ವೀರಾಜಪೇಟೆ, ಡಿ. ೨೧: ಸಂಸ್ಕöÈತಿ ಮರೆತವರು ಹೇಳ ಹೆಸರಿಲ್ಲದಂತೆ ನಾಶವಾಗುತ್ತಾರೆ ಎಂದು ಏಕಲವ್ಯ ಪ್ರಶಸ್ತಿ ವಿಜೇತ ಅಂರ‍್ರಾಷ್ಟಿçÃಯ ಖ್ಯಾತಿಯ ಓಟಗಾರ, ತೀತಮಾಡ ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಕೊಡವ ಸಮಾಜದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪುತ್ತರಿ ಊರೋರ್ಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಕೊಡವರು ಎಲ್ಲಿಯೇ ಇದ್ದರೂ ತಮ್ಮ ತಾಯಿನಾಡಿನ ಸಂಬAಧವನ್ನು ಉಳಿಸಿಕೊಳ್ಳುವುದರ ಮೂಲಕ, ಕೊಡವ ಪದ್ಧತಿ, ಪರಂಪರೆಯನ್ನು ಬೆಳೆಸಲು ಕೈಜೋಡಿಸಬೇಕು. ವಿದ್ಯೆಗೆ ವಯಸ್ಸಿನ ಭೇದವಿಲ್ಲ. ಕೊಡಗಿನ ಸಂಸ್ಕöÈತಿ, ಆಚಾರ, ವಿಚಾರವನ್ನು ಉಳಿಸಲು ಎಲ್ಲರೂ ಮುಂದಾಗಬೇಕು. ಸತತ ಪ್ರಯತ್ನದ ಮೂಲಕ ಯಾರು ಬೇಕಾದರೂ ಸಾಧನೆ ಮಾಡಬಹುದು. ಅನುಭವಕ್ಕಿಂತ ಶಿಕ್ಷಕರಾಗಲಿ, ಶಿಕ್ಷಣವಾಗಲಿ ಇಲ್ಲ. ಎಲ್ಲವನ್ನೂ ಅನುಭವ ಕಲಿಸಿಕೊಡುತ್ತದೆ. ನಮ್ಮ ಬದುಕಿನಲ್ಲಿ ಸಂಸ್ಕöÈತಿ ಎನ್ನುವುದು ಮುಖ್ಯ. ಅದನ್ನು ಮರೆತವರು ಹೆಚ್ಚು ಕಾಲ ಉಳಿಯುವುದಿಲ್ಲ. ಇದಕ್ಕೆ ಗ್ರೀಸ್ ಸಂಸ್ಕöÈತಿಯೇ ಕಾರಣ. ಗ್ರೀಸ್ ವಿಶ್ವಕ್ಕೆ ಮಹಾನ್ ಕೊಡುಗೆ ನೀಡಿದರೂ ನಂತರ ಸಂಸ್ಕöÈತಿ ಮರೆತ ಕಾರಣ ಹೇಳ ಹೆಸರಿಲ್ಲದಂತಾಯಿತು. ಅದೇ ರೀತಿ ಕೊಡವರಲ್ಲೂ ಬದಲಾವಣೆ ಕಂಡು ಬರುತ್ತಿದೆ. ನಾವು ಕೊಡವ ಪದ್ಧತಿಯನ್ನು ಕಲಿಯುವ ಮುನ್ನ ಕೊಡವರಾಗಿರಲು ಕಲಿಯಬೇಕು. ನಾವು ಕೂಡ ಪರಿವರ್ತನೆ ಆಗಬೇಕಿದೆ. ಕೇವಲ ಹಣವಿದ್ದರೆ ನೆಮ್ಮದಿ, ಆರೋಗ್ಯ ತುಂಬಲು ಸಾಧ್ಯವಿಲ್ಲ, ಮಾನವೀಯ ನೆಲೆಗಟ್ಟಿನಲ್ಲಿ ಜೀವನ ಸಾಗಿಸಿದರೆ ಮನುಷ್ಯ ಚಿರಂಜೀವಿಯಾಗುತ್ತಾನೆ. ಪ್ರತಿಯೊಬ್ಬರೂ ನಮ್ಮತನವನ್ನು ಕಾಪಾಡಿಕೊಂಡು ಜೀವನ ಸಾಗಿಸುವಂತಾಗಬೇಕು ಎಂದರು.

ಮತ್ತೋರ್ವ ಮುಖ್ಯ ಅತಿಥಿ ವೀರಾಜಪೇಟೆಯ ಖ್ಯಾತ ವಕೀಲರೂ, ಪುರಸಭೆಯ ಮಾಜಿ ಅಧ್ಯಕ್ಷರೂ ಆಗಿದ್ದ ಮೇರಿಯಂಡ ಪೂವಯ್ಯ ಮಾತನಾಡಿ ಕೊಡವರಲ್ಲಿ ಇರುವಷ್ಟು ಹುರುಪು, ಛಲ, ಇಚ್ಛಾಶಕ್ತಿ ಇನ್ನೆಲ್ಲೂ ಇಲ್ಲ. ಇದನ್ನು ನಾವು ಸಮರ್ಥವಾಗಿ ಬಳಸಿಕೊಳ್ಳಬೇಕು. ಕೊಡವಾಮೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು.

ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಕಾಂತಿ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಪುತ್ತರಿಯ ಅಂಗವಾಗಿ ಊರೋರ್ಮೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಆಚರಣೆಗಳ ಮೂಲಕ ಕೊಡವ ಪದ್ಧತಿ ಹಾಗೂ ಜಾನಪದವನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಉದ್ದೇಶವಾಗಿದೆ. ಕೊಡವ ಜನಾಂಗದಲ್ಲಿ ಒಗ್ಗಟ್ಟು ಇದ್ದಲ್ಲಿ ಮಾತ್ರ ಸಂಸ್ಕçತಿ, ಆಚಾರ, ವಿಚಾರ ಉಳಿಯಲು ಸಾಧ್ಯ ಎಂದರು. ಕಾರ್ಯಕ್ರಮದ ಮೊದಲಿಗೆ ಕೊಡವ ಪದ್ದತಿಯಂತೆ ತಪ್ಪಡಕ ಕಟ್ಟುವುದರ ಮೂಲಕ ಗಣ್ಯರು ಚಾಲನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಕೊಡವ ಸಾಂಪ್ರದಾಯಿಕ ವಾದ್ಯದೊಂದಿಗೆ ಹಿರಿಯರ ಸಮ್ಮುಖದಲ್ಲಿ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು. ಇದೇ ಸಂದರ್ಭದಲ್ಲಿ ಮೇರಿಯಂಡ ಪೂವಯ್ಯ ಹಾಗೂ ತೀತಮಾಡ ಅರ್ಜುನ್ ದೇವಯ್ಯ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಹಿರಿಯ ಸಲಹೆಗಾರರಾದ ಬಿದ್ದಂಡ ರಾಣಿ, ಬೋಜಕ್ಕ ಗುಂಪಿನ ನಾಯಕರಾದ ಮಾಳೇಟಿರ ಸ್ವಾತಿ, ಸಹ ಕಾರ್ಯದರ್ಶಿ ಮಾಳೇಟಿರ ಕವಿತಾ ಶ್ರೀನಿವಾಸ್, ತೀತಮಾಡ ದಿವ್ಯ ಇದ್ದರು. ಕಾರ್ಯಕ್ರಮದಲ್ಲಿ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಚೆಯ್ಯಂಡ ಸತ್ಯ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಅಲ್ಲಪಂಡ ತಾರ ಸೇರಿದಂತೆ ತ್ರಿವೇಣಿ ಶಾಲೆಯ ಮಕ್ಕಳು, ಕೊಡವ ಪೊಮ್ಮಕ್ಕಡ ಕೂಟದ ಸದಸ್ಯರು ಇದ್ದರು. ಬೋಜಕ್ಕ ತಂಡದ ಸದಸ್ಯರಾದ ಮಾಲ ಹಾಗೂ ಸಂಗಡಿಗರು ಪ್ರಾರ್ಥಿಸಿದರೆ, ಖಜಾಂಚಿ ತಾತಂಡ ಯಶು ಕಬೀರ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ಸ್ವಾಗತಿಸಿ ನಿರೂಪಿಸಿದರು. ಒಕ್ಕೂಟದ ಉಪಾಧ್ಯಕ್ಷೆ ಅಮ್ಮುಣಿಚಂಡ ಈಶ್ವರಿ ಗಂಗಮ್ಮ ವಂದಿಸಿದರು. ಬೋಜಕ್ಕ ಗುಂಪಿನ ಸದಸ್ಯರು ಕಾರ್ಯಕ್ರಮ ನಿರ್ವಹಿಸಿದರಲ್ಲದೆ ಗುಂಪಿನ ಸದಸ್ಯರಿಂದ ಸ್ವಾಗತ ನೃತ್ಯ ಸೇರಿದಂತೆ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮದ ಬಳಿಕ ವಾಲಗತಾಟ್ ಪೈಪೋಟಿ ನಡೆಯಿತು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.