ಪುತ್ತರಿರ ಕರುಣ್ ಕಾಳಯ್ಯ
ಚೆಟ್ಟಳ್ಳಿ, ಡಿ. ೨೧: ಅತ್ಯಧಿಕ ಇಳುವರಿ ನೀಡುವ ಉತ್ತಮ ತಳಿಯ ಕಾಫಿ ಗಿಡಗಳ ಬೀಜೋತ್ಪಾದನಾ ಕಾರ್ಯ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ನಡೆಯುತ್ತಿದ್ದು, ಬೆಳೆಗಾರರಿಗೆ ವಿತರಣೆಗೆ ಸಿದ್ಧಗೊಳ್ಳುತಿದೆ.
ನವೆಂಬರ್ - ಡಿಸಂಬರ್ ತಿಂಗಳಲ್ಲಿ ಉತ್ತಮ ಗುಣಮಟ್ಟ ಹೊಂದಿರುವ ಆಯ್ದ ‘ಪ್ಲಾಟ್’ಗಳ ಬಲಿತು ಹಣ್ಣಾಗಿರುವ ಕಾಫಿ ಹಣ್ಣನ್ನು ಕುಯ್ಯಲಾಗುತ್ತÀದೆ. ಪಲ್ಪಿಂಗ್ ಯಂತ್ರದ ಮೂಲಕ ಬೀಜವನ್ನು ಬೇರ್ಪಡಿಸಿ ತೊಳೆದು ಬೇಡದ ತ್ಯಾಜ್ಯವನ್ನು ಹೆಕ್ಕಲಾಗುತ್ತದೆ. ಬೂದಿ ಹಾಗೂ ಕೀಟನಾಶಕಗಳೊಂದಿಗೆ ಮಿಶ್ರಣಮಾಡಿ ತಟ್ಟಿಯಲ್ಲಿ ತಂಪಗಿನ ಕೋಣೆÂಯಲ್ಲಿ ಒಣಗಿಸಲಾಗುತ್ತದೆ.
ಚೆಟ್ಟಳ್ಳಿ ಕೇಂದ್ರದಲ್ಲಿ ಸಿದ್ದಗೊಳ್ಳುತಿದೆ ಫಲದಾಯಕ ಕಾಫಿ ತಳಿ ಬೀಜ: ೧೯೪೬ರಲ್ಲಿ ಕೊಡಗು ಜಿಲ್ಲೆಯ ಚೆಟ್ಟಳ್ಳಿಯಲ್ಲಿ ಕಾಫಿ ಸಂಶೋಧನಾ ಉಪಕೇಂದ್ರವನ್ನು ಪ್ರಾರಂಭಿಸಿ ಅರೆಬಿಕಾ ಹಾಗೂ ರೋಬಸ್ಟಾದ ವಿವಿಧ ತಳಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಉತ್ತಮ ಗುಣಮಟ್ಟ ಹೊಂದಿರುವ ಕಾಫಿ ಗಿಡಗಳ ‘ಪ್ಲಾಟ್’ಗಳನ್ನು ಆಯ್ಕೆ ಮಾಡಿ ಅದರ ಕಾಫಿ ಹಣ್ಣನ್ನು ತಳಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.
ಕಾಫಿ ಬೆಳೆಗಾರರು ತವiಗೆ ಬೇಕಾದ ಕಾಫಿ ಬೀಜಗಳ ಬೇಡಿಕೆಯನ್ನು ಸಮೀಪದ ಕಾಫಿ ಮಂಡಳಿಗೆ ಅರ್ಜಿ ಸಲ್ಲಿಸಿದರೆ ಆಯಾಯ ಮಂಡಳಿಗಳು ಚಿಕ್ಕಮಂಗಳೂರಿನ ಬಾಳೆಹೊನ್ನೂರಿನ ಕಾಫಿ ಸಂಶೋಧÀನಾ ಕೇಂದ್ರಕ್ಕೆ ಕಾಫಿ ಬೆಳೆಗಾರರ ಕಾಫಿ ಬೀಜಗಳ ಬೇಡಿಕೆಯ ಒಟ್ಟಾದ ಮಾಹಿತಿ ಪಡೆದು ಆಯಾಯ ಕೇಂದ್ರಗಳಿಗೆ ಒಟ್ಟಾದ ಬೇಡಿಕೆಯ ಕಾಫಿ ತಳಿಗಳ ಬೀಜಗಳನ್ನು ವಿತರಿಸಲು ಆದೇಶಿಸುತ್ತÀದೆ.
ಬಾಳೆಹೊನ್ನೂರಿನ ಕಾಫಿ ಸಂಶೋಧÀನಾ ಕೇಂದ್ರದ ಮುಖ್ಯ ಕಚೇರಿ ಬಿಟ್ಟರೆ ಚೆಟ್ಟಳ್ಳಿಯ ಕಾಫಿ ಸಂಶೋಧÀನಾ ಉಪಕೇಂದ್ರ ಕಾಫಿ ತಳಿಗಳ ಅಬಿವೃದ್ಧಿಯಲ್ಲಿ ಉತ್ತಮ ಸ್ಥಾನಗಳಿಸಿದೆ. ಪ್ರಸ್ತುತ ವರ್ಷದಲ್ಲಿ ಬೆಳೆಗಾರರಿಂದ ಅರೆಬಿಕಾ ಚಂದ್ರಗಿರಿ ೭೧೯.೫ ಕೆಜಿ ಹಾಗೂ ಅ*ಖ ರೊಬಸ್ಟಾ ೧೭೧ಕೆ.ಜಿ ಬೇಡಿಕೆಯಂತೆ ಈಗಾಗಲೇ ಕೇಂದ್ರದ ಸಂಶೋಧಿತ ಉತ್ತಮ ತಳಿಯ ಕಾಫಿ ಗಿಡಗಳ ಬೀಜೋತ್ಪಾದನೆಯನ್ನು ಮಾಡಲಾಗುತ್ತಿದೆ.
ಉತ್ತಮ ತಳಿಯ ಕಾಫಿ ಗಿಡಗಳ ಬೀಜೋತ್ಪಾದನೆಯಲ್ಲಿ ೫೦೦ ಗ್ರಾಂ. ನಿಂದ ಹಿಡಿದು ಒಂದು ಕೆ.ಜಿ., ನಾಲ್ಕು ಕೆಜಿಯ ಬೀಜಗಳನ್ನು ಪ್ಯಾಕ್ ಮಾಡಲಾಗುತ್ತಿದೆ. ಒಂದು ತಿಂಗಳೊಳಗೆ ಕೇಂದ್ರದಲ್ಲಿ ವಿತರಿಸುವ ಕಾಫಿ ಬೀಜಗಳ ತಳಿ ಅಭಿವೃದ್ಧಿಕಾರ್ಯ ನಡೆಯಬೇಕಿದೆ ಎನ್ನುತಾರೆ ಕೇಂದ್ರದ ತಜ್ಞರು.