ಕಣಿವೆ, ಡಿ. ೨೧: ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸ ಬೇಕೆಂದು ಸ್ಥಳೀಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಕಳೆದ ಹನ್ನೆರಡು ವರ್ಷಗಳ ಹಿಂದಿನಿAದಲೂ ಈ ಬಗ್ಗೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಾ ಬಂದಿದ್ದರೂ ಕೂಡ ಚುನಾಯಿತ ಜನಪ್ರತಿ ನಿಧಿಗಳ, ಅಧಿಕಾರಿಗಳ ನಿರಾಸಕ್ತಿ ಯಿಂದಾಗಿ ಸ್ಥಳೀಯರು ನಡೆಸು ತ್ತಿರುವ ಪಟ್ಟಣ ಪಂಚಾಯಿತಿ ಹೋರಾಟಕ್ಕೆ ಕಿಮ್ಮತ್ತಿಲ್ಲವಾಗಿದೆ.

ಎಲ್ಲಾ ಅರ್ಹತೆಗಳೂ ಇವೆ

ಪಟ್ಟಣ ಪಂಚಾಯಿತಿಯಾಗಿ ರೂಪುಗೊಳಿಸಬೇಕಾದಲ್ಲಿ ಕರ್ನಾಟಕ ಪುರಸಭೆ ಕಾಯಿದೆ ೧೯೬೪ ರ ನಿಯಮ ೩೪೯ ರ ಅನುಸಾರ ಅಗತ್ಯವುಳ್ಳ ಎಲ್ಲಾ ಅರ್ಹತೆಗಳು ಕೂಡು ಮಂಗಳೂರಿಗಿದೆ.

ಪ್ರಸಕ್ತ ಒಟ್ಟು ೨೪ ಸದಸ್ಯರ ಬಲವಿರುವ ಈ ಕೂಡು ಮಂಗಳೂರು ಪಂಚಾಯಿತಿ ೨೭೧೪.೧೬ ಹೆಕ್ಟೇರ್ ಭೂಪ್ರದೇಶವನ್ನು ಒಳಗೊಂಡಿದೆ.

ಇದರೊAದಿಗೆ ೮೩೪ ಹೆಕ್ಟೇರ್ ಸಾಗುವಳಿ ಭೂಮಿ, ೧೫೦ ಹೆಕ್ಟೇರ್ ಅರಣ್ಯ ಭೂಮಿ ಹಾಗೂ ೧೨೦ ಹೆಕ್ಟೇರ್ ಇತರೇ ಭೂಮಿಯನ್ನು ಒಳಗೊಂಡಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ೭ ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ೧೦ ಅಂಗನವಾಡಿ ಕೇಂದ್ರಗಳಿವೆ. ೨ ಖಾಸಗಿ ಶಾಲೆಗಳು, ೩ ವಸತಿ ಶಾಲೆಗಳು, ೨ ಹಾಲು ಉತ್ಪಾದಕರ ಸಹಕಾರ ಸಂಘಗಳೂ ಇವೆ. ವಿವಿಧ ರಾಷ್ಟಿçÃಕೃತ ಬ್ಯಾಂಕು ಗಳಿವೆ. ರಾಜ್ಯದಲ್ಲಿ ಎರಡನೆಯದು ಎಂಬ ಹೆಗ್ಗಳಿಕೆಯ ಸೈನಿಕ ಶಾಲೆ ಹಾಗೂ ಸರ್ಕಾರಿ ಕ್ರೀಡಾ ಶಾಲೆಗಳಿವೆ.

೨೫೦ ಕೈಗಾರಿಕಾ ಘಟಕಗಳಿವೆ

ಇದೇ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ೪೦೦ ಎಕರೆ ವಿಶಾಲ ವಿಸ್ತೀರ್ಣದ ಜಿಲ್ಲೆಯ ಏಕೈಕ ಕೈಗಾರಿಕಾ ಪ್ರದೇಶವಿದೆ.

ಹಾಗೆಯೇ ೨೫೦ ವಿವಿಧ ಬಗೆಯ ಕೈಗಾರಿಕೆಗಳು ಇದ್ದು ಸಾವಿರಾರು ಮಂದಿಗೆ ಉದ್ಯೋಗ ನೀಡಿವೆ.

ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಗಳ ನೂರಾರು ಮಂದಿ ಈ ಕೈಗಾರಿಕಾ ಪ್ರದೇಶಕ್ಕೆ ವಲಸೆ ಬಂದು ಇಲ್ಲಿನ ಕೈಗಾರಿಕಾ ಘಟಕಗಳಲ್ಲಿ ಉದ್ಯೋಗ ಕಂಡು ಕೊಂಡು ವಾಸಿಸುತ್ತಿದ್ದಾರೆ.

ಇಲ್ಲಿನ ವಿವಿಧ ಕಾಫಿ ಸಂಸ್ಕರಣಾ ಘಟಕಗಳು ವಾರ್ಷಿಕ ೪ ಸಾವಿರ ಕೋಟಿಗಳಷ್ಟು ವಾಣಿಜ್ಯ ವ್ಯವಹಾರ ನಡೆಸುತ್ತಿವೆ.

೨೦ ಕ್ಕೂ ಹೆಚ್ಚು ಬಡಾವಣೆಗಳಿವೆ

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦ಕ್ಕೂ ಅಧಿಕ ಬಡಾವಣೆಗಳಿದ್ದು ಕುಶಾಲ ನಗರ ಪಟ್ಟಣ ಈ ಪಂಚಾಯಿತಿಯ ವ್ಯಾಪ್ತಿಗೂ ತನ್ನ ಬೆಳವಣಿಗೆಯ ಛಾಪು ಮೂಡಿಸಿದೆ. ಅಂದರೆ ಎಲ್ ಆಕಾರದಲ್ಲಿ ಸುತ್ತಲೂ ಕಾವೇರಿ ನದಿ ಕುಶಾಲನಗರದಲ್ಲಿ ಹರಿದಿರುವ ಕಾರಣ ಇಲ್ಲಿನ ಜನಸಂಖ್ಯೆಯ ಬೆಳವಣಿಗೆ ಹೆಚ್ಚಾದಂತೆ ನಿವೇಶನ ಹಾಗೂ ವಸತಿ ಸಮುಚ್ಛಯಗಳು ಈ ಪಂಚಾಯಿತಿಯ ವ್ಯಾಪ್ತಿಗು ವಿಸ್ತರಿಸಿವೆ.

ಪಂಚಾಯಿತಿ ಕಚೇರಿಯ ಸಮೀಕ್ಷೆಯಂತೆ ಪ್ರಸಕ್ತ ಪಂಚಾಯಿತಿ ವ್ಯಾಪ್ತಿಯಲ್ಲಿ ೧೨ ಸಾವಿರ ಜನಸಂಖ್ಯೆ ಇದೆ. ಅಂದರೆ ೬೫೦೦ ಪುರುಷರು ಹಾಗೂ ೫೮೦೦ ಮಹಿಳೆಯರು ಇಲ್ಲಿ ನೆಲೆಸಿದ್ದಾರೆ.

ಪಂಚಾಯಿತಿಯ ವ್ಯಾಪ್ತಿಯ ಜನವಸತಿ ಪ್ರದೇಶದ ಸ್ವಚ್ಛತೆಗೆ ೨೫ ಮಂದಿ ಸ್ವಚ್ಛತಾ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ

೨೦೦೯ ರಲ್ಲಿ ಪ್ರಸ್ತಾವನೆ

ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಅಗತ್ಯವುಳ್ಳ ಎಲ್ಲಾ ಮಾನದಂಡಗಳನ್ನು ಒಳ ಗೊಂಡಿರುವ ಕೂಡುಮಂಗಳೂರು ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಬೇಕೆಂದು ೨೦-೦೭-೨೦೦೯ ರಲ್ಲಿ ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಕೆ.ಪಿ. ಕೃಷ್ಣ ನೇತೃತ್ವದ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮೊದಲ ಪ್ರಸ್ತಾವನೆ ಸಲ್ಲಿಸಿತ್ತು.

ಹಾಗೆಯೇ ೩೧-೧೨-೨೦೧೯ ರಲ್ಲಿ ಎರಡನೇ ಬಾರಿಗೆ ಅಂದಿನ ಅಧ್ಯಕ್ಷರಾಗಿದ್ದ ಕೆ.ಸಿ. ಲಕ್ಷಿö್ಮ ನೇತೃತ್ವದ ಆಡಳಿತ ಮಂಡಳಿಯೂ ಕೂಡ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಪಟ್ಟಣ ಪಂಚಾಯಿತಿಯ ಹಕ್ಕೊತ್ತಾಯ ಮಂಡಿಸಿತ್ತು.

ಹೋರಾಟ ಸಮಿತಿ ರಚನೆ

ಕುಶಾಲನಗರ ತಾಲೂಕು ಕೇಂದ್ರದಿAದ ಕೇವಲ ನಾಲ್ಕು ಕಿಮೀ ದೂರದಲ್ಲಿರುವ ಹಾಗೂ ಎಲ್ಲಾ ಮಾನದಂಡಗಳನ್ನು ಒಳಗೊಂಡ ಕೂಡುಮಂಗಳೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆ ಗೇರಿಸಲೇಬೇಕೆಂದು ಪಣ ತೊಟ್ಟ ಸ್ಥಳೀಯ ಕೆಲವು ಸಮಾನ ಮನಸ್ಕರು ಸೇರಿ "ಪಟ್ಟಣ ಪಂಚಾಯಿತಿ ಹೋರಾಟ ಸಮಿತಿ"ಯನ್ನು ರಚಿಸಲಾಗಿತ್ತು. ಈ ಸಮಿತಿಯ ಸಂಚಾಲಕರಾಗಿ ನಿವೃತ್ತ ಯೋಧ ಉದ್ಯಮಿ ಕೆ. ವರದ, ಪ್ರಧಾನ ಕಾರ್ಯದರ್ಶಿಯಾಗಿ ವಕೀಲ ಭರತ್ ಮಾಚಯ್ಯ ಹಾಗೂ ಹಾಲಿ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಅವರನ್ನು ಒಳಗೊಂಡು ಕೆಲವರನ್ನು ಸೇರಿಸಿ ಹಲವು ಸುತ್ತಿನ ಸಭೆಗಳನ್ನು ನಡೆಸಿ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಕಚೇರಿಯ ಮೂಲಕ ತಲುಪಿಸುವ ಪ್ರಯತ್ನ ವ್ಯರ್ಥವಾಯಿತು.

ಶಾಸಕ ಅಪ್ಪಚ್ಚು ರಂಜನ್ ನೇರವಾಗಿ ಸಂಬAಧಿಸಿದ ಇಲಾಖೆಗಳ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಗಂಭೀರ ವಾಗಿ ಚರ್ಚಿಸಿದ್ದರೆ ಈ ಹೋರಾಟಕ್ಕೆ ಒಂದು ತಾರ್ಕಿಕ ಸ್ವರೂಪ ದೊರಕುತ್ತಿತ್ತು ಎಂಬುದು ಸ್ಥಳೀಯ ಅನಿಸಿಕೆ.

ಪಕ್ಷಾತೀತವಾಗಿ ಹೋರಾಟ ಸಮಿತಿ ರಚಿಸಲಾಗಿದೆ. ನಮ್ಮ ಹೋರಾಟಕ್ಕೆ ಜಯ ಸಿಗುವವರೆಗೂ ನಾವು ನಮ್ಮ ಹೋರಾಟ ಕೈಬಿಡುವು ದಿಲ್ಲ ಎಂದು ಹೋರಾಟ ಸಮಿತಿ ಸಂಚಾಲಕ ಕೆ.ವರದ ಹೇಳುತ್ತಾರೆ.

ನಮ್ಮ ಶಾಸಕರ ಜೊತೆ ನಾವು ಈಗಲು ನಿರಂತರ ಸಂಪರ್ಕ ದಲ್ಲಿಯೇ ಇದ್ದೇವೆ. ಶಾಸಕರ ಪ್ರಯತ್ನದಿಂದ ನಮ್ಮ ಹೋರಾಟಕ್ಕೆ ಫಲ ದೊರಕೇ ದೊರಕುತ್ತೆ ಎಂದು ಪಂಚಾಯಿತಿ ಅಧ್ಯಕ್ಷೆ ಇಂದಿರಾ ಹೇಳುತ್ತಾರೆ.

ಒಟ್ಟಿನಲ್ಲಿ ಕೂಡುಮಂಗಳೂರು ಗ್ರಾಮವನ್ನು ಮೇಲ್ದರ್ಜೆ ಗೇರಿಸುವ ನಿಟ್ಟಿ ನಲ್ಲಿ ಇನ್ನಾದರೂ ಸಂಬAಧಿಸಿದವರು ಕಾರ್ಯಪ್ರವೃತ್ತರಾಗಬೇಕಿದೆ.

- ವಿಶೇಷ ವರದಿ:

ಕೆ.ಎಸ್. ಮೂರ್ತಿ