ಮಡಿಕೇರಿ, ಡಿ. ೨೩: ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ವಿವಿಧ ವಲಯಗಳಿಗೆ ಅಧ್ಯಕ್ಷರುಗಳನ್ನು ನೇಮಿಸಲಾಯಿತು.
ಗೋಣಿಕೊಪ್ಪದಲ್ಲಿ ನಡೆದ ಸಭೆಯಲ್ಲಿ ಯುವ ಬ್ಲಾಕ್ ಅಧ್ಯಕ್ಷ ನಾಮೇರ ಅಂಕಿತ್ ಪೊನ್ನಪ್ಪ ಮುಂದಾಳತ್ವದಲ್ಲಿ ಕೆ.ಪಿ.ಸಿ.ಸಿ. ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ವಿಧಾನ ಪರಿಷತ್ತು ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಗೋಣಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ನೇಮಕಾತಿ ಪತ್ರ ಹಸ್ತಾಂತರಿಸಿದರು.
ಬಲ್ಯಮಂಡೂರುವಿಗೆ ಚಿಂಡಮಾಡ ಚೇತನ್, ಗೋಣಿಕೊಪ್ಪಕ್ಕೆ ಜೀವಿತ್, ಶ್ರೀಮಂಗಲಕ್ಕೆ ಸುಧಿ ಪೊನ್ನಪ್ಪ, ಟಿ. ಶೆಟ್ಟಿಗೇರಿಗೆ ತಬ್ಬಂಗಡ ಮಾಚಯ್ಯ, ಬಿರುನಾಣಿಗೆ ಅಮನ್ ತಿಮ್ಮಯ್ಯ, ಅತ್ತೂರಿಗೆ ಪಳನಿ, ಬಿ. ಶೆಟ್ಟಿಗೇರಿಗೆ ತರುಣ್ ತಿಮ್ಮಯ್ಯ, ಹುದಿಕೇರಿಗೆ ಭುವಿನ್, ಮಾಯಮುಡಿಗೆ ರಫಿ, ಪೊನ್ನಪ್ಪಸಂತೆ ತಾಜು ಕುಶಾಲಪ್ಪ ಅಧ್ಯಕ್ಷರುಗಳಾಗಿ ನೇಮಕಗೊಂಡಿದ್ದಾರೆ ಎಂದು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನಾಮೇರ ಅಂಕಿತ್ ಪೊನ್ನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.