ಹೊದ್ದೂರು. ಡಿ. ೨೧: “ಹಣ್ಣಿನ ರಾಜ” ಎಂಬ ಪ್ರಖ್ಯಾತಿ ಪಡೆದಿರುವ ಮಾವಿನ ಕಾಯಿ ಮತ್ತು ಹಣ್ಣುಗಳು ಕೊಡಗಿನ ಮಾರುಕಟ್ಟೆಗೆ ಕಾಲಿರಿಸಿವೆ. ವರ್ಷವಿಡೀ ಭರ್ಜರಿ ಮಾರುಕಟ್ಟೆ ಪಡೆದಿರುವ ಮಾವನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿರುವ ದೃಶ್ಯ ಗೋಚರವಾಗಿದೆ. ಅವಧಿಗೆ ಮುನ್ನ ಮಾರುಕಟ್ಟೆಗೆ ಆಗಮಿಸಿದ ಮಾವನ್ನು ಕಂಡು ಗ್ರಾಹಕರು ಆಶ್ಚರ್ಯಚಕಿತರಾಗಿದ್ದಾರೆ.

ಖರೀದಿದಾರರ ಮೆಚ್ಚುಗೆ: ಕರ್ನಾಟಕ ರಾಜ್ಯಕ್ಕೆ ನೆರೆಯ ಹೊದ್ದೂರು. ಡಿ. ೨೧: “ಹಣ್ಣಿನ ರಾಜ” ಎಂಬ ಪ್ರಖ್ಯಾತಿ ಪಡೆದಿರುವ ಮಾವಿನ ಕಾಯಿ ಮತ್ತು ಹಣ್ಣುಗಳು ಕೊಡಗಿನ ಮಾರುಕಟ್ಟೆಗೆ ಕಾಲಿರಿಸಿವೆ. ವರ್ಷವಿಡೀ ಭರ್ಜರಿ ಮಾರುಕಟ್ಟೆ ಪಡೆದಿರುವ ಮಾವನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿರುವ ದೃಶ್ಯ ಗೋಚರವಾಗಿದೆ. ಅವಧಿಗೆ ಮುನ್ನ ಮಾರುಕಟ್ಟೆಗೆ ಆಗಮಿಸಿದ ಮಾವನ್ನು ಕಂಡು ಗ್ರಾಹಕರು ಆಶ್ಚರ್ಯಚಕಿತರಾಗಿದ್ದಾರೆ.

ಖರೀದಿದಾರರ ಮೆಚ್ಚುಗೆ: ಕರ್ನಾಟಕ ರಾಜ್ಯಕ್ಕೆ ನೆರೆಯ ಕೊಳ್ಳುತ್ತಿದ್ದಾರೆ. ನೀರಾವರಿ ಪ್ರದೇಶಗಳಲ್ಲಿ ಶೀಘ್ರವಾಗಿ ಇಳುವರಿ ಬರುವ ಮಾವನ್ನು ಬೆಳೆಯುತ್ತಿದ್ದಾರೆ. ಇದರಲ್ಲಿ ಕೆಲವು ತಳಿಗಳು ಅವಧಿಗೂ ಮುನ್ನ ಇಳುವರಿ ನೀಡಬಲ್ಲವು ! ಎಂದು ವರ್ತಕ ಶೇಖರ್ “ಶಕ್ತಿ” ಗೆ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಇದೀಗ ಹೂ : ಕರ್ನಾಟಕ ರಾಜ್ಯದಲ್ಲಿ ಇದೀಗ ಮಾವಿನ ಹೂ ಅರಳಲು ಆರಂಭವಾಗಿದೆ. ಈ ಬಾರಿ ರಾಜ್ಯದಲ್ಲಿ ಅತ್ಯುತ್ತಮ ಇಳುವರಿ ನಿರೀಕ್ಷಿಸಲಾಗಿದೆ. ಅದು ಯುಗಾದಿ ಹಬ್ಬದ ವೇಳೆಗೆ ಮಾರುಕಟ್ಟೆ ಪ್ರವೇಶಿಸಬಹುದೆಂಬ ವಿಶ್ವಾಸ ಹೊಂದಲಾಗಿದೆ. ಈ ವರ್ಷ ರಾಜ್ಯದಲ್ಲಿ ಸುಮಾರು ೧೨ ಲಕ್ಷ ಟನ್ ಇಳುವರಿಯ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ. ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಉತ್ತರ ಕರ್ನಾಟಕದ ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಮಾವನ್ನು ಬೆಳೆಯಲಾಗುತ್ತಿದೆ.

- ಕೂಡಂಡ ರವಿ, ಹೊದ್ದೂರು