ಮಡಿಕೇರಿ, ಡಿ. ೨೦: ಸಿಂಗಾಪುರದಲ್ಲಿ ಜರುಗಿದ ವಿಶ್ವ ಶಿಟೋರಿಯೋ ಕರಾಟೆ ಡೋ ಫೆಡರೇಷನ್ (WSಏಈ) ಆಶ್ರಯದ ತಾಂತ್ರಿಕ ಸಮಾವೇಶದಲ್ಲಿ ಬಿ. ಸಮೃದ್ ತಮ್ಮಯ್ಯ ಹಿರಿಯರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಉತ್ತಮ ಸಾಧನೆ ತೋರಿದ್ದಾರೆ.
ಅತ್ಯುತ್ತಮ ಸಾಧನೆಗಾಗಿ ಸಮೃದ್ ಅವರಿಗೆ ‘ಫಸ್ಟ್ ಡ್ಡೆನ್’ ಪ್ರಶಸ್ತಿಯನ್ನು ವಿಶ್ವ ಶಿಟೋರಿಯೋ ಕರಾಟೆ ಡೋ ಫೆಡರೇಷನ್ ಅಧ್ಯಕ್ಷ ಸೆನ್ಸೆ ಗೆಂಜೋ ಇವಾಟ ಪ್ರದಾನ ಮಾಡಿದರು.
೨೫ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಈ ಸಮಾವೇಶದಲ್ಲಿ ಭಾರತದ ಸಮೃದ್ ತಮ್ಮಯ್ಯ ಅತ್ಯಂತ ಕಿರಿಯ ಪ್ರತಿನಿಧಿಯಾಗಿದ್ದರು.
ಸಮೃದ್, ಗೋಣಿಕೊಪ್ಪ ನಿವಾಸಿ ಬೊಮ್ಮಂಡ ಜಯಂತ್ ಬೋಪಣ್ಣ ಮತ್ತು ರೇಷ್ಮಾ (ಪಟ್ಟಮಾಡ) ದಂಪತಿ ಪುತ್ರನಾಗಿದ್ದು, ಚೆಪ್ಪುಡೀರ ಅರುಣ್ ಮಾಚಯ್ಯ ಮಾರ್ಗದರ್ಶನದಲ್ಲಿ ಬೆಂಗಳೂರಿನ ಶಿಟೋರಿಯೋ ಕರಾಟೆ ಶಾಲೆಯ ಜಗದೀಶ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.