ಗೋಣಿಕೊಪ್ಪಲು, ಡಿ. ೨೩: ಕಾವೇರಿ ಪದವಿ ಪೂರ್ವ ಕಾಲೇಜಿನ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್. ಘಟಕ ಮತ್ತು ಗೋಣಿಕೊಪ್ಪಲು ಪೊಲೀಸ್ ಠಾಣೆ ಸಂಯುಕ್ತ ಆಶ್ರಯ ದಲ್ಲಿ ಅಪರಾಧ ಮುಕ್ತ ಮಾಸಾಚರಣೆ ದಿನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ದಲ್ಲಿ ಮುಖ್ಯ ಭಾಷಣಕಾರರರಾಗಿ ಆಗಮಿಸಿದ ಗೋಣಿಕೊಪ್ಪಲು ಠಾಣೆೆಯ ಮುಖ್ಯ ಪೇದೆಯಾದ ಪೂವಣ್ಣ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡುತ್ತ, ಸರಕಾರ ಇಂದಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಭವಿಷ್ಯಕ್ಕೆ ವಿವಿಧ ನೂತನ ಯೋಜನೆಗಳೊಂದಿಗೆ ಪ್ರೋತ್ಸಾಹ ಧನ ಇತರ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ಯುವಕ ಯುವತಿ ಯರು ಸರಕಾರದ ಈ ಯೋಜನೆಗಳ ಲಾಭ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಅಪರಾಧಗಳು ನಮ್ಮ ಬದುಕಿನ ಕನಸನ್ನು ಕಸಿದುಕೊಳ್ಳುತ್ತವೆ, ಹಾಗಾಗಿ ಕೆಟ್ಟದ್ದನ್ನು ನಾವು ಯೋಚಿಸಬಾರದು. ಅಪರಾಧ ತಡೆಗೆ ಸಾಕಷ್ಟು ಕಾನೂನು ಜಾರಿಗೆ ತರಲಾಗಿದೆ. ಆದರೂ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಬಾಲ್ಯವಿವಾಹ, ಸಂಚಾರ ನಿಯಮ ಪಾಲಿಸದಿರುವುದು ಮತ್ತು ದ್ವಿಚಕ್ರ ವಾಹನ ಚಾಲಕರು ಅಪಘಾತದಲ್ಲಿ ಮರಣ ಹೊಂದುತ್ತಿದ್ದಾರೆ. ಕಾರಣ ಹೆಲ್ಮೆಟ್ ಹಾಕದಿರುವುದು, ಮತ್ತು ಅತಿಯಾದ ವೇಗ. ಅಪರಾಧ ಮುಕ್ತ ಮಾಡಲು ಕೇವಲ ಪೊಲೀಸರಿಂದ ಮಾತ್ರ ಸಾಧ್ಯವಿಲ್ಲ, ಇದಕ್ಕೆ ಸಾರ್ವಜನಿಕರು ಸಹ ಕೈಜೋಡಿಸಿದ್ದಲ್ಲಿ ಅಪರಾಧ ಮುಕ್ತ ಮಾಡಬಹುದು. ಯಾವುದೇ ರೀತಿಯ ಅಪರಾಧಗಳು ಕಂಡುಬAದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ದೂರುಗಳನ್ನು ನೀಡುವಲ್ಲಿ ಯಾವುದೇ ಹಿಂಜರಿಕೆ ಮಾಡದೆ ಧೈರ್ಯವಾಗಿ ದೂರು ಸಲ್ಲಿಸಿ ಪೊಲೀಸರು ಸಾರ್ವಜನಿಕರ ಸ್ನೇಹಿಯಾಗಿರುತ್ತಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್.ಎಸ್. ಮಾದಯ್ಯ, ಇಂದು ಯುವಕ-ಯುವತಿಯರು ಯಾರ ಮಾತಿಗೂ ಮರುಳಾಗಿ ಖಾಸಗಿ ಮಾಹಿತಿ ಹಾಗೂ ಫೋಟೋಗಳನ್ನು ಹಂಚಿಕೊಳ್ಳಬೇಡಿ, ಫೇಸ್‌ಬುಕ್‌ನ ನಕಲಿ ಪ್ರೊಫೈಲ್‌ಗಳ ಬಗ್ಗೆ ತೀರ ಎಚ್ಚರದಿಂದಿರುವAತೆ, ಮದ್ಯಪಾನ, ಧೂಮಪಾನ, ಗಾಂಜಾ, ಅಪೀಮುಗಳಂತಹ ದುಶ್ಚಟಗಳಿಂದ ದೂರವಿರಬೇಕು, ಇದರಲ್ಲಿ ತೊಡಗಿರುವವರ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ನೀಡಿ ದಾಖಲಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಠಾಣೆಯ ಸಹಾಯಕÀ ಅಧಿಕಾರಿ ನಂಜಪ್ಪ, ಎನ್.ಎಸ್.ಎಸ್. ಅಧಿಕಾರಿ ಕುಸುಮ್, ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ಅಕ್ರಮ್ ಮತ್ತು ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಸಂಚಾಲಕಿ ಪಿ.ಎಸ್. ದಿವ್ಯ ಹಾಜರಿದ್ದರು.