ವೀರಾಜಪೇಟೆ, ಡಿ. ೨೩: ರೈತರು ಮತ್ತು ಕಾರ್ಮಿಕರು ಸರಕಾರಕ್ಕೆ ತೆರಿಗೆ ಕಟ್ಟುತ್ತಿದ್ದರು ಜನರಿಗೆ ಸೌಲಭ್ಯಗಳನ್ನು ನೀಡುವುದರಲ್ಲಿ ಸರಕಾರ ವಿಫಲ ಗೊಂಡಿದೆ. ಕಾರ್ಮಿಕರ ೨೧ ಕಾನೂನು ಗಳನ್ನು ಸರಕಾರ ಇಲ್ಲದಂತೆ ಮಾಡಿದೆ ಎಂದು ಸಿ.ಐ.ಟಿ.ಯು ರಾಜ್ಯ ಮುಖಂಡ ಮೈಸೂರಿನ ಬಾಲಾಜಿ ರಾವ್ ಹೇಳಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜನವರಿ ೧೮ ರಿಂದ ೨೨ ರವರೆಗೆ ಬೆಂಗಳೂರಿನಲ್ಲಿ ನಡೆಯುವ ೧೭ನೇ ಅಖಿಲ ಭಾರತ ಸಮ್ಮೇಳನದ ಅಂಗವಾಗಿ ವೀರಾಜಪೇಟೆ ನಗರ ದಲ್ಲಿರುವ ಉಪಾಧ್ಯಾಯರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ನವ ಉದಾರವಾದಿ ನೀತಿಗಳು, ರೈತ-ಕಾರ್ಮಿಕರ ಬದುಕಿನ ಪ್ರಶ್ನೆಗಳು ಎಂಬ ವಿಷಯದ ಬಗ್ಗೆ ಮಾತನಾಡಿ, ರೈತರು ಬೆಳೆದ ಬೆಳೆಗೆ ದಲ್ಲಾಳಿಗಳ ಹಾವಳಿ ಯಿಂದ ನ್ಯಾಯವಾದ ಬೆಲೆ ಸಿಗುತ್ತಿಲ್ಲ. ಸರ್ಕಾರಿ ಸಂಸ್ಥೆಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಕೊಡಲು ಸರಕಾರ ಹೊರಟಿದೆ. ಅಲ್ಲದೆ ರೈತರಿಗೆ ನೀಡುತ್ತಿರುವ ಬೀಜಗಳಿಂದ ಭೂಮಿ ಕೂಡ ಬರಡಾಗಿದೆ. ಇದಕ್ಕೆಲ್ಲ ನಮ್ಮ ನ್ನಾಳುವ ಸರಕಾರ ಬಂಡವಾಳ ಶಾಯಿಗಳ ಹಿಡಿತದಲ್ಲಿರುವುದರಿಂದ ರೈತರು-ಕಾರ್ಮಿಕರು ಸೇರಿ ಅವ್ಯವಸ್ಥೆಗಳ ವಿರುದ್ಧ ಹೋರಾಟ ನಡೆಸುವ ಅನಿವಾರ್ಯತೆಯಿದೆ ಎಂದರು.
ಜಾತ್ಯತೀತ ಜನತಾ ದಳದ ರಾಜ್ಯ ಮುಖಂಡ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಸರಕಾರ ಕಾರ್ಮಿಕರ ಮೆಲೆ ನಿರಂತರ ಗದಪ್ರಯೋಗ ಮಾಡುತ್ತ ಬಂದಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಎಲ್ಲಾ ಪಕ್ಷಗಳಿಗೂ ಅವಕಾಶ ದೊರಕಿದ್ದರು ಜನರ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿದೆ. ಬೆಳೆ ನಷ್ಟದಿಂದ ಅನೇಕರು ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರ ಗಮನಹರಿಸುತ್ತಿಲ್ಲ. ಅವರ ಸಮಸ್ಯೆಗಳನ್ನು ಬಗೆಹರಿಸು ವಂತಾಗಬೇಕು ಎಂದ ಸಂಕೇತ್ ಅವರು, ಕಾರ್ಮಿಕರು ಶ್ರಮ ಜೀವಿಗಳು ಕಾನೂನು ಜಾರಿ ಮಾಡುವ ಮೂಲಕ ರಕ್ಷಣೆ ಕೊಡುವಂತಾಗಬೇಕು. ವಲಸೆ ಕಾರ್ಮಿಕರ ಬಗ್ಗೆ ಎಲ್ಲರು ಸಹಕಾರ ನೀಡುವ ಮೂಲಕ ಉತ್ತಮ ಸಮಾಜ ಕಟ್ಟುವಂತ ಚಿಂತನೆಗಳು ಅಗತ್ಯವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಮಾತನಾಡಿ ಈ ದೇಶದ ಕಟ್ಟಕಡೆಯ ಜನರಿಗು ನ್ಯಾಂiÀi ಸಿಗುವಂತಾಗಲು ಹೋರಾಟದ ಮೂಲಕ ಸಕಾರದ ಕಣ್ಣುತೆರೆಸು ವಂತಾಗಬೇಕು. ಇಂದಿನ ದಿನದಲ್ಲಿ ಜನಸಾಮನ್ಯರು ಉಪಯೋಗಿಸುವಂತ ದಿನನಿತ್ಯ ಬಳಕೆಯ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ರೈತರು ಮತ್ತು ಕಾರ್ಮಿಕರ ಬಗ್ಗೆ ಸರ್ಕಾರ ಚಿಂತಿಸುತ್ತಿಲ್ಲ. ಸಾಮಾಜಿಕ ನ್ಯಾಯ ಒದಗಿಸಬೇಕೆಂದು ರೈತರು-ಕಾರ್ಮಿಕರು ಸೇರಿ ಮುಂದಿನ ದಿನದಲ್ಲಿ ಹೋರಾಟದ ಅನಿವಾರ್ಯತೆ ಇದೆ ಎಂದರು. ರೈತ ಸಂಘದ ಜಿಲ್ಲಾ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಜನರ ಕಷ್ಟಕ್ಕೆ ನಾವು ಧ್ವನಿಯಾಗಬೆಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೇಡಿಕೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ರೈತರು-ಕಾರ್ಮಿಕರು ಒಂದೇ ನಾಣ್ಯದ ಎರಡು ಮುಖ ಗಳಿದ್ದಂತೆ ಮುಂದಿನ ದಿನದಲ್ಲಿ ಐಕ್ಯ ಹೋರಾಟ ನಡೆಸಬೇಕಾಗಿದೆ. ಚುನಾವಣೆ ಸಂದರ್ಭ ಮತದಾರರು ನೋಟಿಗಾಗಿ ಮತ ಚಲಾಯಿಸ ಬಾರದು, ಪ್ರಜ್ಞಾವಂತರಾಗಬೇಕು. ಉತ್ತಮ ವ್ಯಕ್ತಿಯನ್ನು ಆಯ್ಕೆಮಾಡು ವಂತಾಗಬೇಕು ಎಂದರು.
ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಐ.ಆರ್. ಪ್ರಮೋದ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗಿನಲ್ಲಿ ವನ್ಯ ಮೃಗಗಳ ಹಾವಳಿಯಿಂದ ಕೃಷಿಕರಿಗೆ ಭತ್ತ ಹಾಗೂ ಇತರ ಕೃಷಿಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಕಾಡುಪ್ರಾಣಿಗಳ ಹಾವಳಿಯಿಂದ ಅನೇಕರು ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ರೈತರ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಬೇಕು ಇಲ್ಲವಾದಲ್ಲಿ ರೈತರು-ಕಾರ್ಮಿಕರ ಹೋರಾಟ ಮುಂದುವರಿಯಲಿದೆ ಎಂದರು. ಅಖಿಲ ಭಾರತ ಸಮ್ಮೇಳನದ ಅಂಗವಾಗಿ ವೇದಿಕೆಯಲ್ಲಿ ಲೋಗೋ ಬಿಡುಗಡೆಗೊಳಿಸಲಾಯಿತು. ಮೊದಲಿಗೆ ಸಿಐಟಿಯು ಜಿಲ್ಲಾ ಅಧ್ಯಕ್ಷ ಪಿ.ಆರ್. ಭರತ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು, ಸಹ ಕಾರ್ಯದರ್ಶಿ ಕೆ.ಎಸ್. ರತೀಶ್, ಮುಖಂಡರಾದ ಎನ್.ಡಿ. ಕುಟ್ಟಪ್ಪ, ಹೆಚ್.ಪಿ. ರಮೇಶ್ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತ ರಿದ್ದರು. ವಿಚಾರ ಸಂಕಿರಣದಲ್ಲಿ ವಿಮ ನೌಕರರು, ಅಂಗನವಾಡಿ, ಅಕ್ಷರ ದಾಸೋಹದ ಕಾರ್ಯಕರ್ತರು, ಕಟ್ಟಡ ಕಾರ್ಮಿಕರು, ಪಂಚಾಯಿತಿ ನೌಕರರು, ಹಮಾಲಿ ಕಾರ್ಮಿಕರು, ತೋಟ ಕಾರ್ಮಿಕರು ಮುಂತಾದವರು ಭಾಗವಹಿಸಿದ್ದರು.