ಮುಳ್ಳೂರು, ಡಿ. ೨೩: ಸಮಿಪದ ಅಂಕನಹಳ್ಳಿಯ ಮೆಣಸ ಗ್ರಾಮದಲ್ಲಿರುವ ಶ್ರೀ ತಪೋವನ ಕ್ಷೇತ್ರ ಮನೆಹಳ್ಳಿ ಮಠದ ‘ಬಿಲ್ವ’ ಗೋಶಾಲೆಗೆ ಮೇವು ನೀಡಲು ದಾನಿಗಳು ಮುಂದೆ ಬರುವಂತೆ ಮಠಾಧೀಶರಾದ ಮಹಾಂತ ಲಿಂಗ ಸ್ವಾಮೀಜಿ ಮನವಿ ಮಾಡಿದ್ದಾರೆ.
ಗೋಶಾಲೆಯಲ್ಲಿ ೬೦ ರಿಂದ ೭೦ ಗೋವುಗಳಿದ್ದು, ಇಸ್ರೇಲ್ ಮಾದರಿಯಲ್ಲಿ ಸ್ಥಾಪಿಸಲಾಗಿರುವ ಗೋಶಾಲೆ ರಾಷ್ಟçಮಟ್ಟದಲ್ಲಿ ಹೆಸರುಗಳಿಸಿದೆ. ಸ್ವದೇಶಿ ಹಾಗೂ ವಿದೇಶಿಯ ವಿವಿಧ ೨೫ ತಳಿಯ ಗೋವುಗಳಿದ್ದು, ಮಠದ ವತಿಯಿಂದ ಗೋವುಗಳಿಗೆ ಮೇವು ಮತ್ತು ಗೋಶಾಲೆಯ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಈಗ ಗೋವುಗಳಿಗೆ ಮೇವಿನ ಕೊರತೆ ಕಾಣಿಸಿಕೊಂಡಿದೆ.
ಕೊರತೆ ನೀಗಿಸುವ ಸಲುವಾಗಿ ಮಠದ ಭಕ್ತರು ಮತ್ತು ದಾನಿಗಳು ಗೋಶಾಲೆಗೆ ಮೇವು ಒದಗಿಸಿಕೊಡುವಂತೆ ಮಠಾಧೀಶರಾದ ಮಹಾಂತಲಿAಗ ಸ್ವಾಮೀಜಿ ದಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.