ವಿಜೇತರ ವಿವರ
ಸುಂಟಿಕೊಪ್ಪ, ಡಿ. 22: ಕೊಡಗು ಜಿಲ್ಲಾ ಮಟ್ಟದ ಕ್ರಿಸ್ತ ಜಯಂತಿ ಗೀತ ಗಾಯನ ಸ್ಪರ್ಧೆಯಲ್ಲಿ ಹಿರಿಯ ವಿಭಾಗದಲ್ಲಿ ಕುಶಾಲನಗರದ ಸಂತ ಸೆಬಾಸ್ಟೀನ್ ದೇವಾಲಯ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.
ಸುಂಟಿಕೊಪ್ಪ ಸಂತ ಅಂತೋಣಿ ಶಾಲಾ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಮಟ್ಟದ ಕ್ರಿಸ್ತ ಜಯಂತಿ ಗೀತ ಗಾಯನ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಧರ್ಮಕೇಂದ್ರಗಳಿಂದ 25 ತಂಡಗಳು ಭಾಗವಹಿಸಿದ್ದು ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳ ವಿಭಾಗದಲ್ಲಿ ಪ್ರಥಮ ಸ್ಥಾನ ಸಂತ ಮೈಕಲ್ ಶಾಲೆ ಮಡಿಕೇರಿ, ದ್ವಿತೀಯ ಸ್ಥಾನ ಫಾತಿಮಾ ಕಾನ್ವೆಂಟ್ ಕುಶಾಲನಗರ, ತೃತೀಯ ಸ್ಥಾನ ನಿರ್ಮಲ ವಿದ್ಯಾಭವನ ಹಟ್ಟಿಹೊಳೆ ಪಡೆದುಕೊಂಡವು.
ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ವಿಭಾಗದಲ್ಲಿ ಪ್ರಥಮ ಸೈಂಟ್ ಅನ್ನಸ್ ಕಾಲೇಜು ವೀರಾಜಪೇಟೆ, ದ್ವಿತೀಯ ಸ್ಥಾನ ಸಂತ ಮೈಕಲ್ಸ್ ವಿದ್ಯಾಸಂಸ್ಥೆ ಮಡಿಕೇರಿ, ತೃತೀಯ ಸ್ಥಾನ ಸೈಂಟ್ ಜೋಸೆಫ್ ಕಾನ್ವೆಂಟ್ ಮಡಿಕೇರಿ ಪಡೆದುಕೊಂಡವು.
ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಸಂತ ಸಬಾಸ್ಟೀನ್ ದೇವಾಲಯ ಕುಶಾಲನಗರ, ವಿರಾಜಪೇಟೆ ಸೈಂಟ್ ಆ್ಯನ್ಸ್ ದೇವಾಲಯ ದ್ವಿತೀಯ, ಹಾಗೂ ಹಟ್ಟಿಹೊಳೆಯ ಹೋಲಿ ರೋಸ್ಸಾರಿ ದೇವಾಲಯ ತೃತೀಯ ಸ್ಥಾನವನ್ನು ಪಡೆದುಕೊಂಡವು.
25 ತಂಡಗಳು ಭಾಗವಹಿಸಿದ್ದು ಎಲ್ಲಾ ಸ್ಪರ್ಧಿಗಳು ಆಕರ್ಷಕ ಉಡುಗೆ ತೊಡುಗೆಗಳನ್ನು ತೊಟ್ಟು ತೀವ್ರ ಪೈಪೋಟಿ ನೀಡಿದರು. ನೆರೆದಿದ್ದ ಬಾಂಧವರ ಮನತಣಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ವಹಿಸಿ ಮಾತನಾಡಿದರು. ಸಮಾರಂಭದ ನಿರ್ದೇಶಕ ಹಟ್ಟಿಹೊಳೆಯ ಹೋಲಿ ರೋಸ್ಸಾರಿ ದೇವಾಲಯದ ಧರ್ಮಗುರುಗಳಾದ ಗಿಲ್ಬರ್ಟ್ ಡಿಸಿಲ್ವಾ, ಗೀತ ಗಾಯನ ಸ್ಪರ್ಧೆಯ ಆಯೋಜಿತರಾದ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ರೆ.ಫಾ. ಅರುಳ್ ಸೆಲ್ವಕುಮಾರ್, ರೆ.ಫಾ. ರತ್ನಾಕರ್, ರೆ.ಫಾ. ನವೀನ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಜರ್ಮಿ ಡಿಸೋಜ, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ವಿ.ಎ. ಲಾರೆನ್ಸ್, ಸಂತ ಕ್ಲಾರ ಕನ್ಯಾಸ್ತ್ರೀ ಮಠದ ಕನ್ಯಾಸ್ತ್ರೀ ನಿರ್ಮಲ, ರೋಮನ್ ಕ್ಯಾಥೋಲಿಕ್ ಅಸೋಸಿ ಯೇಷನ್ ಉಪಾಧ್ಯಕ್ಷ ಜಾನ್ಸ್ನ್ ಪಿಂಟೋ, ವಿನ್ಸಿ ಡಿಸೋಜ, ಕೂಡಿಗೆ ಗ್ರಾ.ಪಂ. ಸದಸ್ಯೆ ಫಿಲೋಮಿನಾ, ಗ್ರೇಸಿ, ರೋಸ್ಮೇರಿ ರಾಡ್ರಿಗಸ್, ನಿವೃತ್ತ ಪೊಲೀಸ್ ಎ.ಎಸ್.ಐ. ಅಂತೋಣಿ ಡಿಸೋಜ, ಪಿ.ಎಂ. ಬಿಜು, ತೋಮಸ್ ಮತ್ತಿತರರು ಇದ್ದರು.