ಕೊಡ್ಲಿಪೇಟೆ, ಡಿ. ೨೧: ಎಸ್‌ಎಸ್ ಎಫ್, ಎಸ್‌ವೈಎಸ್ ಕೊಡ್ಲಿಪೇಟೆ ಶಾಖೆ ವತಿಯಿಂದ ಜಲಾಲಿಯಾ ರಾತೀಬ್ ೧೨ ನೇ ವಾರ್ಷಿಕ ಹಾಗೂ ಉಲಮಾಗಳ ಅನುಸ್ಮರಣೆ ಕಾರ್ಯ ಕ್ರಮ ಸಮೀಪದ ಹ್ಯಾಂಡ್‌ಪೋಸ್ಟ್ ಮಸ್ಜಿದ್ ಸಮೀಪದ ಜಿಎಂಎ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ನೌಫಲ್ ಸಖಾಫಿ ಕಳಸ ಅವರು, ಧಾರ್ಮಿಕ ಪಂಡಿತ ನೇತಾರರಾದ ಉಲಾಮಾಗಳ ವಿಚಾರಧಾರೆಗಳನ್ನು ವಿವರಿಸಿ ಇದನ್ನು ಪಾಲಿಸಿಕೊಂಡು ಹೋಗುವಂತೆ ತಿಳಿಸಿದರು. ಅಧ್ಯಾತ್ಮಿಕ ವೇದಿಕೆಗಳಲ್ಲಿ ಭಾಗವಹಿಸುವುದರಿಂದ ಆತ್ಮೀಯತೆ ಹಾಗೂ ಚೈತನ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿ ಯಾಗುತ್ತದೆ. ಯುವ ಜನತೆ ಧಾರ್ಮಿಕ ಚೌಕಟ್ಟಿನಲ್ಲಿ ಮುನ್ನಡೆಯ ಬೇಕು ಎಂದರು. ಅಧ್ಯಾತ್ಮಿಕ ವೇದಿಕೆಯ ನೇತೃತ್ವವನ್ನು ಸಯ್ಯದ್ ಫಝಲ್ ಸೀದಿ ತಂಙಳ್ ಬಲಮುರಿ ಯವರು ವಹಿಸಿ ಜಲಾಲಿಯ ರಾತೀಬ್ ಪಠಿಸಿ ಪ್ರಾರ್ಥನೆ ನಡೆಸಿ ದರು. ಹ್ಯಾಂಡ್ ಪೋಸ್ಟ್ ಮಸ್ಜಿದು ನ್ನೂರ್ ಧರ್ಮಗುರು ಆರೀಸ್ ಬಾಖವಿ ಉದ್ಘಾಟನಾ ಭಾಷಣ ಮಾಡಿದರು. ಎಸ್‌ಎಸ್‌ಎಫ್ ಅಧ್ಯಕ್ಷ ಸ್ವಾಲಿಹ್ ರಹ್ಮಾನಿ,ಮಹಮ್ಮದ್ ಪಾಳಿಲಿ, ಹನಫಿ ಜಾಮಿಯಾ ಮಸ್ಜಿದ್ ಧರ್ಮಗುರು ಮೌಲಾನ ಅಬ್ದುಲ್ ಮಜೀದ್, ಮಸ್ಜಿದುನ್ನೂರ್ ಅಧ್ಯಕ್ಷ ಸುಲೈಮಾನ್, ರಜಾಕ್ ಫೈಝಿ,ಸಮೀರ್ ಸಖಾಫಿ, ಮುಸ್ತಫ ಮುಸ್ಲಿಯಾರ್, ಜಹೀರ್ ನಿಜಾಮಿ, ಕೆ.ಎಸ್.ಮಹಮ್ಮದ್, ಸುಲೈಮಾನ್ ಯವರು ವಹಿಸಿ ಜಲಾಲಿಯ ರಾತೀಬ್ ಪಠಿಸಿ ಪ್ರಾರ್ಥನೆ ನಡೆಸಿ ದರು. ಹ್ಯಾಂಡ್ ಪೋಸ್ಟ್ ಮಸ್ಜಿದು ನ್ನೂರ್ ಧರ್ಮಗುರು ಆರೀಸ್ ಬಾಖವಿ ಉದ್ಘಾಟನಾ ಭಾಷಣ ಮಾಡಿದರು. ಎಸ್‌ಎಸ್‌ಎಫ್ ಅಧ್ಯಕ್ಷ ಸ್ವಾಲಿಹ್ ರಹ್ಮಾನಿ,ಮಹಮ್ಮದ್ ಪಾಳಿಲಿ, ಹನಫಿ ಜಾಮಿಯಾ ಮಸ್ಜಿದ್ ಧರ್ಮಗುರು ಮೌಲಾನ ಅಬ್ದುಲ್ ಮಜೀದ್, ಮಸ್ಜಿದುನ್ನೂರ್ ಅಧ್ಯಕ್ಷ ಸುಲೈಮಾನ್, ರಜಾಕ್ ಫೈಝಿ,ಸಮೀರ್ ಸಖಾಫಿ, ಮುಸ್ತಫ ಮುಸ್ಲಿಯಾರ್, ಜಹೀರ್ ನಿಜಾಮಿ, ಕೆ.ಎಸ್.ಮಹಮ್ಮದ್, ಸುಲೈಮಾನ್ ಮಹಮ್ಮದ್ ಎಂ.ಎA, ಶಾಖಾ ಅಧ್ಯಕ್ಷ ಇಸ್ಮಾಯಿಲ್ ಎಂ.ಎA, ಕಾರ್ಯ ದರ್ಶಿ ಎಸ್.ಎ.ಅಶ್ರಫ್, ಎಸ್‌ಎಸ್ ಎಫ್ ಕಾರ್ಯದರ್ಶಿ ಇಸ್ಮಾಯಿಲ್ ಡಿ.ಎಂ ಸೇರಿದಂತೆ ಪದಾಧಿಕಾರಿಗಳು ಭಾಗಿಯಾಗಿದ್ದರು.