vಕುಶಾಲನಗರ, ಡಿ. 22: ಇಲ್ಲಿಗೆ ಸಮೀಪದ ಕೊಪ್ಪ ಭಾರತ ಮಾತಾ ಕಾಲೇಜಿನ 2022-23ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ರಾಣಿಗೇಟ್ ಆಶ್ರಮ ವಸತಿ ಶಾಲೆ ಆವರಣದಲ್ಲಿ ನಡೆಯಿತು.

ಶಿಬಿರದ ಉದ್ಘಾಟನೆಯನ್ನು ಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷ ರೇಣುಕಸ್ವಾಮಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲ ಫಾ. ಎಬಿನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತ ಮಾತಾ ಶಾಲೆ ಸಿಸ್ಟರ್ ಮಾರ್ಸಿ, ಪಂಚಾಯಿತಿ ಉಪಾಧ್ಯಕ್ಷೆ ಗೀತಾ, ಆಶ್ರಮ ಶಾಲೆಯ ಮುಖ್ಯ ಶಿಕ್ಷಕಿ ಯಶೋಧ, ಬೈಲುಕೊಪ್ಪೆ ಠಾಣೆಯ ಪೊಲೀಸ್ ಅಧಿಕಾರಿಯಾದ ಶಿವರಾಜ್ ನಾಯಕ್ ಮತ್ತಿತರÀರು ಪಾಲ್ಗೊಂಡಿದ್ದರು.

ಏಳು ದಿನಗಳ ಕಾಲ ನಡೆಯಲಿರುವ ಶಿಬಿರದಲ್ಲಿ ಉಪನ್ಯಾಸ ಕಾರ್ಯಕ್ರಮ, ಶ್ರಮದಾನ, ಸಾಂಸ್ಕøತಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆಗಳು, ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಿತ್ಯ ಸಂಪನ್ಮೂಲ ವ್ಯಕ್ತಿಗಳಿಂದ ಹಲವು ವಿಷಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಶಿಬಿರದ ನಿರ್ದೇಶಕ, ಕಾಲೇಜಿನ ಪ್ರಾಂಶುಪಾಲ ಫಾದರ್ ಜೋಸೆಫ್ ವರ್ಗಿಸ್ ನೇತೃತ್ವದಲ್ಲಿ ಶಿಬಿರಾಧಿಕಾರಿಯಾಗಿ ಹೆಚ್.ಆರ್. ದಿನೇಶ್, ಸಹ ಶಿಬಿರಾಧಿಕಾರಿಗಳಾಗಿ ಎಸ್. ದೇವೇಂದ್ರ, ಎಸ್. ತಸ್ಮಿಮೋಳ್ ಕಾರ್ಯನಿರ್ವಹಿಸುತ್ತಿದ್ದಾರೆ.