ಮಡಿಕೇರಿ, ಡಿ. ೨೧: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬAಧಿಸಿದAತೆ ವ್ಯಕ್ತಿಯೋರ್ವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆರೋಪಿ ಕೆ.ಎಸ್. ಅಯ್ಯಪ್ಪ ಎಂಬವರಿಗೆ ರೂ. ೧೮ ಲಕ್ಷ ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಪೊನ್ನಂಪೇಟೆ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

ಪೊನ್ನಂಪೇಟೆ ಜೋಡುಬೀಟಿ ನಿವಾಸಿ ಎನ್.ಜಿ. ಅಜಿತ್ ದೇವಯ್ಯ ಅವರಿಂದ ೨೦೧೮ ರಲ್ಲಿ ಚೆನ್ನಂಗಿ ಗ್ರಾಮದ ಕೆ.ಎಸ್. ಅಯ್ಯಪ್ಪ ಎಂಬವರು ರೂ. ೧೮ ಲಕ್ಷ ಸಾಲ ಪಡೆದು ಮರುಪಾವತಿಗೆ ಎರಡು ಚೆಕ್ ನೀಡಿ ಸದ್ರಿ ಚೆಕ್ಕು ಅಮಾನ್ಯಗೊಂಡ ಕಾರಣ ಅಜಿತ್ ದೇವಯ್ಯ ಅವರು ಪೊನ್ನಂಪೇಟೆ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶೆ ಆಶಾ ಅವರು ಆರೋಪಿ ಕೆ.ಎಸ್. ಅಯ್ಯಪ್ಪ ಅವರಿಗೆ ರೂ. ೧೮ ಲಕ್ಷ ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದು ದಂಡ ಕಟ್ಟಲು ತಪ್ಪಿದರೆ ೩ ತಿಂಗಳು ಹೆಚ್ಚು ಜೈಲು ಶಿಕ್ಷೆ ಅನುಭವಿಸುವಂತೆ ಮತ್ತು ದಂಡದಲ್ಲಿ ರೂ. ೫೦೦೦ ವನ್ನು ಸರಕಾರಕ್ಕೆ ಪಾವತಿಸುವಂತೆ ಆದೇಶ ಮಾಡಿದ್ದಾರೆ. ಅರ್ಜಿದಾರರ ಪರ ವಕೀಲ ಮತ್ತು ನೋಟರಿ ಎಂ.ಟಿ. ಕಾರ್ಯಪ್ಪ ವಾದ ಮಂಡಿಸಿದ್ದರು.