮಹಾ ಮಂಗಳಾರತಿ ನೆರವೇರಿಸ ಲಾಯಿತು. ಹಾಗೆಯೇ ಸ್ಥಳೀಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನದಾನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು.
ಈ ಸಂದರ್ಭ ಅಯ್ಯಪ್ಪ ಭಕ್ತ ಮಂಡಳಿ ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷ ಕೆ.ಆರ್.ಕೃಷ್ಣ, ಸದಸ್ಯರಾದ ಹೇಮಕುಮಾರ್, ನವೀನ್, ನಂಜುAಡರಾಜೇ ಅರಸು, ಮರಿಗೌಡ, ಸುರೇಶ್ ಸೇರಿದಂತೆ ಇತರರಿದ್ದರು.