ಮಡಿಕೇರಿ, ಡಿ. ೨೩: ಇದೇ ಮೊದಲ ಬಾರಿಗೆ ಕೊಡಗಿನ ತುಳು ಭಾಷಿಕರನ್ನು ಒಗ್ಗೂಡಿಸಿ ರೂಪಿಸಲಾಗಿರುವ ಕೊಡಗು ತುಳುವೆರೆ ಸಮಿತಿಯ ಪ್ರಪ್ರಥಮ ಕೊಡಗು ತುಳುವೆರೆ ಪ್ರೀಮಿಯರ್ ಲೀಗ್ ಶುಭಾರಂಭವಾಗಿದೆ. ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಅತಿಥಿ ಗಣ್ಯರು ಮೂರು ದಿನಗಳ ಕ್ರಿಕೆಟ್ ಹಬ್ಬಕ್ಕೆ ಚಾಲನೆ ನೀಡಿದರು. ಸಾಹಿತಿ ಹಾಗೂ ವೈದ್ಯ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಸಮಾರಂಭವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಡಾ. ಕುಶ್ವಂತ್, ಕೊಡಗಿನ ಅಭಿವೃದ್ಧಿಯಲ್ಲಿ ತುಳು ಭಾಷಿಕರ ಕೊಡುಗೆ ಗಣನೀಯವಾಗಿದೆ ಎಂದರು. ಭಾಷೆಯು ಒಂದು ಪ್ರದೇಶ ಅಥವಾ ಜಾತಿಗೆ ಸೀಮಿತವಾದುದಲ್ಲ.
ಅದು ಪ್ರಾದೇಶಿಕತೆ ಮತ್ತು ಸಂಸ್ಕೃತಿಯನ್ನೂ ಪ್ರತಿಬಿಂಬಿಸುತ್ತದೆ. ಕ್ರೀಡೆಯಿಂದ ಸಾಮರಸ್ಯ, ಪ್ರೀತಿ, ಸಂಬAಧ, ವ್ಯವಹಾರ ಮತ್ತು ಭಾಷಾ ಸೌಹಾರ್ದತೆ ಬೆಳೆಯುತ್ತದೆ. ಇಂತಹ ದೂರದೃಷ್ಟಿಯ ಕಾರ್ಯಕ್ರಮ ಶ್ಲಾಘನೀಯ ಎಂದರು.
ಅತಿಥಿಯಾಗಿದ್ದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ತುಳು ಭಾಷೆಯ ಉಳಿವಿಗಾಗಿ ಮತ್ತು ಒತ್ತಡದ ಬದುಕಿನಿಂದ ಹೊರಬರಲು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೂ ಕ್ರೀಡೆಯಲ್ಲಿ ಅವಕಾಶ ಸಿಗುವಂತಾಗಲಿ ಎಂದು ಆಶಿಸಿದರು.
ಕ್ರೀಡೆಯಲ್ಲಿ ಶಿಸ್ತು ಪ್ರದರ್ಶಿಸುವಂತೆ ಕಿವಿಮಾತು ಹೇಳಿದ ಉದ್ಯಮಿ ಅನಿಲ್ ಸೀನಪ್ಪ ಪೂಜಾರಿ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಸಾಮರ್ಥ್ಯ ಪ್ರದರ್ಶಿಸಿ ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು. ಸಭಾಧ್ಯಕ್ಷತೆ ವಹಿಸಿದ್ದ ತುಳುವೆರೆ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ರೈ, ಕಾರ್ಯಕ್ರಮ ಆಯೋಜನೆ ಮಾಡುವಾಗ ಇಷ್ಟೊಂದು ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿರಲಿಲ್ಲ. ಕ್ರೀಡಾಹಬ್ಬ ಮುಂದುವರಿಸಿಕೊAಡು ಹೋಗಲು ಭರವಸೆ ಮೂಡಿದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಬಳಿಕ ಅತಿಥಿಗಳು ಕ್ರಿಕೆಟ್ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಮೊದಲ ಪಂದ್ಯದಲ್ಲಿ ಕೂರ್ಗ್ ವೈಲ್ಡ್ ಜವಾನ್ಸ್ ಹಾಗೂ ಹಿಂದೂ ಕ್ರಿಕೆಟ್ ಕ್ಲಬ್ ಮುಖಾಮುಖಿಯಾದವು. ರಾಜ್ಯಮಟ್ಟದ ತೀರ್ಪುಗಾರರಾದ ಹರೀಶ್, ದಿನೇಶ್ ಆಚಾರ್ಯ ಮತ್ತು ಶ್ರೀನಿಕೇತ್ ರಾವ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದಾರೆ. ವೀಕ್ಷಕ ವಿವರಣೆಗಾರರಾಗಿ ಮಂಗಳೂರಿನ ವಿಖ್ಯಾತ್ ಕಾರ್ಯ ನಿರ್ವಹಿಸಲಿದ್ದಾರೆ. ಪಂದ್ಯಾವಳಿಯನ್ನು ರಾಷ್ಟçಮಟ್ಟ ದುದ್ದಕ್ಕೂ ವಿಸ್ತರಿಸುವ ಸಲುವಾಗಿ ಜೈ ಟಿ.ವಿ. ಮೂಲಕ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ.