ಸೋಮವಾರಪೇಟೆ, ಡಿ. ೨೩: ಇಲ್ಲಿನ ಎಸ್.ಜೆ.ಎಂ. ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಅಡುಗೆ ಮಾಡುವ ಸ್ಪರ್ಧೆ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳು ಹಲವು ಬಗೆಯ ತಿಂಡಿ ತಿನಿಸುಗಳನ್ನು ಮಾಡಿ, ಸ್ಥಳದಲ್ಲಿಯೇ ವ್ಯಾಪಾರ ಮಾಡಿದರು. ಶಾಲಾ ಶಿಕ್ಷಕರು ಹಾಗೂ ಪೋಷಕರು ತಿಂಡಿ ತಿನಿಸುಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ವ್ಯಾಪಾರ ಮಾಡುವ ಬಗೆ ಹಾಗೂ ಲಾಭದ ಮಾಹಿತಿ ನೀಡಲಾಯಿತು.
ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯರಾದ ಹೆಚ್. ಮಾರಪ್ಪ, ಶಿಕ್ಷಕರಾದ ಎಸ್.ಕೆ. ರಾಣಿ, ಪ್ರಕಾಶ್ ಹೆಚ್. ದಿಮ್ಮಳ್ಳಿ, ಸಿ. ಜಯಪ್ಪ, ಲಕ್ಷಿö್ಮÃ ಮತ್ತು ತೇಜಸ್ವಿನಿ ಉಪಸ್ಥಿತರಿದ್ದರು.