ಶನಿವಾರಸಂತೆ, ಡಿ. ೨೩: ಬೈಕ್- ಕಾರು ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಸಮೀಪದ ಗೌಡಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕಾರ್ಮಿಕ ಮಂಜುನಾಥ್ ಕೆಲಸದ ನಿಮಿತ್ತ ಪರಿಚಯದ ಪುಷ್ಪರಾಜ್ ಅವರ ಬೈಕ್‌ನಲ್ಲಿ ಸ್ನೇಹಿತ ಅನಿಲ್ ಜೊತೆ ಬೀಟಿಕಟ್ಟೆ ಗ್ರಾಮದತ್ತ ಹೋಗುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ. ಗೌಡಳ್ಳಿ ಗ್ರಾಮ ಜಂಕ್ಷನ್ ಬಳಿ ಯೋಗೇಶ್ ಎಂಬವರು ಚಲಾಯಿಸುತ್ತಿದ್ದ ಕಾರಿಗೆ ಹಾಗೂ ಬೈಕ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಮಂಜುನಾಥ್ ಅವರ ಕಾಲಿಗೆ ಪೆಟ್ಟಾಗಿದ್ದು, ಹಿಂಬದಿ ಸವಾರ ಅನಿಲ್ ಸಹ ಗಾಯಗೊಂಡಿದ್ದಾರೆ. ಬೈಕ್ ಜಖಂಗೊAಡಿದೆ.

ಗಾಯಾಳುವನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಮಾಲೀಕ ಪುಷ್ಪರಾಜ್ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.