ಕಣಿವೆ, ಡಿ. ೨೩: ಕುಶಾಲನಗರ ತಾಲೂಕಿನ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿನ ಕಾರ್ಮಿಕರಿಗೆ ಉಚಿತವಾಗಿ ವಿವಿಧ ಆರೋಗ್ಯ ಪರೀಕ್ಷೆಗಳನ್ನು ನಡೆಸಲಾಯಿತು.

ಕೂಡ್ಲೂರು ಕೈಗಾರಿಕಾ ಬಡಾವಣೆಯ ಉದ್ಯಮಿಗಳ ಸಂಘ ಹಾಗೂ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯ ಸಹಯೋಗದೊಂದಿಗೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ನೂರಾರು ಕಾರ್ಮಿಕರು ವೈದ್ಯಕೀಯ ಪರೀಕ್ಷೆಗೊಳಪಟ್ಟರು. ಬಿಪಿ ಹಾಗೂ ಶುಗರ್ ಪರೀಕ್ಷಿಸಿಕೊಳ್ಳುವ ಮೂಲಕ ಆರೋಗ್ಯ ಶಿಬಿರಕ್ಕೆ ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೂಡ್ಲೂರು ಕೈಗಾರಿಕಾ ಪ್ರದೇಶದ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರದ ಸಹಯೋಗ ದೊಂದಿಗೆ ೩೦ ಹಾಸಿಗೆಗಳ ಇಎಸ್‌ಐ ಆಸ್ಪತ್ರೆಯನ್ನು ತೆರೆಯುವ ಸಂಬAಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಬಿಪಿಎಲ್ ಕಾರ್ಡುಗಳನ್ನು ಹೊಂದಿರುವ ಪ್ರತಿಯೊಬ್ಬರು ಆಯುಷ್ಮಾನ್ ಆರೋಗ್ಯ ಕಾರ್ಡು ಗಳನ್ನು ಹೊಂದುವ ಮೂಲಕ ಸರ್ಕಾರದಿಂದ ದೊರಕುವ ಸೌಲಭ್ಯ ಗಳನ್ನು ಪಡೆದುಕೊಳ್ಳಲು ಕರೆ ನೀಡಿದರು.

ಗೋಪಾಲಗೌಡ ಆಸ್ಪತ್ರೆಯ ನರ ರೋಗ ತಜ್ಞೆ ಡಾ. ಧನ್ಯ ಶುಶ್ರುತ್ ಮಾತನಾಡಿ, ಆರೋಗ್ಯವಂತ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಎಲ್ಲೆಡೆಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತಿದೆ. ಆಸ್ಪತ್ರೆಯ ವತಿಯಿಂದ ಎಲ್ಲಾ ಕಾಯಿಲೆಗಳಿಗೆ ಫೋನಿನ ಮೂಲಕ ಉಚಿತ ಸಲಹೆ ಮತ್ತು ಚಿಕಿತ್ಸೆ ಒದಗಿಸುವ ಸೇವೆಗೆ ೦೮೨೧ ೪೦೦೧೬೦೬ ಇಲ್ಲಿ ಕರೆ ಮಾಡಬಹುದು ಎಂದು ಳಿಸಿದರು.

ಕೊಡಗು ಜಿಲ್ಲಾ ಆರೋಗ್ಯಾ ಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ೫.೬೦ ಲಕ್ಷ ಜನರಿದ್ದು ಕೇವಲ ೧.೧೦ ಲಕ್ಷ ಮಂದಿ ಮಾತ್ರ ಆಯುಷ್ಮಾನ್ ಕಾರ್ಡು ಹೊಂದಿದ್ದಾರೆ. ಎಲ್ಲರೂ ಇದನ್ನು ಹೊಂದುವ ಮೂಲಕ ಸರ್ಕಾರದ ಪ್ರಯೋಜನಗಳನ್ನು ಪಡೆಯ ಬೇಕೆಂದರು. ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್, ಕೊಡಗು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಟಿ. ದಿನೇಶ್, ಕೈಗಾರಿಕಾ ಉದ್ಯಮಿಗಳ ಸಂಘದ ಅಧ್ಯಕ್ಷ ಎ.ಎನ್. ಪ್ರವೀಣ್, ಬಾವನಾ ಪ್ರವೀಣ್, ಕಾರ್ಯದರ್ಶಿ ಜೇಕಬ್, ನಿರ್ದೇಶಕ ರಾದ ಸಾಧಿಕ್, ಡಿ.ಸಿ. ಪ್ರಭಾಕರ್, ರಾಜಶೇಖರ್, ಪುನೀತ್ ಇದ್ದರು.

ಉಚಿತ ಆರೋಗ್ಯ ಶಿಬಿರದಲ್ಲಿ ಧನ್ಯ ಶುಶ್ರುತ್, ಡಾ.ಆನಂದ್ ಆರಾಧ್ಯ, ಡಾ. ಲಿಂಗಾಚಾರಿ ನೇತೃತ್ವದಲ್ಲಿ ೯ ಮಂದಿ ವೈದ್ಯರು ಹಾಗೂ ೨೦ ಮಂದಿ ವೈದ್ಯಕೀಯ ಸಿಬ್ಬಂದಿಗಳು ಕಾರ್ಯನಿರ್ವಹಿಸಿದರು. ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಪಿಡಿಓ ಸಂತೋಷ್, ಕೂಡಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ತೇಜಶ್ರೀ ಇದ್ದರು.