ಮಡಿಕೇರಿ, ಡಿ. ೨೧: ಮಡಿಕೇರಿ ನಗರಸಭೆಯ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ವಿವಿಧ ಮಾನದಂಡ ಗಳನ್ನು ಅಳವಡಿಸಿ ಕೊಂಡು ಘನತ್ಯಾಜ್ಯ ನಿಯಮ ೨೦೧೬ರನ್ನು ಅನುಷ್ಠಾನ ಗೊಳಿಸುತ್ತಿದ್ದು, ಶೇ. ೧೦೦ ಮೂಲ ದಲ್ಲಿಯೇ ತ್ಯಾಜ್ಯ ವಿಂಗಡಣೆ ಕಾರ್ಯವನ್ನು ಅನುಷ್ಠಾನ ಮಾಡುವ ಕುರಿತು ಕ್ರಮವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಡಿಕೇರಿ ನಗರಸಭೆ ವತಿಯಿಂದ ಮನೆಯಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಡಿತಗೊಳಿಸುವ ಬಗ್ಗೆ, ವಿವಿಧ ತ್ಯಾಜ್ಯಗಳನ್ನು ಮರುಬಳಕೆ ಮಾಡುವ ಬಗ್ಗೆ, ತ್ಯಾಜ್ಯಗಳ ಪುನರ್ ಬಳಕೆ ಮಾಡುವ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಲು ಕ್ರಮವಹಿಸಲಾಗುತ್ತಿದೆ. ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಉಪಯೋಗಿಸಿಕೊಂಡು ಗೊಬ್ಬರ ತಯಾರಿಸಿ ಮನೆ ಅಂಗಳದ ಗಾರ್ಡನ್‌ಗೆ ಬಳಕೆ ಮಾಡಿಕೊಳ್ಳುವ ವಿಧಾನವನ್ನು ಹೋಂ ಅಥವಾ ಪೈಪ್ ಕಾಂಪೋ ಟೋಸ್ಟಿಂಗ್ ಎಂದು ಕರೆಯಲಾಗುವುದು.

ಈ ಕುರಿತು ಹೆಚ್ಚಿನ ಮಾಹಿತಿಗೆ hಣಣಠಿ://ತಿತಿತಿ.ಥಿouಣube.ಛಿom/ತಿಚಿಣಛಿh?v = bv೨_g೮hಞಞ೧s ಹಾಗೂ ಕಚೇರಿಯ ಆರೋಗ್ಯ ಶಾಖೆಯಲ್ಲಿ ಸಾರ್ವಜನಿಕರು ಸಂಪರ್ಕಿಸಬಹುದು. ಪಟ್ಟಣದ ಸಾರ್ವಜನಿಕರು ಈ ಪದ್ಧತಿಯನ್ನು ಅಳವಡಿಸಿಕೊಂಡು ತ್ಯಾಜ್ಯ ನಿಯಂತ್ರಣಕ್ಕೆ ನಗರಸಭೆಯೊಂದಿಗೆ ಕೈಜೋಡಿಸಿ ಸಮರ್ಪಕವಾಗಿ ೩ ಸೂತ್ರ ಅನುಷ್ಠಾನಗೊಳಿಸಲು ಹಾಗೂ ಸ್ವಚ್ಛ ಸರ್ವೇಕ್ಷಣೆ ೨೦೨೩ ರಲ್ಲಿ ಭಾಗವಹಿಸಿ ನಗರಸಭೆಗೆ ಉತ್ತಮ ಶ್ರೇಯಾಂಕ ಪಡೆಯಲು ಸಂಪೂರ್ಣ ಸಹಕಾರ ನೀಡಲು ಸಾರ್ವಜನಿಕರಲ್ಲಿ ಕೋರಿದೆ.