ಪೊನ್ನಂಪೇಟೆ, ಡಿ.೨೧: ಬಿಟ್ಟಂಗಾಲ ಸಮೀಪದ ಕುತ್ತುನಾಡು ಮತ್ತು ಬೇರಳಿನಾಡು ವ್ಯಾಪ್ತಿಯ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮೇಚಿಯಂಡ, ಚಂದೂರ, ಅಪ್ಪಂಡೇರAಡ ಮತ್ತು ಕೊಂಗAಡ ತಂಡಗಳು ಸೆಮಿಫೈನಲ್ಸ್ ಹಂತಕ್ಕೆ ಪ್ರವೇಶ ಪಡೆದುಕೊಂಡಿವೆೆ. ಈ ನಾಲ್ಕು ತಂಡಗಳು ತಾ. ೨೨ ರಂದು (ಇಂದು) ಜರುಗಲಿರುವ ಸೆಮಿಫೈನಲ್ಸ್ನಲ್ಲಿ ಪ್ರಶಸ್ತಿಯ ಗೆಲುವಿಗಾಗಿ ಹೋರಾಟ ನಡೆಸಲಿದೆ.

ಕಂಡAಗಾಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕುತ್ತುನಾಡು ಮತ್ತು ಬೇರಳಿನಾಡು ವ್ಯಾಪ್ತಿಯ ಕೌಟುಂಬಿಕ ಹಾಕಿ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ಸ್ ಪಂದ್ಯಗಳು ಪ್ರೇಕ್ಷಕರಲ್ಲಿ ರೋಚಕತೆ ಸೃಷ್ಟಿಸುವಲ್ಲಿ ಯಶಸ್ವಿಯಾಯಿತು. ಬಲಿಷ್ಠ ಅಪ್ಪಂಡೇರAಡ ತಂಡದ ಪರವಾಗಿ ಆಡುತ್ತಿರುವ ಅತಿಥಿ ಆಟಗಾರ, ಅಂತರಾಷ್ಟಿçÃಯ ಖ್ಯಾತಿಯ ಆಭರಣ್ ಸುದೇವ್ ಪಂದ್ಯಾವಳಿಯುದ್ಧಕ್ಕೂ ವಿಶೇಷವಾಗಿ ಗಮನ ಸೆಳೆದರಲ್ಲದೆ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದರು.

ಮೊದಲ ಕ್ವಾರ್ಟರ್ ಫೈನಲ್ಸ್ ಪಂದ್ಯಾವಳಿಯಲ್ಲಿ ಮೇಚಿಯಂಡ ತಂಡ ಕಡೇಮಾಡ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು. ಮೇಚಿಯಂಡ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಒಂದನ್ನು ಅತಿಥಿ ಆಟಗಾರ ಮಂಜುನಾಥ್ ಸಮರ್ಥವಾಗಿ ಬಳಸಿಕೊಂಡು ೨೨ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

೨ನೇ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಚಂದೂರ ತಂಡ ಮಳವಂಡ ತಂಡವನ್ನು ೫-೦ ಗೋಲುಗಳಿಂದ ಸೋಲಿಸಿ ಸೆಮಿ ಫೈನಲ್ಸ್ ಪ್ರವೇಶಿಸಿತು.೩ನೇ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಅಪ್ಪಂಡೇರAಡ ತಂಡವು ಮೂಕಚಂಡ ತಂಡವನ್ನು `ಸಡನ್ ಡೆತ್'ನಲ್ಲಿ ಸೋಲಿಸಿ ಗೆಲುವಿನ ನಗೆ ಬೀರಿತು.

ಕೊಂಗAಡ ತಂಡವು ಕಾಳೆಂಗಡ ತಂಡವನ್ನು ೫-೦ ಗೋಲುಗಳಿಂದ ಮಣಿಸಿ ಸೆಮಿ ಫೈನಲ್ಸ್ ಪ್ರವೇಶಿಸಿತು.

ಬುಧವಾರದಂದು ನಡೆದ ಪಂದ್ಯಾವಳಿಯನ್ನು ಹಾಕಿ ಕೂರ್ಗ್ ಸಂಸ್ಥೆಯ ಕಾರ್ಯದರ್ಶಿಗಳಾದ ಬುಟ್ಟಿಯಂಡ ಚಂಗಪ್ಪ ಉದ್ಘಾಟಿಸಿದರು. ಕಂಡAಗಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾ ಸಮಿತಿಯ ಉಪಾಧ್ಯಕ್ಷರಾದ ಬಲ್ಲಡಿಚಂಡ ಯು. ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಂಡAಗಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾ ಸಮಿತಿಯ ಮಾಜಿ ಅಧ್ಯಕ್ಷ ಕೊಂಗAಡ ಡಬ್ಲ್ಯೂ. ಭೀಮಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕ್ರೀಡಾ ಸಮಿತಿ ಅಧ್ಯಕ್ಷ ಮುಲ್ಲೇಂಗಡ ಸಿ. ಅಶೋಕ್, ಪಂದ್ಯಾವಳಿಯ ನಿರ್ದೇಶಕ ಕುಪ್ಪಂಡ ದಿಲನ್ ಬೋಪಣ್ಣ, ಕ್ರೀಡಾ ಸಮಿತಿಯ ಪ್ರಮುಖರಾದ ಮುಲ್ಲೇಂಗಡ ನಟ್ಟು ನಾಚಪ್ಪ, ಮೇಚಿಯಂಡ ಅಪ್ಪುಟ ಮೊದಲಾದವರು ಉಪಸ್ಥಿತರಿದ್ದರು. ಮಾಳೇಟಿರ ಶ್ರೀನಿವಾಸ್ ಅವರು ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ನೀಡಿದರು.