*ಗೋಣಿಕೊಪ್ಪ, ಡಿ. ೨೧: ತಂತ್ರಜ್ಞಾನಗಳ ಬಳಕೆಯಿಂದ ಆಧುನಿಕ ಕೃಷಿ ಪದ್ಧತಿಯಲ್ಲಿ ಬದಲಾವಣೆ ಕಂಡ ಹಿನೆÀ್ನಲೆ. ಸ್ಥಳೀಯ ಕೃಷಿ ಪದ್ಧತಿಯಲ್ಲಿನ ಸಮಸ್ಯೆಗಳನ್ನು ಅರ್ಥೈಸಿಕೊಂಡು ರೈತರಿಗೆ ಪೂರಕ ವಾದ ಮಾರ್ಗದರ್ಶನ ನೀಡಲು ಗ್ರಾಮ ಮಟ್ಟದ ಕೃಷಿ ಸಖಿ ಯೋಜನೆ ಯನ್ನು ರೂಪಿಸಲಾಗಿದೆ. ಇದು ಸ್ಥಳೀಯ ರೈತರಿಗೆ ಮತ್ತು ಗ್ರಾಮ ಮಟ್ಟದ ಮಹಿಳೆಯರ ಸ್ವಾವಲಂಬಿ ಬದುಕಿಗೆ ಕಾರಣವಾಗಲಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನ ಶೇಕ್ ತಿಳಿಸಿದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೇಂದ್ರ ಗ್ರಾಮೀಣಾ ಭಿವೃದ್ಧಿ ಮಂತ್ರಾಲಯದ ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನವನ್ನು ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವ ನೋಪಾಯ ಸಂವರ್ಧನಾ ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸಿದ ಗ್ರಾಪಂ ಮಟ್ಟದ ೬ ದಿನದ ಕೃಷಿ ಸಖಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಂತ್ರಿಕ ಪದ್ಧತಿಗಳನ್ನು ತಿಳಿಸಲು ಮತ್ತು ಕೃಷಿಯ ಮೌಲ್ಯವರ್ಧನೆಗೆ ಪೂರಕವಾಗುವ ರೀತಿಯಲ್ಲಿ ಕೃಷಿ ಸಖಿ ಉಪಯುಕ್ತ ವಾಗಿದೆ. ಸರ್ಕಾರದ ಸೇವೆಗಳನ್ನು ರೈತರಿಗೆ ತಲುಪಿಸಲು ಮತ್ತು ಸಣ್ಣ ಮತ್ತು ಅತಿಸಣ್ಣ ಮಹಿಳಾ ರೈತ ಕುಟುಂಬಗಳಿಗೆ ಅಗತ್ಯವಿರುವ ವಿಸ್ತರಣಾ ಸೇವೆ, ತಾಂತ್ರಿಕ ಜ್ಞಾನ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಜೀವ ನೋಪಾಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ಸಖಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಕೆ.ವಿ.ಕೆ. ಮುಖ್ಯಸ್ಥ ದೇವಯ್ಯ ಮಾತನಾಡಿ, ತಂತ್ರಜ್ಞಾನದ ಕೃಷಿಯನ್ನು ತಿಳಿಸಲು ಈ ಯೋಜನೆ ರೂಪಿತವಾಗಿದೆ ಎಂದು ಹೇಳಿದರು. ಜಿಲ್ಲಾ ಕಾರ್ಯಕ್ರಮ ಯೋಜನಾ ವ್ಯವಸ್ಥಾಪಕ ಕುಮಾರ್ ಪಿ. ಮಾತನಾಡಿ, ಸಾವಯವ ಕೃಷಿ ಮತ್ತು ಸಮಗ್ರ ಕೃಷಿ ಪದ್ಧತಿ ಅಳವಡಿಸಿ ಕೊಂಡು ಹೋಗು ವುದರಿಂದ ರೈತರು ಆರ್ಥಿಕವಾಗಿ ಬಲ ಹೊಂದಲು ಸಾಧ್ಯವಿದೆ ಎಂದರು. ರಾಜ್ಯ ಕೃಷಿ ಇಲಾಖೆ ಅಧಿಕಾರಿ ಡಾ. ವೆಂಕಟೇಶ್ ಜಿ, ಜûÆಮ್ ಆಪ್ ಮೂಲಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಂಜೀವಿನಿ ಒಕ್ಕೂಟದ ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ್ ಮಾತ ನಾಡಿದರು. ಕೃಷಿ ಸಖಿ ತರಬೇತಿ ಕಾರ್ಯಾಗಾರದ ಸಂಚಾಲಕ ಕೆವಿಕೆ ತೋಟಗಾರಿಕೆ ವಿಷಯ ತಜ್ಞ ಡಾ. ಪ್ರಭಾಕರ್ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಸಸ್ಯ ಸಂರಕ್ಷಣೆ ವಿಷಯ ತಜ್ಞ ಡಾ. ವೀರೇಂದ್ರ ಕುಮಾರ್ ಮತ್ತು ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಬೇತಿಗೆ ಆಯ್ಕೆಯಾದ ಕೃಷಿ ಸಖಿಯರು ಇದ್ದರು.