ಮಡಿಕೇರಿ, ಡಿ. ೨೧: ಟಿ. ಶೆಟ್ಟಿಗೇರಿ-ಶ್ರೀಮಂಗಲ ಶೂರ‍್ಸ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ತಾ. ೨೫ ರಂದು ಎರಡನೇ ವರ್ಷದ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಈ ಸ್ಪರ್ಧೆ ಶ್ರೀಮಂಗಲ ಕೊಡವ ಸಮಾಜದ ಆವರಣದ (ಹಳೆಯ ಡಿಗ್ರಿ ಕಾಲೇಜು)ದಲ್ಲಿ ತಾ. ೨೫ ರಂದು ಬೆಳಿಗ್ಗೆಯಿಂದ ಆರಂಭವಾಗಲಿದೆ. ಕೋವಿ ಪೂಜೆಯೊಂದಿಗೆ ಸ್ಪರ್ಧೆಗೆ ಪ್ರಮುಖರು ಚಾಲನೆ ನೀಡಲಿದ್ದಾರೆ.

.೨೨ ರೈಫಲ್ (೫೦ ಮೀ.) ೧೨ನೇ ಬೋರ್ (೩೦ ಮೀ.) ಹಾಗೂ ಏರ್ ರೈಫಲ್ (೧೫ ಮೀ.) ವಿಭಾಗದಲ್ಲಿ ರಾಜ್ಯಮಟ್ಟದ ಮುಕ್ತ ಸ್ಪರ್ಧೆ ನಡೆಯಲಿದ್ದು, ಒಟ್ಟು ರೂ. ೧.೨೫ ಲಕ್ಷ ರೂ.ಗಳ ನಗದು ಹಾಗೂ ಟ್ರೋಫಿ ಬಹುಮಾನವಾಗಿದೆ.

.೨೨ ವಿಭಾಗದಲ್ಲಿ ಪ್ರಥಮ ರೂ. ೨೫ ಸಾವಿರ, ದ್ವಿತೀಯ ರೂ. ೨೦ ಸಾವಿರ ಹಾಗೂ ತೃತೀಯ ರೂ. ೧೫ ಸಾವಿರ, ೧೨ನೇ ಬೋರ್‌ನಲ್ಲಿ ರೂ. ೨೦ ಸಾವಿರ, ರೂ. ೧೫ ಸಾವಿರ ಹಾಗೂ ರೂ. ೧೦ ಸಾವಿರ ಬಹುಮಾನವಿದೆ. ಏರ್‌ಗನ್ ವಿಭಾಗದಲ್ಲಿ ರೂ. ೫ ಸಾವಿರ, ರೂ. ೩ ಸಾವಿರ ಹಾಗೂ ರೂ. ೨ ಸಾವಿರ ಹಾಗೂ ಟ್ರೋಫಿ ವಿಜೇತರಿಗೆ ಸಿಗಲಿದೆ. ಹೆಚ್ಚಿನ ಮಾಹಿತಿಗೆ ೯೪೪೮೮೧೩೮೬೫ ಹಾಗೂ ೯೪೪೯೭೬೬೬೭೯ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.