ಮಡಿಕೇರಿ, ಡಿ. 22: ಮೂಲತಃ ಇಬ್ನಿವಳವಾಡಿ ನಿವಾಸಿ, ಕುಶಾಲನಗರದಲ್ಲಿ ನೆಲೆಸಿದ್ದ ಅಂಜಪರವಂಡ ಕುಟುಂಬದ ಪಟ್ಟೆದಾರರಾಗಿದ್ದ ಮಾಜಿ ಸುಬೇದಾರ್ ಅಂಜಪರವಂಡ ಸಿ. ಪೊನ್ನಪ್ಪ (98) ಅವರು ತಾ. 21 ರಂದು ನಿಧನರಾದರು. ಮೃತ ಪೊನ್ನಪ್ಪ ಅವರು 2ನೇ ಮಹಾಯುದ್ಧ ಹಾಗೂ 1965ರ ಇಂಡೋ-ಪಾಕ್ ಸಮರದಲ್ಲಿ ಭಾಗವಹಿಸಿದ್ದರು. 1970ರಲ್ಲಿ ಸೇನೆಯಿಂದ ನಿವೃತ್ತರಾದ ಇವರು ಬಳಿಕ ಚೆನ್ನೈಯಲ್ಲಿ ದಿ ಹಿಂದೂ ಪತ್ರಿಕಾ ಸಂಸ್ಥೆಯಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕೆಲವು ವರ್ಷ ಕೆಲಸ ನಿರ್ವಹಿಸಿದ್ದರು.