ಕೂಡಿಗೆ, ಡಿ. 22: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು, ಚಿಕ್ಕತ್ತೂರು ಗ್ರಾಮಗಳ ಸಂಪರ್ಕ ರಸ್ತೆ, ಮತ್ತು ಹಾರಂಗಿ , ಮತ್ತು ಕೂಡುಮಂಗಳೂರು ಗ್ರಾಮದ ಮುಖ್ಯ ರಸ್ತೆಗೆ ಜೋಡಣೆಯ ಗ್ರಾಮದ ಉಪ ರಸ್ತೆಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನವರ ರೂ. 85 ಲಕ್ಷ ಅನುದಾನದಲ್ಲಿ ಗ್ರಾಮದ ಕಾಂಕ್ರೀಟ್ ರಸ್ತೆಯ ಕಾಮಗಾರಿಗಳು ನಡೆಯುತ್ತಿವೆ.

ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಶಾಸಕ ಅನುದಾನ ಮತ್ತು ಗ್ರಾಮ ಪಂಚಾಯಿತಿ 15 ನೇ ಹಣಕಾಸು ಯೋಜನೆ ಹಣ ಮತ್ತು ಮಳೆ ಹಾನಿ ಅನುದಾನ ಸೇರಿದಂತೆ ವಿವಿಧ ಯೋಜನೆಯ ಅನುದಾನದ ಕಾಮಗಾರಿಯ ಕ್ರಿಯಾ ಯೋಜನೆ ಅನುಷ್ಠಾನಗೊಂಡು ಶಾಸಕರಿಂದ ಭೂಮಿ ಪೂಜೆ ನೆರವೇರಿಸಲ್ಪಟ್ಟಿತು. ಈ ಸಂದರ್ಭದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್, ರೂಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.