ಮಡಿಕೇರಿ, ಡಿ. 22: ಮುಂಬೈನ ಕೂರ್ಗ್ ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸಲಹೆಗಾರ ರಾಗಿದ್ದ ಮೂಲತಃ ಮಕ್ಕಂದೂರು ಗ್ರಾಮದ ನಾಪಂಡ ಎಂ. ರಮೇಶ್ (61) ಅವರು ತಾ. 21 ರಂದು ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ರಮೇಶ್ ಅವರು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಸಹೋದರರಾಗಿದ್ದು, ಅಂತ್ಯಕ್ರಿಯೆ ಮುಂಬೈಯಲ್ಲಿ ನೆರವೇರಿತು.