ಮಡಿಕೇರಿ, ಡಿ. ೨೩: ಲೋಕೋಪಯೋಗಿ ಇಲಾಖೆ, ಮಡಿಕೇರಿ ವಿಭಾಗದ ವತಿಯಿಂದ ಮಡಿಕೇರಿ ಕ್ಷೇತ್ರಕ್ಕೆ ಸಂಬAಧಿಸಿದAತೆ, ೨೦೨೧-೨೨ ಹಾಗೂ ೨೦೨೨-೨೩ನೇ ಸಾಲಿನಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸರ್ಕಾರದ ವತಿಯಿಂದ ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಿಸಿದ್ದು, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿ, ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಮತ್ತು ಹಾಗೆಯೇ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಿ ವಿವಿಧ ಹಂತದಲ್ಲಿದ್ದು, ಡಿಸೆಂಬರ್ ಅಂತ್ಯದೊಳಗೆ ಗುತ್ತಿಗೆದಾರರನ್ನು ನಿಗದಿಪಡಿಸಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನಾಗರಾಜು ತಿಳಿಸಿದ್ದಾರೆ.
ಕಾಮಗಾರಿಯ ವಿವರ ಇಂತಿದೆ: ೨೦೨೧-೨೨ ಹಾಗೂ ೨೦೨೨-೨೩ನೇ ಸಾಲಿನಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಅನುಮೋದನೆಯಾದ ಕಾಮಗಾರಿಗಳಿಗೆ ಒಟ್ಟು ರೂ. ೨೫ ಕೋಟಿ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ೫ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು ಟೆಂಡರ್ ಆಹ್ವಾನಿಸಲಾಗಿದೆ. ೨೦೨೨ರ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿಗೆ ಗುತ್ತಿಗೆದಾರರನ್ನು ನಿಗಧಿಪಡಿಸಿ ಕಾಮಗಾರಿ ಪ್ರಾರಂಭವಾಗಲಿದೆ.
ಸೋಮವಾರಪೇಟೆ ತಾಲೂಕು ಹಿರಿಸಾವೆ-ಚೆಟ್ಟಳ್ಳಿ ರಸ್ತೆ ಸಂ. ೧೭೮ ರಿಂದ ೧೮೧.೦೩ ಕಿ.ಮೀ.ವರೆಗೆ ರಸ್ತೆ ಅಗಲಗೊಳಿಸಿ ಅಭಿವೃದ್ಧಿಪಡಿಸಲು ರೂ. ೩೫೦ ಲಕ್ಷ, ಸೋಮವಾರಪೇಟೆ ತಾಲೂಕು ಮಡಿಕೇರಿ-ಕುಟ್ಟ ರಸ್ತೆ ಕಿ.ಮೀ. ೮.೩೦ ರಿಂದ ೧೦ ರವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ೪೦೦ ಲಕ್ಷ ರೂ., ಸೋಮವಾರಪೇಟೆ ತಾಲೂಕು ವೀರಾಜಪೇಟೆ-ಬೈಂದೂರು ರಸ್ತೆ ಕಿ.ಮೀ. ೪೯.೩೦ ರಿಂದ ಕಿ.ಮೀ. ೫೪.೩೦ ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ೩೭೫ ಲಕ್ಷ ರೂ., ಸೋಮವಾರಪೇಟೆ ತಾಲೂಕು ವೀರಾಜಪೇಟೆ-ಬೈಂದೂರು ರಸ್ತೆ ಕಿ.ಮೀ. ೬೨ ರಿಂದ ಕಿ.ಮೀ. ೬೭ ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ. ೩೭೫ ಲಕ್ಷ.
ಮಡಿಕೇರಿ ತಾಲೂಕು ಹಾಕತ್ತೂರು ಅಭ್ಯತ್‌ಮಂಗಲ ಜಿಲ್ಲಾ ಮುಖ್ಯ ರಸ್ತೆಯ ಸಂ. ೯ ರಿಂದ ೧೬.೫೦ ರವರೆಗೆ ರಸ್ತೆ ಅಭಿವೃದ್ಧಿಗೆ ೫೦೦ ಲಕ್ಷ ರೂ., ಸೋಮವಾರಪೇಟೆ ತಾಲೂಕು ಕೆದಕಲ್‌ನಿಂದ ಕಡಗದಾಳುವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ೫೦೦ ಲಕ್ಷ ರೂ. ಒಟ್ಟು ರೂ. ೨೫೦೦ ಲಕ್ಷ.
೨೦೨೨-೨೩ನೇ ಸಾಲಿನಲ್ಲಿ ಮಡಿಕೇರಿ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ರೂ. ೧೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಸೋಮವಾರಪೇಟೆ ತಾಲೂಕು ಬೆಂಗಳೂರು-ಜಾಲ್ಸೂರು (ರಾ.ಹೆ-೮೫) ರಸ್ತೆ ಕಿ.ಮೀ. ೨೨೫.೦೭ ರಿಂದ ೨೩೮.೮೧ ಕಿ.ಮೀ.ವರೆಗೆ ಅಭಿವೃದ್ಧಿಪಡಿಸಲು ಅಂದಾಜು ಪಟ್ಟಿಯನ್ನು ತಯಾರಿಸಿ ತಾಂತ್ರಿಕ ಮಂಜೂರಾತಿ ಕೋರಿ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿರುತ್ತದೆ. ಮಸಗೋಡು-ಕಣಿವೆ ರಸ್ತೆಯನ್ನು ಅಭಿವೃದ್ಧಿಪಡಿಸಲು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಲೋಕೋಪಯೋಗಿ ಸಚಿವರ ಮೂಲಕ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಅನುಮೋದನೆಯಾದ ನಂತರ ಟೆಂಡರ್ ಆಹ್ವಾನಿಸಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.
ಮಡಿಕೇರಿ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ರೂ. ೪.೩೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಮಡಿಕೇರಿ ತಾಲೂಕಿನಲ್ಲಿ ೨ ಕಾಮಗಾರಿಗಳು ಕೈಗೊಂಡಿದ್ದು ಪೂರ್ಣಗೊಳಿಸಲಾಗಿರುತ್ತದೆ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೫ ಪ್ಯಾಕೇಜ್ ಕಾಮಗಾರಿಗಳನ್ನು ಕೈಗೊಂಡಿದ್ದು ೧ ಕಾಮಗಾರಿ ಪೂರ್ಣಗೊಂಡಿರುತ್ತದೆ, ೩ ಕಾಮಗಾರಿ ಪ್ರಗತಿಯಲ್ಲಿರುತ್ತದೆ ಮತ್ತು ೧ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿರುತ್ತದೆ. ಹೆಚ್ಚುವರಿಯಾಗಿ ರೂ. ೧ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಸೋಮವಾರಪೇಟೆ ತಾಲೂಕಿನ ೧ ಪ್ಯಾಕೇಜ್ ಕಾಮಗಾರಿಯನ್ನು ಕೈಗೊಂಡಿದ್ದು ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಸೋಮವಾರಪೇಟೆ ತಾಲೂಕು ವೀರಾಜಪೇಟೆ-ಬೈಂದೂರು ರಸ್ತೆಯ ಸರಪಳಿ ೫೩ ರಿಂದ ೬೦ ಕಿ.ಮೀ.ರವರೆಗೆ (ಆಯ್ದ ಭಾಗಗಳಲ್ಲಿ) ಅಭಿವೃದ್ಧಿ ಹಾಗೂ ಸೋಮವಾರಪೇಟೆ ತಾಲೂಕು ಗೋಪಾಲಪುರ-ಬಾಣಾವಾರ-ಹೆಬ್ಬಾಲೆ ರಸ್ತೆಯ ಸರಪಳಿ ೨ ಕಿ.ಮೀ. ರಿಂದ ೭ ರವರೆಗೆ (ಆಯ್ದ ಭಾಗಗಳಲ್ಲಿ) ರಸ್ತೆ ಅಭಿವೃದ್ಧಿ ಹಾಗೂ ಸೋಮವಾರಪೇಟೆ ತಾಲೂಕು ಕೊಣನೂರು-ಮಾಕುಟ್ಟ ರಸ್ತೆಯ ಸರಪಳಿ ೩೨ ಕಿ.ಮೀ. ರಿಂದ ೩೬ ಕಿ.ಮೀ.ವರೆಗೆ (ಆಯ್ದ ಭಾಗಗಳಲ್ಲಿ) ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ರೂ. ೧೧.೨೫ ಕೋಟಿ ಅಂದಾಜು ಮೊತ್ತದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಸೋಮವಾರಪೇಟೆ ತಾಲೂಕು ವೀರಾಜಪೇಟೆ-ಬೈಂದೂರು ರಸ್ತೆಯ ಸರಪಳಿ ೮೨ ರಿಂದ ೧೦೪ ಕಿ.ಮೀ. ರವರೆಗೆ (ಆಯ್ದ ಭಾಗಗಳಲ್ಲಿ) ಅಭಿವೃದ್ಧಿ ಕಾಮಗಾರಿಯನ್ನು ರೂ. ೧೧.೭೫ ಕೋಟಿ ಅಂದಾಜು ಮೊತ್ತದಲ್ಲಿ ಪ್ರಾರಂಭಿಸಲಾಗಿದೆ.
೨೦೨೨-೨೩ ನೇ ಸಾಲಿನ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ವಾರ್ಷಿಕ ನಿರ್ವಹಣೆಗೆ ಸರ್ಕಾರದಿಂದ ಅನುದಾನ ಬಿಡಿಗಡೆಯಾಗಿದ್ದು, ನಿರ್ವಹಣಾ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಆಗ್ಗಿಂದಾಗ್ಗೆ ಬೀಳುತ್ತಿರುವ ಮಳೆಯಿಂದಾಗಿ ನಿರ್ವಹಣಾ ಕಾಮಗಾರಿಗಳನ್ನು ಪ್ರಾರಂಭಿಸಲು ವಿಳಂಬವಾಗಿದ್ದು, ತಾ. ೧೦ ರ ನಂತರ ತ್ವರಿತವಾಗಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.
ಕುಶಾಲನಗರ ತಾಲೂಕಿನಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣಕ್ಕಾಗಿ ರೂ. ೧೨.೫೦ ಕೋಟಿಗಳ ಅನುದಾನ ಬಿಡುಗಡೆಯಾಗಿದ್ದು, ಸದರಿ ಕಾಮಗಾರಿಯ ಮೊದಲನೇ ಟೆಂಡರ್ ರದ್ದುಪಡಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಟೆಂಡರ್‌ನ್ನು ರದ್ದುಪಡಿಸಿದ ಕೂಡಲೇ ಮರುಟೆಂಡರ್ ಆಹ್ವಾನಿಸಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ನಾಗರಾಜು ತಿಳಿಸಿದ್ದಾರೆ.