ಮಡಿಕೇರಿ, ಡಿ. ೨೧: ಅರಮನೆ ಪಾಲೆ ಸಮಾಜದ ಪ್ರತಿಭೆಗಳಾದ ರಾಷ್ಟಿçÃಯ ಜೂನಿಯರ್ ಮಹಿಳೆಯರ ಹಾಕಿ ತಂಡದ ಗೋಲ್ ಕೀಪರ್ ಕಕ್ಕಬ್ಬೆಯ ಪಿ.ಡಿ. ಶ್ರಾವ್ಯ ಮತ್ತು ೨೦೧೯-೨೦ನೇ ಸಾಲಿನ ೧೦ನೇ ತರಗತಿ ಪರೀಕ್ಷೆಗಳಲ್ಲಿ ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸಿ ಶೇ. ೯೫ ಅಂಕಗಳೊAದಿಗೆ ದ್ವಿತೀಯ ಸ್ಥಾನ ಪಡೆದ ಮತ್ತು ೨೦೨೨ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ. ೯೦ ಅಂಕಗಳನ್ನು ಗಳಿಸಿದ ಹಾಕತ್ತೂರಿನ ಪಿ.ಎಸ್. ಕವನ ಇವರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಮೂರ್ನಾಡುವಿನಲ್ಲಿ ಏರ್ಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಸಮಾಜ ಸೇವಕರಾದ ಡಾ. ಮಂಥರ್ ಗೌಡ, ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕ ಅನಂತಶಯನ ಮತ್ತು ಹಾಕತ್ತೂರು ವ್ಯವಸಾಯ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಮಂಞÂರ ಸಾಬು ತಿಮ್ಮಯ್ಯ ಇವರುಗಳು ಉಪಸ್ಥಿತರಿದ್ದರು. ಸಮಾಜದ ಅತ್ಯುತ್ತಮ ಗ್ರಾಮ ಸಮಿತಿ ಪೇರುರೂ, ನಾಪೋಕ್ಲು ಅಧ್ಯಕ್ಷ ಮುತ್ತಪ್ಪ ಪೇರುರೂ, ಸಮಾಜದ ಅಧ್ಯಕ್ಷ ಚೇನಿಯ ನಾಪೋಕ್ಲು, ಕಾರ್ಯದರ್ಶಿ ಹಾಕತ್ತೂರಿನ ಪಿ.ಬಿ. ದೇವಯ್ಯ, ಹಿರಿಯ ರಾದ ಹಾಕತ್ತೂರಿನ ಪಿ.ಎ. ಕುಟ್ಟಪ್ಪ ಇವರುಗಳನ್ನು ಸನ್ಮಾನಿಸಲಾಯಿತು. ಸಮಾಜದ ಪದಾಧಿಕಾರಿಗಳಾದ ಚೆಯ್ಯಂಡಾಣೆಯ ಗಣೇಶ್, ಬಾಳು ಗೋಡುವಿನ ಸುಭಾಶ್, ನೆಲಜಿಯ ಜೋಯಪ್ಪ, ಪೇರುರೂವಿನ ವಿಶ್ವನಾಥ್, ಮಾದಾಪುರದ ಪಾಪಣ್ಣ, ಮುತ್ತಾರ್ಮುಡಿಯ ಲೋಕೇಶ್, ಚೆಯ್ಯಂಡಾಣೆಯ ಪಾರ್ವತಿ, ಚೆಯ್ಯಂಡಾಣೆಯ ಭಾರತಿ, ಪೇರುರೂವಿನ ಸುಶೀಲ, ಕುಂಜಿಲ ಗ್ರಾಮದ ಮಂಜುನಾಥ್, ಬಾಳು ಗೋಡುವಿನ ಯತೀಶ್, ನಾಪೋಕ್ಲು ವಿನ ಸುಬ್ಬಯ್ಯ, ಹಾಕತ್ತೂರುವಿನ ಹರಿಣಿ, ಕಂಡಿಮಕ್ಕಿಯ ಗೋಪು, ಮಧು, ಮುಕ್ಕೋಡ್ಲುವಿನ ಸರಿತಾ, ಮುತ್ತಾರ್ಮುಡಿಯ ವಸಂತ, ಹಾಕತ್ತೂ ರುವಿನ ರಘು, ಮುತ್ತಾರ್ಮುಡಿಯ ಪ್ರವೀಣ್ ಮುಂತಾದವರು ಉಪಸ್ಥಿತ ರಿದ್ದರು. ಸಮಾಜದ ಸಂಚಾಲಕ ಪಿ.ಕೆ. ಮಂದಣ್ಣ ನಿರೂಪಿಸಿದರು.