ಮಡಿಕೇರಿ, ಡಿ. 22: ನಗರದ ಸಂಚಾರಿ ಪೆÇಲೀಸರು ನಗರದ ಹಲವು ಕಾಲೇಜುಗಳಿಗೆ ಭೇಟಿ ನೀಡಿ ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರಿ ಪಾಲನೆಯ ಅರಿವು ಮೂಡಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಚಾರಿ ವಿಭಾಗದ ಸಹಾಯಕ ನಿರೀಕ್ಷಕ ನಂದ ಐ.ಪಿ. ಅವರು ವಿದ್ಯಾರ್ಥಿಗಳಿಗೆ ಚಾಲನೆ ಪರವಾನಿಗೆ ಇಲ್ಲದೆ ವಾಹನ ಚಲಾಯಿಸುವುದು ಕಾನೂನು ಬಾಹಿರ ಮತ್ತು ಪ್ರತಿಯೊಬ್ಬರೂ ಸಂಚಾರಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತವರಾಗಬೇಕು ಹಾಗೂ ನಿಮ್ಮ ನಿಮ್ಮ ಪಾಲಕರ ವಾಹನದ ಎಲ್ಲಾ ರಹದಾರಿ ಪತ್ರಗಳು (ಡಾಕ್ಯುಮೆಂಟ್) ಸರಿ ಇದೆಯೇ ಎಂದು ಪರಿಶೀಲಿಸಿ, ಸರಿ ಇಲ್ಲದ ಪಕ್ಷದಲ್ಲಿ ಕೂಡಲೇ ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಂಚಾರಿ ಠಾಣೆಯ ಕರ್ತಮಯ್ಯ ಹಾಗೂ ಪ್ರಸಾದ್ ಹಾಜರಿದ್ದರು.