ಮಡಿಕೇರಿ, ಡಿ. ೨೩: ಮುಂದಿನ ತಿಂಗಳು ಭುವನೇಶ್ವರದಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ಹಾಕಿ ಪಂದ್ಯಾವಳಿಯ ಟ್ರೋಫಿಗೆ ಇಂದು ರಾಜಧಾನಿ ಬೆಂಗಳೂರಿನಲ್ಲಿ ಸ್ವಾಗತ ಕೋರಲಾಯಿತು. ಈ ಟ್ರೋಫಿಯನ್ನು ದೇಶದ ಎಲ್ಲಾ ರಾಜ್ಯಗಳಿಗೆ ಕೊಂಡೊಯ್ದು ಪ್ರದರ್ಶಿಸಲಾಗುತ್ತಿದೆ. ಕೇರಳದಿಂದ ಈ ಟ್ರೋಫಿಯನ್ನು ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ|| ಎ.ಬಿ. ಸುಬ್ಬಯ್ಯ ಅವರು ಸ್ವಾಗತಿಸಿ, ರಾಜ್ಯಕ್ಕೆ ಟ್ರೋಫಿಯೊಂದಿಗೆ ಆಗಮಿಸಿದರು.
ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಹಾಕಿ ಕರ್ನಾಟಕದ ಪ್ರಮುಖರು, ಹಾಕಿಪಟುಗಳು ಬರಮಾಡಿಕೊಂಡರು. ಬಳಿಕ ರಾಜಭವನದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಟ್ರೋಫಿಯನ್ನು ಸ್ವಾಗತಿಸಿದರು. ವಿವಿಧೆಡೆ ಪ್ರದರ್ಶನದೊಂದಿಗೆ ಸಂಜೆ ಫೀ.ಮಾ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಸಮಾರಂಭ ಜರುಗಿತು. ಕೊಡಗಿನವರಾದ ಹಾಕಿ ಕರ್ನಾಟಕ ಹಾಗೂ ಇತರ ಪ್ರಮುಖರಾದ ಡಾ|| ಎ.ಬಿ. ಸುಬ್ಬಯ್ಯ, ವಿ.ಆರ್. ರಘುನಾಥ್, ಬಿ.ಜೆ. ಕಾರ್ಯಪ್ಪ, ವಿ.ಎಸ್. ವಿನಯ್, ಕೂತಂಡ ಪೂಣಚ್ಚ ಸೇರಿದಂತೆ ಹಲವಾರು ಮಂದಿ ಭಾಗಿಗಳಾಗಿದ್ದರು.