ಮಡಿಕೇರಿ, ಡಿ. 22: 2022-23ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ “ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆ ಕಾರ್ಯಕ್ರಮದಡಿ ಸಾಮಾನ್ಯ-27, ಪ.ಜಾತಿ-3, ಪ.ಪಂ-2 ಒಟ್ಟು 32 ಹೈನುಗಾರಿಕೆ ಘಟಕ (ಘಟಕ ವೆಚ್ಚ 62000 ಒಂದು ಮಿಶ್ರತಳಿ ಹಸು/ಎಮ್ಮೆ ಸಹಾಯಧನ ಪರಿಶಿಷ್ಟ ಜಾತಿ/ಪಂಗಡ (ಶೇ. 33.33) ಸಾಮಾನ್ಯ ಶೇ. 25 ಸಹಾಯಧನ) ಕಾರ್ಯ ಕ್ರಮವನ್ನು ಅನುಷ್ಟಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.
ಫಲಾನುಭವಿ ಆಧಾರಿತ ಕಾರ್ಯಕ್ರಮಕ್ಕೆ ಆದ್ಯತೆಯ ಮೇರೆಗೆ ಫಲಾನುಭವಿಗಳನ್ನು ಕೂಲಿ, ಕೃಷಿ ಕಾರ್ಮಿಕರು ಮತ್ತು ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರನ್ನು ಆಯ್ಕೆ ಮಾಡಲಾಗುವುದು. ಸರ್ಕಾರದ ನಿಯಮದಂತೆ ಮಹಿಳೆಯರಿಗೆ ಶೇ. 33 ರಷ್ಟು, ಅಲ್ಪಸಂಖ್ಯಾತರಿಗೆ (ಶೇ. 15) ಹಾಗೂ ವಿಶೇಷಚೇತನರಿಗೆ ಕನಿಷ್ಟ ಶೇ.3 ರಷ್ಟು ಆದ್ಯತೆ ನೀಡಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡುವ ಜಾತಿ ಪ್ರಾಮಾಣ ಪತ್ರವನ್ನು ಹೊಂದಿರಬೇಕು. (ಪ್ರಮಾಣ ಪತ್ರದಲ್ಲಿ ಆರ್‍ಡಿ ನಂಬರ್ ಇರಬೇಕು). ಆಸಕ್ತ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ, ಮಡಿಕೇರಿ 9448647276, ವೀರಾಜಪೇಟೆ 9141093996, ಪೆÇನ್ನಂಪೇಟೆ 9449081343, ಸೊಮವಾರಪೇಟೆ 9448655660, ಕುಶಾಲನಗರ 8951404025 ಇವರನ್ನು ಸಂಪರ್ಕಿಸ ಬಹುದು. ಅರ್ಜಿಯನ್ನು ಭರ್ತಿ ಮಾಡಿ 2023 ರ ಜನವರಿ 10 ರೊಳಗೆ ತಮ್ಮ ವ್ಯಾಪ್ತಿಯ ತಾಲೂಕಿನ ಪಶುವೈದ್ಯ ಆಸ್ಪತ್ರೆ - ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಸುರೇಶ್ ಭಟ್ ತಿಳಿಸಿದ್ದಾರೆ.