ಚೆಟ್ಟಳ್ಳಿ, ಡಿ. 22: ವೀರಾಜಪೇಟೆ ತಾಲೂಕು ಜೆಡಿಎಸ್ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ವೀರಾಜಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಪಿ.ಎ. ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ವೀರಾಜಪೇಟೆ ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರಾಗಿ ಭವ್ಯಶ್ರೀ ಎಸ್.ಸಿ., ತಾಲೂಕು ರೈತ ಘಟಕದ ಅಧ್ಯಕ್ಷರಾಗಿ ಬಾಳೆಕುಟ್ಟಿರ ದಿನಿ ಬೋಪಯ್ಯ, ಮಾಹಿತಿ ತಂತ್ರಜ್ಞಾನ ಘಟಕದ ಅಧ್ಯಕ್ಷರಾಗಿ ಕುಲ್ಲಚಂಡ ಕಾರ್ಯಪ್ಪ, ಹಿಂದುಳಿದ ವರ್ಗದ ಅಧ್ಯಕ್ಷರಾಗಿ ಓ.ಬಿ. ಹರೀಶ್, ಮಾನವ ಹಕ್ಕು ಸಂರಕ್ಷಣಾ ಕಾರ್ಮಿಕರ ಕುಂದು ಕೊರತೆ ಘಟಕದ ಅಧ್ಯಕ್ಷರಾಗಿ ಕೆ.ಎಸ್. ರಜಾಕ್, ವಾಣಿಜ್ಯ ಮತ್ತು ಕೈಗಾರಿಕಾ ಘಟಕದ ಅಧ್ಯಕ್ಷರಾಗಿ ವೈ.ಯು. ಸಂಶೀರ್, ಪದವೀಧರ ಘಟಕದ ಅಧ್ಯಕ್ಷರಾಗಿ ಟಿ.ಎಸ್. ಮಧು, ಕ್ರೀಡಾ ಘಟಕದ ಅಧ್ಯಕ್ಷರಾಗಿ ಟಿ.ಆರ್. ವಿವೇಕ್, ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಟಿ.ಬಿ. ಉಮೇಶ್, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾಗಿ ಹೆಚ್.ಎಸ್. ರಾಜೇಶ್, ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷರಾಗಿ ವೈ.ಆರ್. ಸುರೇಶ್, ತಾಲೂಕು ಎಸ್.ಸಿ. ಮಹಿಳಾ ಘಟಕದ ಅಧ್ಯಕ್ಷೆಯಾಗಿ ಭೈರ ಬೇಬಿ, ವಿಶೇಷಚೇತನ ಘಟಕದ ಅಧ್ಯಕ್ಷರಾಗಿ ಪಿ.ಎಂ. ಖಾಸಿಂ, ಸೇವಾದಳದ ಅಧ್ಯಕ್ಷರಾಗಿ ಕಾಣತಂಡ ಸಿ. ಬೋಪಣ್ಣ, ಸಾಂಸ್ಕøತಿಕ ಘಟಕದ ಅಧ್ಯಕ್ಷರಾಗಿ ಸುನಿಲ್ ಮಂಡಲ್, ಕ್ರೈಸ್ತ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಸಿ.ಎ. ಕ್ರಿಸ್ಟಿ, ಬುಡಕಟ್ಟು ಅಲೆಮಾರಿ ಆದಿವಾಸಿ ಘಟಕದ ಅಧ್ಯಕ್ಷರಾಗಿ ಪಿ.ಕೆ. ಸಿದ್ದ, ಮತ್ಸ್ಯ ಕೃಷಿ ಸಾಕಾಣಿಕೆ ಘಟಕದ ಅಧ್ಯಕ್ಷರಾಗಿ ಪಿ.ಕೆ. ಸುರೇಶ್, ಕಾನೂನು ಘಟಕದ ಅಧ್ಯಕ್ಷೆಯಾಗಿ ಡಿ.ಆರ್. ಜಾನ್ಸಿ (ವಕೀಲರು), ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಪಿ.ಜೆ. ಸಜಿತ್, ತಾಂತ್ರಿಕ ಘಟಕದ ಅಧ್ಯಕ್ಷರಾಗಿ ಚಿಲ್ಲವಂಡ ಗಣಪತಿ ಇವರುಗಳನ್ನು ನೇಮಕ ಮಾಡಿದ್ದಾರೆ.